ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಿಸಲು ಕ್ರಮ : ಟಿ.ಬಿ.ಜಯಚಂದ್ರ

By Kannadaprabha News  |  First Published Sep 9, 2023, 9:16 AM IST

ತಾಲೂಕಿನ ರೈತರಿಗೆ ಬಾಧಿಸುತ್ತಿದ್ದ ವೋಲ್ಟೇಜ್ ಸಮಸ್ಯೆ ನಿವಾರಿಸಲು ಹೆಚ್ವಿಡಿಎಸ್ ಅಳವಡಿಸಲಾಗುವುದು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.


  ಶಿರಾ : ತಾಲೂಕಿನ ರೈತರಿಗೆ ಬಾಧಿಸುತ್ತಿದ್ದ ವೋಲ್ಟೇಜ್ ಸಮಸ್ಯೆ ನಿವಾರಿಸಲು ಹೆಚ್ವಿಡಿಎಸ್ ಅಳವಡಿಸಲಾಗುವುದು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ಅವರು ನಗರದ 220 ಕೆ.ವಿ ವಿತರಣಾ ಕೇಂದ್ರದಲ್ಲಿ 100 ಎಂಎಎಚ್ ವಿದ್ಯುತ್ ಪರಿವರ್ತಕವನ್ನು ಚಾಲನೆಗೊಳಿಸಿ ಮಾತನಾಡಿದರು. ಬರಗೂರು, ತಾಳಗುಂದದಲ್ಲಿ ಪವರ್ ಸ್ಟೇಷನ್ ಶೀಘ್ರವಾಗಿ ಆರಂಭಿಸಲಾಗುವುದು ಅಲ್ಲದೆ ಎಂ.ದಾಸರಹಳ್ಳಿ, ಗೌಡಗೆರೆ ಕ್ರಾಸ್, ಹೇರೂರು, ದ್ವಾರನಕುಂಟೆ, ದೊಡ್ಡಗೂಳದಲ್ಲಿ 66 ಕೆ.ವಿ ವಿದ್ಯುತ್ ಉಪ ಸ್ಥಾವರವನ್ನು ಆರಂಭಿಸಲಾಗುವುದು ಎಂದರು.

Tap to resize

Latest Videos

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರರಾದ ಸೈಯದ್ ಮೆಹಮೂದ್, ಜಯದೇವಪ್ಪ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಯರಾಮ್, ಗೋವಿಂದರಾಯ, ಶಾಂತರಾಜ್, ಗಿರೀಶ್, ಸಹಾಯಕ ಅಭಿಯಂತರ ಗವೀಶ್, ಸಂಜಯ್ ಜಿ.ಪಂ.ಮಾಜಿ ಸದಸ್ಯ ಅರೇಹಳ್ಳಿ ರಮೇಶ್, ಮುಖಂಡರಾದ ನಸ್ರುಲ್ಲಾ ಖಾನ್, ಗೌಡಗೆರೆ ವಸಂತ್, ಶ್ರೀನಿವಾಸ್, ಎಂ.ಎಸ್.ರಾವ್ ಸೇರಿದಂತೆ ಹಲವರು ಹಾಜರಿದ್ದರು.

ಬೆಂಗಳೂರು(ಸೆ.06):  ರಾಜ್ಯದ ಯಾವುದೇ ಭಾಗದಲ್ಲೂ ಅಘೋಷಿತ ವಿದ್ಯುತ್‌ ಕಡಿತ ಮಾಡಿಲ್ಲ. ಲೋಡ್‌ ಶೆಡ್ಡಿಂಗ್‌ ಮಾಡುವಂತೆ ಅಧಿಕಾರಿಗಳಿಗೆ ಯಾವ ಸೂಚನೆಯನ್ನೂ ನೀಡಿಲ್ಲ. ವಿದ್ಯುತ್‌ ಸ್ಥಾವರಗಳ ದುರಸ್ಥಿ ಕಾರ್ಯಗಳು ಇರುವೆಡೆ ಕೊಂಚ ವ್ಯತ್ಯಯಗಳು ಆಗಿರಬಹುದು ಅಷ್ಟೆಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್‌ ಕಡಿತ ಮಾಡುತ್ತಿರುವ ಬಗ್ಗೆ ರೈತರಿಂದ ಬರುತ್ತಿರುವ ದೂರುಗಳ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ಇರುವಷ್ಟು ವಿದ್ಯುತ್‌ ಬೇಡಿಕೆ ಈಗಲೇ ಇದೆ. ಥರ್ಮಲ್‌ ವಿದ್ಯುತ್‌ ಘಟಕ ದುರಸ್ತಿ ನಡೆಯುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಕೆಲವೆಡೆ ಕೊಂಚ ವ್ಯತ್ಯಯ ಆಗಿರಬಹುದು. ಆದರೆ, ಎಲ್ಲಿಯೂ ಲೋಡ್‌ ಶೆಡ್ಡಿಂಗ್‌ಗೆ ಸೂಚನೆ ನೀಡಿಲ್ಲ ಎಂದು ತಿಳಿಸಿದ್ದಾರೆ. 

ಲೋಡ್‌ ಶೆಡ್ಡಿಂಗ್‌: ವಿದ್ಯುತ್‌ ಖರೀದಿಗೆ ಹೊರ ರಾಜ್ಯಗಳಿಗೆ ಕರ್ನಾಟಕ ಸರ್ಕಾರ ಮೊರೆ?

ಲೋಡ್‌ ಶೆಡ್ಡಿಂಗ್‌ ಅಗತ್ಯ ಬಿದ್ದರೆ ಮೊದಲೇ ತಿಳಿಸಿ ಮಾಡುತ್ತೇವೆ. ಸದ್ಯ ಅದರ ಅಗತ್ಯವಿಲ್ಲ. ನಿತ್ಯ 40 ಕೋಟಿ ರು. ವೆಚ್ಚದ ವಿದ್ಯತ್‌ ಖರೀದಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗಿರುವುದರಿಂದ ವಿದ್ಯುತ್‌ ಉತ್ಪಾದನೆಯೂ ಹೆಚ್ಚಾಗುತ್ತಿದೆ. ಮಂಗಳವಾರ ನಿಗದಿಗಿಂತ 100 ಯೂನಿಟ್‌ ಉತ್ಪಾದನೆ ಹೆಚ್ಚಾಗಿದೆ. ಮಳೆ ಮುಂದುವರೆದರೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.

click me!