ಸಂಭಾಜಿ ಪಾಟೀಲ್ ಪತ್ನಿ, ಬೆಂಬಲಿಗರ ದುಂಡಾವರ್ತನೆ : ಸೊಸೆ ಮೇಲೆ ಹಲ್ಲೆ

Published : May 20, 2019, 01:45 PM ISTUpdated : May 20, 2019, 01:46 PM IST
ಸಂಭಾಜಿ ಪಾಟೀಲ್ ಪತ್ನಿ, ಬೆಂಬಲಿಗರ ದುಂಡಾವರ್ತನೆ : ಸೊಸೆ ಮೇಲೆ ಹಲ್ಲೆ

ಸಾರಾಂಶ

ಇತ್ತೀಚೆಗಷ್ಟೇ ನಿಧನರಾದ  ಎಂಇಎಸ್ ಮುಖಂಡ  ಸಂಭಾಜಿ ಪಾಟೀಲ್ ಅವರ ಪತ್ನಿ ಉಜ್ವಲಾ ಬೆಂಬಲಿಗರು ಸೊಸೆ ಸಾಧನ ಹಾಗೂ ಸಂಬಂಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. 

ಬೆಳಗಾವಿ : MES ಮಾಜಿ ಶಾಸಕ ದಿವಂಹತ ಸಂಭಾಜಿ ಪಾಟೀಲ್ ಪತ್ನಿ ಬೆಂಬಗಲಿಗರು ದುಂಡಾವರ್ತನೆ ತೋರಿರುವ ಘಟನೆ ನಡೆದಿದೆ. 

ಬೆಳಗಾವಿ ತಾಲೂಕಿನ ಬೆನಕನಹಳ್ಳಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಸಂಭಾಜಿ ಪಾಟೀಲ್ ಸೊಸೆ ಸಾಧನಾ ಹಾಗೂ ಕುಟುಂಬ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. 

ಸಂಭಾಜೀ ‌ಪಾಟೀಲ್  ಎರಡನೇ ಪತ್ನಿ ಉಜ್ವಲಾ ಪಾಟೀಲ್ ಹಾಗೂ ಅವರ ಬೆಂಬಲಿಗರು ಸೇರಿ ಹಲ್ಲೆ ನಡೆಸಿದ್ದು, ಸಾಧನಾ ಸಂಬಂಧಿ ರೂಪಾಲಿ ಜುಂಜವಾಡಕರ ಎಂಬುವವರ ಕೈಗೆ ಚೂರಿಯಿಂದ ಇರಿಯಲಾಗಿದೆ. 

ಅಲ್ಲದೇ ಸಾಧನಾ ಹಾಗೂ ಆಕೆಯ ಸಹೋದರಿ ರಂಜಿತಾ ಅವರ ಮೇಲೂ ದೈಹಿಕ ಹಲ್ಲೆ ನಡೆದಿದ್ದು, ಒಟ್ಟು 8 ಮಂದಿ ಬೆಂಬಲಿಗರು ಸೇರಿ ಈ ಕೃತ್ಯ ಎಸಗಿದ್ದಾರೆ.  

ಈ ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV
click me!

Recommended Stories

ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಸಂಪ್ ಕ್ಯಾಪ್ ಕಳ್ಳತನ ಮಾಡಿ 700 ರೂಗೆ ಮಾರಾಟ, ಆರೋಪಿ ಅರೆಸ್ಟ್