* ಬಹಿರಂಗವಾಗಿ ಪ್ರಚಾರ ಮಾಡಿಕೊಂಡು ಹೋಗುವುದು ಸರಿಯಲ್ಲ
* ಹೊರಗಿನಿಂದ ಪಕ್ಷಕ್ಕೆ ಬಂದವರ ಬಗ್ಗೆ ಮಾತನಾಡೋದಿಲ್ಲ
* ಯಾವ ಪಕ್ಷದಲ್ಲೂ ಈ ರೀತಿ ಬೆಳವಣಿಗೆ ಆಗಬಾರದು
ತುಮಕೂರು(ಜೂ.18): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ರಾಜಕೀಯದಲ್ಲಿ ನನಗೆ ಆಸಕ್ತಿಯಿಲ್ಲ. ನಮ್ಮ ಅಭಿಪ್ರಾಯವನ್ನು ಯಾರೂ ಕೇಳಿಲ್ಲ ಎಂದು ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಯಾವ ಪಕ್ಷದಲ್ಲೂ ಈ ರೀತಿ ಬೆಳವಣಿಗೆ ಆಗಬಾರದು. ಪಕ್ಷದೊಳಗೆ ಕುಳಿತು ಮಾತನಾಡಬೇಕು. ಈ ರೀತಿ ಬಹಿರಂಗವಾಗಿ ಪ್ರಚಾರ ಮಾಡಿಕೊಂಡು ಹೋಗುವುದು ಸರಿಯಲ್ಲ. ಹೊರಗಿನಿಂದ ಪಕ್ಷಕ್ಕೆ ಬಂದವರ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.
BSYಗೆ ಬೆಂಬಲ ನೀಡಿದ ಕೈ ಮುಖಂಡ : ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ಎಚ್ಚರಿಕೆ
ಈಶ್ವರಪ್ಪ, ತಾವು ಹಾಗೂ ಮತ್ತಿತರ ಸಚಿವರನ್ನು ಇಲಾಖೆಗೆ ಸಂಬಂಧಿಸಿದಂತೆ ಚರ್ಚಿಸಲು ಸಿಎಂ ಕರೆದಿದ್ದರು. ಅಭಿವೃದ್ಧಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರನ್ನು ಭೇಟಿ ಮಾಡಿದೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಹೇಗೆ ನಡೆದಿದೆ ಎಂದು ವಿವರಿಸಿದ್ದೇನೆ. ಜಿಲ್ಲೆಯ ಕೆರೆ ಕಾಮಗಾರಿಗಳ ಕುರಿತು ಮನವಿ ನೀಡಿದ್ದೇನೆ ಎಂದಿದ್ದಾರೆ.