ಕನ್ನಡ ಧ್ವಜ ತೆರವುಗೊಳಿಸದಿದ್ದರೆ ಭಗವಾಧ್ವಜ ಹಾರಿಸುವ ಎಚ್ಚರಿಕೆ

Published : Jan 03, 2021, 08:26 AM IST
ಕನ್ನಡ ಧ್ವಜ ತೆರವುಗೊಳಿಸದಿದ್ದರೆ ಭಗವಾಧ್ವಜ ಹಾರಿಸುವ ಎಚ್ಚರಿಕೆ

ಸಾರಾಂಶ

ನ್ನಡ ಧ್ವಜ ತೆರವುಗೊಳಿಸದಿದ್ದರೆ ನಾವು ಭಗವಾಧ್ವಜ ಹಾರಿಸುತ್ತೇವೆ | ಡೀಸಿಗೆ ನೀಡಿದ ಮನವಿಯಲ್ಲಿ ಎಂಇಎಸ್‌ ಎಚ್ಚರಿಕೆ

ಬೆಳಗಾವಿ(ಜ.03): ಸರ್ಕಾರಿ ಕಚೇರಿಯ ಆವರಣದ ಮುಂಭಾಗದಲ್ಲಿ ಯಾವುದೇ ಅನಧಿಕೃತ ಧ್ವಜ ಇರಬಾರದು ಎಂದು ಹೈಕೋರ್ಟ್‌ ಆದೇಶವಿದ್ದರೂ, ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕೆಂಪು, ಹಳದಿ ಬಾವುಟ ಹಾರಿಸಲಾಗಿದೆ.

ಇದು ಕಾನೂನುಬಾಹಿರ. ಅದನ್ನು ಜಿಲ್ಲಾಡಳಿತ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಶನಿವಾರ ಎಂಇಎಸ್‌ ಕಾರ್ಯಕರ್ತರು ಮತ್ತೆ ಕ್ಯಾತೆ ತೆಗೆದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

400 ಮಂದಿಗೆ ಕೋವಿಡ್‌ ಲಸಿಕೆ ವಿತರಣೆ ತಾಲೀಮು

ಸ್ಥಳೀಯ ರಾಜಕೀಯ ಪ್ರಭಾವದಿಂದ ಬೆರಳೆಣಿಕೆಯಷ್ಟುಕನ್ನಡ ಸಂಘಟನೆಯವರು ಪ್ರಚಾರ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯ ಆವರಣದ ರಾಷ್ಟ್ರ ಧ್ವಜದ ಎದುರು ಅನಧಿಕೃತವಾಗಿ ಕೆಂಪು, ಹಳದಿ ಬಾವುಟ ನೆಟ್ಟು ಉದ್ಧಟತನ ಮೆರೆದಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ಅದರ ಪಕ್ಕದಲ್ಲಿಯೇ ಭಾಗವಾ ಧ್ವಜ ಹಾಕುವುದಾಗಿ ಹೇಳಿತ್ತು. ಆದರೆ ಜಿಲ್ಲಾಡಳಿತ ಸೂಚನೆ ಮೇರೆಗೆ ನಾವು ಸುಮ್ಮನಿದ್ದೇವೆ. ಕೆಲ ಕನ್ನಡ ಸಂಘಟನೆಯವರು ಪುಂಡಾಟಿಕೆ ಮಾಡುವುದರ ಮೂಲಕ ಪಾಲಿಕೆ ಎದುರು ಕೆಂಪು, ಹಳದಿ ಧ್ವಜ ಹಾಕಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಲ್ಲದೆ ಪೊಲೀಸರಿಗೆ ತೊಂದರೆ ಮಾಡಿದ್ದಾರೆ. ಕೂಡಲೇ ಆ ಧ್ವಜ ತೆರವುಗೊಳಿಸದಿದ್ದರೆ ಭಾಗವಾ ಧ್ವಜ ಹಾರಿಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ