ಬೆಂಗಳೂರಿನ ವ್ಯಕ್ತಿಗೆ ಮಂಗಳೂರಿನಿಂದ ಆ್ಯಂಬುಲೆನ್ಸ್‌ನಲ್ಲಿ ಔಷಧಿ ರವಾನೆ

By Kannadaprabha NewsFirst Published May 1, 2020, 10:47 AM IST
Highlights

ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಅಗತ್ಯವಾಗಿದ್ದ ಔಷಧಿಯನ್ನು ಮಂಗಳೂರಿನಿಂದ ಖರೀದಿಸಿ ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಿಕೊಡುವ ಮೂಲಕ ಉಪ್ಪಿನಂಗಡಿಯ ಮಾಲಿಕುದ್ದೀನಾರ್‌ ಕೇಂದ್ರ ಜುಮ್ಮಾ ಮಸೀದಿಯು ಗಮನ ಸೆಳೆಯಿತು.

ಮಂಗಳೂರು(ಮೇ.01): ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಅಗತ್ಯವಾಗಿದ್ದ ಔಷಧಿಯನ್ನು ಮಂಗಳೂರಿನಿಂದ ಖರೀದಿಸಿ ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಿಕೊಡುವ ಮೂಲಕ ಉಪ್ಪಿನಂಗಡಿಯ ಮಾಲಿಕುದ್ದೀನಾರ್‌ ಕೇಂದ್ರ ಜುಮ್ಮಾ ಮಸೀದಿಯು ಗಮನ ಸೆಳೆಯಿತು.

ಲಾಕ್‌ಡೌನ್‌ ಕಾರಣದಿಂದಾಗಿ ಹಲವೆಡೆ ಔಷಧಿಯ ಸರಬರಾಜಿನಲ್ಲಿ ವ್ಯತ್ಯಯವುಂಟಾಗಿ ಸಮಸ್ಯೆ ಎದುರಾಗಿರುವುದನ್ನು ಮನಗಂಡ ಮಸೀದಿಯ ಆಡಳಿತವು ಔಷಧವನ್ನು ತಲುಪಿಸುವ ಸೇವಾ ಕಾರ್ಯವನ್ನು ನಡೆಸುತ್ತಿದ್ದು, ಅದರಂತೆ ಬೆಂಗಳೂರಿನ ವ್ಯಕ್ತಿಗೆ ತಲುಪಿಸುವ ಹಿನ್ನೆಲೆಯಲ್ಲಿ ಅಂಬುಲೆನ್ಸ್‌ ಮೂಲಕ ಔಷಧಿಯನ್ನು ರವಾನಿಸಿದೆ.

ಚಿತ್ರದುರ್ಗದ ಮಹಿಳೆಯಿಂದ 172 ಚೀಲ ಈರುಳ್ಳಿ ಖರೀದಿಸಿದ ಉಡುಪಿಯ ರೈತ

ಈ ಸಂದರ್ಭದಲ್ಲಿ ಮಸೀದಿಯ ಆಡಳಿತ ಮಂಡಳಿಯ ಮುಂದಾಳು ಶುಕೂರು ಹಾಜಿ, ಸಮಾಜ ಸೇವಕ ಇಸ್ಮಾಯಿಲ್‌ ತಂಗಳ್‌ ಸಿದ್ದಿಕ್‌ ಆತೂರು ಉಪಸ್ಥಿತರಿದ್ದರು. ಲಾಕ್‌ಡೌನ್‌ನಿಂದಾಗಿ ಜನರು ಅಗತ್ಯ ಔಷಧ ಪಡೆಯುವುದು ಕಷ್ಟವಾಗಿದ್ದು, ಈಗಾಗಲೇ ಹೋಂ ಡೆಲಿವರಿ ವ್ಯವಸ್ಥೆಯನ್ನೂ ಮಾಡಲಾಗಿದೆ.

click me!