ರಾಜ್ಯದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವದ ದಿನ ಒಂದು ಲಕ್ಷ ಕಪ್ಪು ಬಲೂನ್ ಹಾರಿಸಲು ಎಂಇಎಸ್ ಸಿದ್ಧತೆ ನಡೆಸಿದೆ
ಬೆಳಗಾವಿ (ಅ.28): ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಸಂಘಟಿಸುವ ಕರಾಳ ದಿನಾಚರಣೆಗೆ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವುದರಿಂದ ಹಿನ್ನೆಲೆಯಲ್ಲಿ ಕಂಗಾಲಾಗಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಒಂದು ಲಕ್ಷ ಕಪ್ಪು ಬಣ್ಣದ ಬಲೂನ್ ಹಾರಿಸಲು ಮುಂದಾಗಿದೆ.
ಈಗಾಗಲೇ ಎಂಇಎಸ್ ನಾಯಕರೇ ತಮ್ಮ ಕಾರ್ಯಕರ್ತರಿಗೆ ಬಲೂನ್ ಪೂರೈಕೆ ಮಾಡಿದ್ದಾರೆ.
ಅಲ್ಲದೇ ಕಾರ್ಯಕರ್ತರು ರಾಜ್ಯೋತ್ಸವ ದಿನದಂದು ತಮ್ಮ ಪ್ರತಿರೋದ ವ್ಯಕ್ತಪಡಿಸಲು ಕಪ್ಪು ಬಣ್ಣದ ಬಲೂನ್ ಹಾರಿಸುವಂತೆ ಕರೆ ಕೊಟ್ಟಿದ್ದಾರೆ.
65 ರಾಜ್ಯೋತ್ಸವ ಪ್ರಶಸ್ತಿಗೆ ಈಗಾಗಲೇ 500 ಅರ್ಜಿ .
ಕರಾಳ ದಿನಾಚರಣೆ ಅಂಗವಾಗಿ ಸೈಕಲ್ ರಾರಯಲಿಗೆ ಅನುಮತಿ ನೀಡದಿದ್ದರೆ, ಕಾರ್ಯಕರ್ತರು ತಮ್ಮ ಮನೆಗಳ ಚಾವಣಿ ಮೇಲಿಂದ ಕಪ್ಪು ಬಣ್ಣದ ಬಲೂನ್ ಹಾರಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಬೇಕು ಎಂದು ತಿಳಿಸಿದ್ದಾರೆ.