'ಮೇಲುಕೋಟೆ ದೇವಾಲಯದ ನೌಕರರಿಗೆ ಕೌರೋನಾ ಸೋಂಕು'

By Kannadaprabha NewsFirst Published Sep 1, 2020, 12:36 PM IST
Highlights

ಮೇಲುಕೋಟೆ ದೇವಾಲಯದ ನೌಕರರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಎಲ್ಲರೂ ಎಚ್ಚರದಿಂದ ಇದ್ದು ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಮೇಲುಕೋಟೆ (ಸೆ.01): ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಇಬ್ಬರು ನೌಕರರಿಗೆ ಕೊರೋನಾ ದೃಢಪಟ್ಟಿದ್ದು, ಹೋಂ ಕ್ವಾರಂಟೈನ್‌ ಇರಲು ಸೂಚಿಸಲಾಗಿದೆ. ಇವರ ಸಂಪರ್ಕದಲ್ಲಿದ್ದ ಎಲ್ಲರೂ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ದೇವಾಲಯದಲ್ಲಿ ಪವಿತ್ರೋತ್ಸವ ನೆರವೇರುತ್ತಿದೆ. ಒಳಪ್ರಕಾರದಲ್ಲಿ ಉತ್ಸವ ನಡೆಯುತ್ತಿತ್ತು. ಕೊರೋನ ದೃಢಪಟ್ಟಹಿನ್ನೆಲೆಯಲ್ಲಿ ಉತ್ಸವ ರದ್ದುಪಡಿಸಲಾಗಿದೆ. ಆದರೆ ಪವಿತ್ರೋತ್ಸವದ ಅಂತರಂಗದ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ಮುಂದುವರೆಯಲಿದೆ.

40 ಸಿಬ್ಬಂದಿಗೆ ವೈರಸ್‌: ನೋಟು ಪ್ರಿಂಟ್‌ ಸ್ಥಗಿತ.

ಎಲ ನೌಕರನ್ನು ಕರೆದು ಮಾಹಿತಿ ನೀಡಿದ ದೇವಾಲಯದ ಪ್ರಭಾರಿ ಇಒ ನಂಜೇಗೌಡ, ಆರೋಗ್ಯ ಇಲಾಖೆಯ ಮನವಿಯಂತೆ ದೇವಾಲಯದ ಒಳಾಂಗಣ ಮತ್ತು ಹೊರಾಂಗಣ ನೌಕರರು ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಎಲ್ಲರು ಕಡ್ಡಾಯವಾಗಿ ಕೋವಿಡ್‌ 19 ಪರೀಕ್ಷೆಗೆ ಒಳಗಾಗಿ ನೆಗಿಟಿವ್‌ ವರದಿ ತರಬೇಕು.

ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೋನಾ ಅಬ್ಬರ ಹೇಗಿದೆ?...

ಅಲ್ಲಿಯವರೆಗೆ ಉತ್ಸವಗಳಲ್ಲಿ ಭಾಗಿಯಾಗುವುದು ಬೇಡ. ಕೊರೋನಾ ಇಬ್ಬರಿಗೆ ದೃಢವಾದ ಹಿನ್ನಲೆಯಲ್ಲಿ ಕೋವಿಡ… ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸಲಹೆ ನೀಡಿದ್ದಾರೆ. ಆದರೆ ಭಕ್ತರಿಗೆ ಎಂದಿನಂತೆ ದೇವರದರ್ಶನ ಮುಂದುವರೆಯಲಿದೆ.

ಕೊರೋನಾ ಸೋಂಕಿನಿಂದ ವೃದ್ಧೆ ಸಾವು

ಮಂಡ್ಯ: ತಾಲೂಕಿನ ಗೋಪಾಲಪುರ ಗ್ರಾಮದ ಲೇ. ಬೋರೇಗೌಡರ ಪತ್ನಿ ಚಿಕ್ಕತಾಯಮ್ಮ (68) ಕೊರೋನಾ ಸೋಂಕಿನಿಂದ ಭಾನುವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೆಶಕ ಡಾ. ಜಿ.ಬಿ. ಪ್ರವೀಣ್‌ ಕುಮಾರ್‌ ವಾಣಿಜ್ಯ ತೆರಿಗೆ ಅಧಿಕಾರಿ ಡಾ. ಜಿ.ಬಿ. ರವಿಶಂಕರ್‌ , ವಕೀಲರಾದ ಜಿ.ಬಿ. ಪ್ರಶೀಲ ಸೇರಿದಂತೆ ನಾಲ್ಕು ಮಂದಿ ಮಕ್ಕಳು ಇದ್ದಾರೆ. ಕಳೆದ ಐದು ದಿನಗಳ ಹಿಂದೆ ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಿಕ್ಕತಾಯಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಗ್ರಾಮದ ತೋಟದಲ್ಲಿ ಭಾನುವಾರ ಸಂಜೆ ನಡೆಯಿತು.

click me!