ಶಿವಮೊಗ್ಗದಲ್ಲಿ ಇದೇ ತಿಂಗಳಲ್ಲಿ ಚುನಾವಣೆಯೊಂದು ನಡೆಯಲಿದೆ. ಜನವರಿ 29 ರಂದು ಚುನಾವಣೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಯಾವ ಚುನಾವಣೆ ಇಲ್ಲಿದೆ ಮಾಹಿತಿ
ಶಿವಮೊಗ್ಗ [ಜ.09]: ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಜ. 29 ರಂದು ಚುನಾವಣೆ ನಡೆಯಲಿದೆ.
ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಬಿಸಿಎಂ(ಬಿ) ಮಹಿಳೆ ವರ್ಗಕ್ಕೂ, ಉಪ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆ ವರ್ಗಕ್ಕೂ ಮೀಸಲಿರಿಸಲಾಗಿದೆ.
ಅಂದು ಬೆಳಗ್ಗೆ 1.30 ಗಂಟೆಯಿಂದ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಬಳಿಕ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಯಾವ ಕಾರಣಕ್ಕೂ ನಾನು ಡಿಸಿಎಂ ಆಗಲ್ಲ: ಈಶ್ವರಪ್ಪ...
ಆ ಬಳಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಆ ನಂತರ ಸಾರ್ವಜನಿಕ ಉಳಿದ ಸಮಿತಿಗಳ ಚುನಾವಣೆ ನಡೆಯಲಿದೆ.