ಬಿಜೆಪಿ ಮುಖಂಡರೋರ್ವರ ವಿರುದ್ಧ ಕೊಳಕು ಕಮೆಂಟ್ ಮಾಡಿದ್ದು ಈ ಸಂಬಂಧ ದೂರು ದಾಖಲು ಮಾಡಲಾಗಿದೆ.
ಮಡಿಕೇರಿ (ಅ.28): ಕೊಡಗು ಜಿಲ್ಲೆಯ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಅವರು ಹೊಂದಿರುವ ಫೇಸ್‌ಬುಕ್ ಖಾತೆಗೆ ಕೆಲವು ಕಿಡಿಗೇಡಿಗಳು ಅವಾಚ್ಯ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದು, ಸೈಬರ್ ಕ್ರೈಂಗೆ ದೂರು ನೀಡಲಾಗಿದೆ.
ಲೆಪರ್ಡ್ ಫಿಫ್ಟಿಎಯ್‌್ಟಹಿಲ್ಸ್, ಟಿಪ್ಪು ಸುಲ್ತಾನ್, ಅಮ್ಮ ಕೊಡಗು ಎಂಬ ಹೆಸರಿನಲ್ಲಿ ಅವಾಚ್ಯ ಶಬ್ದಗಳಿಂದ ಕಾಮೆಂಟ್ ಹಾಕುತ್ತಿದ್ದಾರೆ. ಇಂಥ ಕಾಮೆಂಟ್ ಮಾಡುತ್ತಿರುವವರನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರ ಆಪ್ತ ಸಹಾಯಕ ಬಿ.ಎಸ್. ಪರಮೇಶ್, ಬೆಂಗಳೂರಿನ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಕೊಡಗು ಜಿಲ್ಲೆಗೆ ಸಂಬಂಧಿಸಿದ ಪೊಸ್ಟ್ ಗಳನ್ನು ಮತ್ತು ಕ್ಷೇತ್ರದ ಜನರ ಸಂಬಂಧಿತ ಶುಭಾಶಯ ತಿಳಿಸುವ ಪೋಸ್ಟ್‌ಗಳಿಗೆ ಇತ್ತೀಚಿಗೆ ಅಪರಿಚಿತ ವ್ಯಕ್ತಿಗಳಿಂದ ಅವಾಚ್ಯ ಶಬ್ದಗಳಿಂದ ಕೂಡಿದ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲಾಗುತ್ತಿದೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.