ಕಡಿಮೆ ಖರ್ಚಿನಲ್ಲಿ ಯಾಂತ್ರೀಕೃತ ಭತ್ತದ ನಾಟಿ

By Kannadaprabha NewsFirst Published Aug 9, 2021, 11:50 AM IST
Highlights
  • ಯಂತ್ರಶ್ರೀ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಒಟ್ಟಾರೆಯಾಗಿ 25 ಸಾವಿರ ಹೆಕ್ಟರ್‌ ಪ್ರದೇಶದಲ್ಲಿ ಯಾಂತ್ರೀಕೃತ  ಭತ್ತದ ನಾಟಿ
  • ಕಡಿಮೆ ಖರ್ಚಿನಲ್ಲಿ ಯಂತ್ರಶ್ರೀ ಯೋಜನೆಯಡಿಯಲ್ಲಿ ಭತ್ತದ ನಾಟಿ ಕಾರ್ಯ
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಮಾಹಿತಿ

 ಭೇರ್ಯ (ಆ.09):  ಯಂತ್ರಶ್ರೀ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಒಟ್ಟಾರೆಯಾಗಿ 25 ಸಾವಿರ ಹೆಕ್ಟರ್‌ ಪ್ರದೇಶದಲ್ಲಿ ಯಾಂತ್ರೀಕೃತ ಮೂಲಕ ಕಡಿಮೆ ಖರ್ಚಿನಲ್ಲಿ ಭತ್ತದ ನಾಟಿ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ದೇವರಾಜ ಹೇಳಿದರು.

ಹಂಪಾಪುರ ಗ್ರಾಮದ ರೈತ ಗುರುಪ್ರಸಾದ್‌ ಅವರ ಆರು ಎಕರೆಗಳಷ್ಟುಇರುವ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಯಾಂತ್ರೀಕೃತ ಮೂಲಕ ಭತ್ತದ ನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಂತ್ರಶ್ರೀ ಯೋಜನೆ ಪರಮ ಪೂಜ್ಯ ಶ್ರೀ ಡಾ. ವಿರೇಂದ್ರ ಹೆಗೆಡೆ ಅವರ ಕನಸ್ಸಾಗಿತ್ತು, ಗ್ರಾಮಾಂತರ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಹಾಗೂ ಭತ್ತದ ನಾಟಿ ಮಾಡಲು ತಗಲುವ ಖರ್ಚು ಕೂಡ ಹೆಚ್ಚಾಗಿದ್ದನ್ನು ಮನಗಂಡು ಸ್ವತಃ ತಾವೇ ಈ ಯಾಂತ್ರೀಕೃತ ಮೂಲಕ ಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಮೂಲಕ ಜಾರಿಗೆ ತಂದರು ಎಂದು ತಿಳಿಸಿದರು.

ರೈತರಿಗೆ ಗುಡ್‌ನ್ಯೂಸ್: ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ!

ಕೆ.ಆರ್‌. ನಗರ ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ 100 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಯಾಂತ್ರೀಕೃತ ಮೂಲಕ ಭತ್ತದ ನಾಟಿ ಮಾಡಿಸಲಾಗಿತ್ತು, ಉತ್ತಮ ಇಳುವರಿ ಕೂಡ ಬಂದಿತ್ತು, ಭತ್ತ ಬೆಳೆದ ರೈತರಿಗೆ ನಷ್ಟಉಂಟಾಗಿರಲಿಲ್ಲ, ಅತಿ ಕಡಿಮೆ ಖರ್ಚಿನಲ್ಲಿ ಭತ್ತ ಬೆಳೆದು ಲಾಭ ಮಾಡುದ್ದರು ರೈತರು ಎಂದು ತಿಳಿಸಿದರು.

ಭತ್ತದ ಸಸಿ ಮಡಿ ಮಾಡಲು ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ರೈತರಿಗೆ ತರಬೇತಿ ನೀಡಿ, ನಷ್ಟವಿಲ್ಲದೆ ಭತ್ತ ಬೆಳೆಯಲು ಸಹಕಾರ ನೀಡಲಾಗುತ್ತಿದೆ. ಕೆ.ಆರ್‌. ನಗರ ಹಾಗೂ ಸಾಲಿಗ್ರಾಮ ತಾಲೂಕಿನ ವಿವಿಧ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ನಾಟಿ ಕಾರ್ಯಾರಂಭ ಮಾಡಲಾಗುತ್ತಿದೆ, ಅಸಕ್ತ ರೈತರು ಯಾಂತ್ರೀಕೃತ ಮೂಲಕ ಭತ್ತದ ನಾಟಿ ಮಾಡಿಸಿಕೊಳ್ಳಬಹುದು ಎಂದರು.

ಪ್ರಗತಿಪರ ರೈತ ಮಂಚನಹಳ್ಳಿ ಗುರುಪ್ರಸಾದ್‌, ಶಿವಣ್ಣ ಇದ್ದರು.

ಶ್ರೀ ಪದ್ಧತಿ ಮೂಲಕ ಭತ್ತ ಸಸಿ ಮಡಿ ಮಾಡಲು ನಮಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಕಡಿಮೆ ಖರ್ಚಿನಲ್ಲಿ ಭತ್ತ ಬೆಳೆಯುವ ಬಗ್ಗೆ ಸಂಕ್ಷೇಪವಾಗಿ ತರಬೇತಿಯನ್ನು ನಮ್ಮ ಜಮೀನಿಗೆ ನೀಡಿದರು. ಕಡಿಮೆ ನೀರು ಬಳಕೆ, ಉತ್ತಮ ಇಳುವರಿ ಹಾಗೂ ಯಾಂತ್ರೀಕೃತ ಮೂಲಕ ಭತ್ತವನ್ನು ಕಟಾವು ಮಾಡಿದಾಗ ರೈತರಿಗೆ ಕಡಿಮೆ ಖರ್ಚು ಆಗುತ್ತದೆ.

- ಗುರುಪ್ರಸಾದ್‌, ಪ್ರಗತಿಪರ ರೈತರು, ಮಂಚನಹಳ್ಳಿ.

click me!