ಮೈಸೂರು: ಮೇಯರ್, ಉಪಮೇಯರ್ ಎಲೆಕ್ಷನ್‌ಗೆ ಡೇಟ್ ಫಿಕ್ಸ್‌

By Kannadaprabha News  |  First Published Jan 9, 2020, 9:51 AM IST

ಮೈಸೂರು ನಗರ ಪಾಲಿಕೆಯ ನೂತನ ಮೇಯರ್, ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೆ ವೇಳಾಪಟ್ಟಿ ನಿಗದಿಯಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮುಂದುವರೆಯಲಿದೆ. ಜೆಡಿಎಸ್‌ನಲ್ಲಿರುವ ನಾಲ್ವರು ಆಕಾಂಕ್ಷಿಗಳಿಂದಲೂ ಮೇಯರ್ ಸ್ಥಾನಕ್ಕಾಗಿ ಬಿಗ್ ಫೈಟ್ ಏರ್ಪಟ್ಟಿದೆ. 


ಮೈಸೂರು(ಜ.09): ಮೈಸೂರು ನಗರ ಪಾಲಿಕೆಯ ನೂತನ ಮೇಯರ್, ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಜ.18ರಂದು ಶನಿವಾರ
ಮಧ್ಯಾಹ್ನ 11.30ಕ್ಕೆ ನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಸಲು ನಿಗದಿಯಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿ ಅವರ ಕಚೇರಿಯಲ್ಲಿ ನಾಮಪತ್ರ ನೀಡಲಾಗುವುದು. ಜ.18 ರಂದು ಬೆಳಗ್ಗೆ 7.30 ರಿಂದ
9.39ರೊಳಗೆ ಅಭ್ಯರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕೊಠಡಿಸಂಖ್ಯೆ-1ಕ್ಕೆ ಸಲ್ಲಿಸಬೇಕು. ಈ ಸಂಬಂಧ ನಗರ ಪಾಲಿಕೆಯ ಸದಸ್ಯರು, ಸಂಬಂಧಿಸಿದ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ಹಾಗೂ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮತದಾರರೆಂದು ನೋಂದಾಯಿಸಲ್ಪಟ್ಟ ವಿಧಾನ ಪರಿಷತ್ ಸದಸ್ಯರಿಗೆ ತಿಳಿವಳಿಕೆ ಪತ್ರ ನೀಡಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.

Tap to resize

Latest Videos

ವಿದೇಶದಿಂದ ಮರಳಿದ ಶಾಸಕ ತನ್ವೀರ್ ಸೇಠ್‌, ಈಗ ಹೇಗಿದ್ದಾರೆ..?

ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮುಂದುವರೆಯಲಿದೆ. ಜೆಡಿಎಸ್‌ನಲ್ಲಿರುವ ನಾಲ್ವರು ಆಕಾಂಕ್ಷಿಗಳಿಂದಲೂ ಮೇಯರ್ ಸ್ಥಾನಕ್ಕಾಗಿ ಬಿಗ್ ಫೈಟ್ ಏರ್ಪಟ್ಟಿದೆ. ಪಕ್ಷದ ನಿರ್ಮಲಾ ಹರೀಶ್, ರೇಷ್ಮಾಭಾನು, ತಸ್ಲೀಮ್ ಹಾಗೂ ನಮ್ರತಾ ರಮೇಶ್ ನಡುವೆ ಮೇಯರ್ ಪೈಪೋಟಿ ಉಂಟಾಗಿದೆ. ಯಾರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಬೇಕು
ಎಂಬುದನ್ನು ಅಂತಿಮ ಕ್ಷಣದವರೆಗೂ ಗೌಪ್ಯವಾಗಿಡಲಾಗುವುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಜಿಟಿಡಿ ಬೆಂಬಲಿಸೋ ವ್ಯಕ್ತಿಗೆ ನನ್ನ ವೋಟ್: ಸಾರಾ ಮಹೇಶ್

ಇನ್ನು ಪ.ಜಾತಿಗೆ ಮೀಸಲಾಗಿರುವ ಉಪ ಮೇಯರ್ ಆಯ್ಕೆ ಕುರಿತು ಕಾಂಗ್ರೆಸ್‌ನಲ್ಲಿಯೂ ಪೈಪೋಟಿ ಆರಂಭವಾಗಿದ್ದು, ನಾಲ್ವರು ಆಕಾಂಕ್ಷಿಗಳಿದ್ದಾರೆ. ವಿ. ರಮೇಶ್,
ಪ್ರದೀಪ್‌ಚಂದ್ರ, ಸಿ. ಶ್ರೀಧರ್ ಮತ್ತು ಸತ್ಯರಾಜ್ ಅವರು ಆಕಾಂಕ್ಷಿಗಳಾಗಿದ್ದಾರೆ.

click me!