ಮೈಸೂರು - ಬೆಂಗಳೂರು ನಡುವೆ ಮೆಮು ರೈಲು ಪುನರಾರಂಭ

By Kannadaprabha NewsFirst Published Jun 18, 2021, 11:24 AM IST
Highlights
  • ರಾಜ್ಯದ ಹಲವು ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲ
  • ಶೀಘ್ರ ಮೈಸೂರು ವಿಭಾಗವು ಹೆಚ್ಚುವರಿ ಕಾಯ್ದಿರಿಸದ ಮೆಮು ರೈಲು ಸೇರಿ ಹಲವು ರೈಲು ಸೇವೆ ಪುನರಾರಂಭ
  • ರೈಲುಗಳು ಕೋವಿಡ್‌ನ ಪೂರ್ವ ವೇಳಾಪಟ್ಟಿ ಮತ್ತು ನಿಲುಗಡೆಯೊಂದಿಗೆ ಚಲಿಸಲಿವೆ

 ಮೈಸೂರು (ಜೂ.18):  ರಾಜ್ಯದ ಹಲವು ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿರುವುದರಿಂದ ನೈಋುತ್ಯ ರೈಲ್ವೆ ಮೈಸೂರು ವಿಭಾಗವು ಹೆಚ್ಚುವರಿ ಕಾಯ್ದಿರಿಸದ ಮೆಮು ರೈಲು ಸೇರಿ ಹಲವು ರೈಲು ಸೇವೆ ಪುನರಾರಂಭಿಸಲು ತೀರ್ಮಾನಿಸಿದೆ.

ಈ ರೈಲುಗಳು ಕೋವಿಡ್‌ನ ಪೂರ್ವ ವೇಳಾಪಟ್ಟಿಮತ್ತು ನಿಲುಗಡೆಯೊಂದಿಗೆ ಚಲಿಸುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ನಿಯಮವನ್ನು ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯಾಣಿಕರಿಗೆ ಕೋರಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ಮೈಸೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ಲಕ್ಷೀ ಚಿತ್ರಮಂದಿರ! .

ರಾಜ್ಯರಾಣಿ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 10.35ಕ್ಕೆ ಬೆಂಗಳೂರಿನಿಂದ ಹೊರಟು, ಮೈಸೂರಿಗೆ ಮಧ್ಯಾಹ್ನ 1.20ಕ್ಕೆ ತಲುಪಲಿದೆ. ಅಂತೆಯೇ ಮೈಸೂರಿನಿಂದ 2.40ಕ್ಕೆ ಹೊರಟು ಸಂಜೆ 5.10ಕ್ಕೆ ಬೆಂಗಳೂರು ತಲುಪಲಿದೆ. ಚಾಮುಂಡಿ ಎಕ್ಸಪ್ರೆಸ್‌ ಮೆಮು ಸಂಜೆ 6.25ಕ್ಕೆ ಬೆಂಗಳೂರಿನಿಂದ ಹೊರಟು, ರಾತ್ರಿ 9.05ಕ್ಕೆ ಮೈಸೂರಿಗೆ ತಲುಪಲಿದೆ. ಇದೇ ರೈಲು ಬೆಳಗ್ಗೆ 7 ಗಂಟಗೆ ಮೈಸೂರಿನಿಂದ ಹೊರಟು, 9.30ಕ್ಕೆ ಬೆಂಗಳೂರು ತಲುಪಲಿದೆ. ರಾತ್ರಿ 12.45 ನಿಮಿಷಕ್ಕೆ ಬೆಂಗಳೂರಿನಿಂದ ಹೊರಟು, ಮೈಸೂರಿಗೆ ಮುಂಜಾನೆ 4.30ಕ್ಕೆ ಬರಲಿದೆ. ಇದೇ ರೈಲು ರಾತ್ರಿ 9.30ಕ್ಕೆ ಮೈಸೂರಿನಿಂದ ಹೊರಟು, ರಾತ್ರಿ 12.15ಕ್ಕೆ ಬೆಂಗಳೂರು ತಲುಪಲಿದೆ.

3322 ಅಪ್ರೆಂಟಿಸ್ ಹುದ್ದೆಗಳಿಗೆ ದಕ್ಷಿಣ ಮಧ್ಯೆ ರೈಲ್ವೆ ಅರ್ಜಿ ಆಹ್ವಾನ

ಅಂತೆಯೇ ಟಿಪ್ಪು ಎಕ್ಸ್‌ಪ್ರೆಸ್‌ ರೈಲು ಮೈಸೂರಿನಿಂದ ಬೆಳಗ್ಗೆ 11.30ಕ್ಕೆ ಹೊರಟು, ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ತಲುಪಲಿದೆ. ಇದೇ ರೈಲು ಮಧ್ಯಾಹ್ನ 3.15ಕ್ಕೆ ಹೊರಟು, ಸಂಜೆ 5.45ಕ್ಕೆ ಮೈಸೂರಿಗೆ ಬರಲಿದೆ. ಇಂಟರ್‌ಸಿಟಿ ರೈಲು ಬೆಂಗಳೂರು, ತಾಳಗುಪ್ಪ, ಧಾರವಾಡ, ಬೆಂಗಳೂರು, ಶಿವಮೊಗ್ಗ ನಡುವೆ ಸಂಚರಿಸಲಿದೆ. ಮೈಸೂರು ಕೊಚ್ಚುವೆಲ್ಲಿ ರೈಲು ಸಂಜೆ 4.45ಕ್ಕೆ ಕೊಚ್ಚುವೆಲಿಯಿಂದ ಹೊರಟು ಮೈಸೂರಿಗೆ ಮಾರನೆಯ ದಿನ ಬೆಳಗ್ಗೆ 11.20ಕ್ಕೆ ಆಗಮಿಸಲಿದೆ. ಅದೇ ರೈಲು ಮಧ್ಯಾಹ್ನ 12.50ಕ್ಕೆ ಮೈಸೂರಿನಿಂದ ಹೊರಟು, ಕೊಚ್ಚುವೆಲ್ಲಿಗೆ ಮಾರನೆಯ ದಿನ ಬೆಳಗ್ಗೆ 9.20ಕ್ಕೆ ತಲುಪಲಿದೆ. ಮೈಸೂರಿನಿಂದ ಬಾಗಲಕೋಟೆಗೆ ಹೊರಡುವ ಬಸವ ಎಕ್ಸ್‌ಪ್ರೆಸ್‌ ರೈಲು ಮಧ್ಯಾಹ್ನ 1.30ಕ್ಕೆ ಹೊರಟು, ಮಾರನೆ ದಿನ ಬೆಳಗ್ಗೆ 11.10ಕ್ಕೆ ಬೆಂಗಳೂರು ತಲುಪಲಿದೆ, ಅದೇ ರೈಲು ಬಾಗಲಕೋಟೆಯಿಂದ 2.30ಕ್ಕೆ ಹೊರಟು, ಮಾರನೆಯ ದಿನ ಮಧ್ಯಾಹ್ನ 1.50ಕ್ಕೆ ಮೈಸೂರಿಗೆ ಬರಲಿದೆ.

click me!