ಮಂಗಳೂರು: ಪ್ರತಿಭಟನೆ ನಡೆಸಿದ ರಾಜ್ಯಸಭಾ ಸದಸ್ಯ ಬಿನೊಯ್‌ ವಶಕ್ಕೆ

By Kannadaprabha NewsFirst Published Dec 22, 2019, 8:55 AM IST
Highlights

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಮಂಗಳೂರಿನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಕರ್ಫ್ಯೂ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕೇರಳದ ರಾಜ್ಯಸಭಾ ಸದಸ್ಯ ಬಿನೊಯ್‌ ವಿಶ್ವಂ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು(ಡಿ.22): ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಮಂಗಳೂರಿನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಕರ್ಫ್ಯೂ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕೇರಳದ ರಾಜ್ಯಸಭಾ ಸದಸ್ಯ ಬಿನೊಯ್‌ ವಿಶ್ವಂ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಶನಿವಾರ ಬೆಳಗ್ಗೆ 11 ಗಂಟೆ ವೇಳೆಗೆ ಮಂಗಳೂರು ಮಹಾನಗರ ಪಾಲಿಕೆ ಎದುರುಗಡೆ ಇರುವ ಗಾಂಧಿ ಪ್ರತಿಮೆ ಎದುರು ಬಿನೊಯ್‌ ವಿಶ್ವಂ, ಜ್ಯೋತಿ ಕೆ., ಜ್ಯೋತಿ ಎ., ಜನಾರ್ದನ್‌ ಕೆ.ಎಸ್‌., ಸಂತೋಷ್‌ ಎಚ್‌.ಎಂ., ಸಾತಿ ಸುಂದರೇಶ್‌ ದಿಢೀರನೆ ಪ್ರತಿಭಟನೆ ಆರಂಭಿಸಿದ್ದರು. ಸಿಎಂ ಯಡಿಯೂರಪ್ಪ ಗೋಬ್ಯಾಕ್‌, ಸಂವಿಧಾನ ವಿರೋಧಿಗಳಿಗೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಕೂಡಲೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರೆಲ್ಲರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

'ಮಂಗಳೂರಿಗೆ ಬೆಂಕಿ ಹಾಕಲು ಸಿದ್ದರಾಮಯ್ಯ ಬರ್ತಿದ್ದಾರೆ'..!

ಬಿನೊಯ್‌ ವಿಶ್ವಂ ಶುಕ್ರವಾರ ರಾತ್ರಿಯೇ ಮಂಗಳೂರಿಗೆ ಆಗಮಿಸಿದ್ದರೆ, ಉಳಿದವರು ಶನಿವಾರ ಬೆಳಗ್ಗೆ ಮಂಗಳೂರು ತಲುಪಿದ್ದರು. ಬಳಿಕ ಎಲ್ಲರೂ ಸೇರಿ ಮಹಾನಗರ ಪಾಲಿಕೆ ಎದುರು ಬಂದು ಪ್ರತಿಭಟನೆ ಆರಂಭಿಸಿದ್ದರು ಎಂದು ತಿಳಿದುಬಂದಿದೆ.

ಮಂಗಳೂರು ಅಘೋಷಿತ ಬಂದ್‌ ವಾತಾವರಣ: KSRTCಗೆ ನಷ್ಟ

click me!