ಇದು ಬೆಂಗಳೂರಲ್ಲಿ ಮಾತ್ರ, ಸಿಗ್ನಲ್‌ನಲ್ಲಿ ನಿಂತಾಗ ಆಟೋ ಚಾಲಕನಿಂದ ಕ್ರಿಪ್ಟೋ ಟ್ರೇಡಿಂಗ್

Published : Apr 08, 2026, 03:53 PM IST
Peak Bengaluru

ಸಾರಾಂಶ

ಇದು ಬೆಂಗಳೂರಲ್ಲಿ ಮಾತ್ರ, ಸಿಗ್ನಲ್‌ನಲ್ಲಿ ನಿಂತಾದ ಆಟೋ ಚಾಲಕನಿಂದ ಕ್ರಿಪ್ಟೋ ಟ್ರೇಡಿಂಗ್, ಹಲವು ಬಾರಿ ಬೆಂಗಳೂರಿನ ಆಟೋ ಚಾಲಕರು ಟೆಕ್, ಆ್ಯಪ್ ಸೇರಿದಂತೆ ಹಲವು ಕಾರಣಗಳಿಂದ ಭಾರಿ ಸುದ್ದಿಯಾಗಿದ್ದಾರೆ. 

ಬೆಂಗಳೂರು (ಏ.08) ಪೀಕ್ ಬೆಂಗಳೂರು ಮೂವ್ಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಗಳಿಸಿದೆ. ಬೆಂಗಳೂರಿನಲ್ಲಿ ನಡೆಯುವ ಹಲವು ಘಟನೆಗಳು, ವಿಶೇಷ ಸಂದರ್ಭಗಳ ವಿಡಿಯೋ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇತರ ನಗರಗಳಲ್ಲಿ ಆಟೋ ಚಾಲಕರಿಗಿಂತ ಬೆಂಗಳೂರು ಆಟೋ ಚಾಲಕರು ತಂತ್ರಜ್ಞಾನ ಸೇರಿದಂತೆ ಎಲ್ಲಾ ವಿಚಾರದಲ್ಲಿ ಮುಂದಿದಿದ್ದಾರೆ. ಹಲವು ಬಾರಿ ಇದು ಪೀಕ್ ಬೆಂಗಳೂರು ವೂವ್ಮೆಂಟ್ ಅಡಿಯಲ್ಲಿ ಸಾಬೀತಾಗಿದೆ. ಇದೀಗ ಬೆಂಗಳೂರಿನ ಆಟೋ ಚಾಲಕ ರೆಡ್ ಸಿಗ್ನಲ್ ಬಿದ್ದಾಗ ಮೊಬೈಲ್‌ನಲ್ಲಿ ಕ್ರಿಪ್ಟೋ ಟ್ರೇಡಿಂಗ್ ನಡೆಸುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದು, ಬೆಂಗಳೂರಿನ ಆಟೋ ಚಾಲಕರು ನೆಕ್ಸ್ಟ್ ಲೆವೆಲ್ ಎಂದಿದ್ದಾರೆ.

ಶ್ರೀನಿಧಿ ಅನ್ನೋ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಶ್ರೀನಿಧಿ ಬೆಂಗಳೂರಿನ ರಸ್ತೆ ಪ್ರಯಾಣದ ನಡುವೆ ವಿಶೇಷ ಹಾಗೂ ಕುತೂಹಲ ವಿಚಾರ ಕಣ್ಣಿಗೆ ಬಿದ್ದಿದೆ. ತಕ್ಷಣವೆ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಒಂದು ಕಡೆ ಟ್ಯಾಕ್ಸಿ ಮತ್ತೊಂದೆಡೆ ಟ್ರೇಡಿಂಗ್

ವೆಗಾ ಸಿಟಿ ಮಾಲ್ ಬಳಿ ಸಿಗ್ನಲ್‌ನಲ್ಲಿ ರಾತ್ರಿ 8 ಗಂಟೆ ವೇಳೆಗೆ ಆಟೋ ಚಾಲಕ ಟ್ರೇಡಿಂಗ್‌ನಲ್ಲಿ ಬ್ಯೂಸಿಯಾಗಿರುವುದು ಪತ್ತೆಯಾಯಿತು ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಆಟೋ ಚಾಲಕ ಉಬರ್ ಹಾಗೂ ಓಲಾ ಆ್ಯಪ್ ಮೂಲಕ ಬಾಡಿಗೆ ತೆರಳುತ್ತಿದ್ದಾನೆ. ಹೀಗಾಗಿ ತನ್ನ ಮೊಬೈಲ್‌ನಲ್ಲಿ ಸ್ಕ್ರೀನ್‌ನನ್ನು ಸ್ಪ್ಲಿಟ್ ಮಾಡಿದ್ದಾನೆ. ಅರ್ಧ ಭಾಗ ಟ್ಯಾಕ್ಸಿ ನೋಟಿಫಿಕೇಶನ್ ಮತ್ತೊಂದು ಅರ್ಧ ಭಾಗದಲ್ಲಿ ಕ್ಪಿಪ್ಟೊ ಕರೆನ್ಸಿ ಟ್ರೇಡಿಂಗ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಶ್ರೀನಿಧಿ ತಮ್ಮ ಮೊಬೈಲ್‌ನಿಂದ ಈ ಕುತೂಹಲ ಕ್ಷಣವನ್ನು ಸೆರೆ ಹಿಡಿದಿದ್ದಾರೆ. ಮಧ್ಯಮ ವಯಸ್ಸಿನ ಆಟೋ ಚಾಲಕ ಸಿಗ್ನಲ್ ರೆಡ್ ಬಿದ್ದಾಗ ಇರುವ ಸಣ್ಣ ನಿಮಿಷಗಳ ಸಮಯದಲ್ಲಿ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾನೆ. ವಯಸ್ಸು ಕೇವಲ ನಂಬರ್ ಮಾತ್ರ. ಸಿಲಿಕಾನ್ ಸಿಟಿಯ ಟ್ರಾಫಿಕ್ ನಡುವೆ ಆಟೋ ಚಾಲಕ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕಡೆಯೂ ಗಮನ ನೀಡಿದ್ದಾನೆ.

ಹಲವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಹೊಸಬರಿಗಲ್ಲ. ಇಲ್ಲಿ ಪ್ರೋ ಆಗಿರಬೇಕು. ಇಲ್ಲದಿದ್ದರೆ ನೀವು ಶತಮಾನಗಳು ಹಳೆಯದಾಗುತ್ತೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಬೆಂಗಳೂರು ಆಟೋ ಚಾಲಕರು ಇತರ ಎಲ್ಲರಿಗಿಂತ ಮುಂದಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳ ಪೈಕಿ ಇದೂ ಒಂದು ಎಂದಿದ್ದಾರೆ.

 

PREV
Read more Articles on
click me!

Recommended Stories

ರಾಮನಗರ: ಓಂಕಾರೇಶ್ವರ ದೇಗುಲದ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಕೆಂಡಯೊಳಗೆ ಬಿದ್ದ ಅರ್ಚಕ!
ಕನ್ನಡ ಪರ ಹೋರಾಟಗಾರನ ಬಂಧನಕ್ಕೆ ಇಂಗ್ಲಿಷ್‌ ವಾರಂಟ್, ಒಪ್ಪದ ವಾಟಾಳ್‌ರನ್ನು ರಿಕ್ಷಾದಲ್ಲಿ ಎತ್ತಾಕ್ಕೊಂಡು ಹೋದ ಪೊಲೀಸರು!