ಉಪ ಸಮರದ ಬಗ್ಗೆ ವಿಸ್ಮಯದ ಭವಿಷ್ಯ: ಇವರು ಹೇಳಿದ್ದು ಸುಳ್ಳಾಗಿದ್ದೇ ಇಲ್ಲ!

By Web Desk  |  First Published Dec 2, 2019, 9:00 AM IST

ಯಡಿಯೂರಪ್ಪ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಗಣಿತ ತಜ್ಞ| ಅವರು ಹೇಳಿರೋ ಭವಿಷ್ಯ ಸುಳ್ಳಾಗಿದ್ದೇ ಇಲ್ಲ| ರಾಜಕೀಯ ನಾಯಕರಿಗೆ ಕುತೂಹಲ, ಅಚ್ಚರಿ ಮೂಡಿಸುವ ಸುದ್ದಿ| 2ನೇ ಬಾರಿಗೆ ಮೋದಿಯೇ ಪ್ರಧಾನಿ ಆಗ್ತಾರೆ ಅನ್ನೋ ಪ್ರಕಟಣೆಯೂ ಹುಸಿಯಾಗಲಿಲ್ಲ| 2018 ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿಯೇ ಸಿಎಂ ಆಗ್ತಾರೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದ  ಉಪಾಧ್ಯ ಕುಟುಂಬ| 


ಬೆಳಗಾವಿ(ಡಿ.02): ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯ 15 ಕ್ಷೇತ್ರಗಳ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಹಾಗೂ ಮೂರು ಕ್ಷೇತ್ರಗಳ ಮಾತ್ರ ಸಸ್ಪೆನ್ಸ್ ಇದೆ ಎಂದು ಗಣಿತ ತಜ್ಞ ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ಭವಿಷ್ಯ ನುಡಿದಿದ್ದಾರೆ. 

Latest Videos

undefined

ಅಥಣಿ ತಾಲೂಕಿನ ಸಂಕೋನಟ್ಟಿಯಲ್ಲಿ ನೆಲೆಸಿರುವ ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ಹೇಳಿರುವ ರಾಜಕೀಯ ಭವಿಷ್ಯ ಇಲ್ಲಿಯವರೆಗೆ ಯಾವುದು ಸುಳ್ಳಾಗಿಲ್ಲ. ಹೌದು,1983ರಿಂದ ಗಣಿತ ರಾಜಕೀಯ ಭವಿಷ್ಯ ಹೇಳುತ್ತಾ ಬಂದಿರುವ ಇವರು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದು ಸುಳ್ಳಾಗಲಿಲ್ಲ, ಎರಡು ಬಾರಿ ಮೋದಿ ಪ್ರಧಾನಿಯಾಗ್ತಾರೆ ಎಂದು ಹೇಳಿದ್ದರು.ಅದು ಕೂಡ ನಿಜವಾಗಿದೆ. 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂದು ಹೇಳಿದ್ದರು. ಈ ಬಗ್ಗೆ  3 ತಿಂಗಳ ಮುಂಚೆಯೇ ಶ್ರೀಪಾಲ್​ ಉಪಾಧ್ಯ ಅವರು ಪ್ರಕಟಣೆ ಹೊರಡಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಂಡಿತ ಉಪಾಧ್ಯಯರ ಕುಟುಂಬ ಸುಮಾರು 24 ತಲೆಮಾರುಗಳಿಂದ ಭವಿಷ್ಯ ಹೇಳುತ್ತಿದೆ.  ಸಾವಿರ ವರ್ಷಗಳ ಹಿಂದೆಯೇ ಉಪಾಧ್ಯ ಕುಟುಂಬದ ಪೂರ್ವಜರು ತ್ರಿಲೋಕ ಉಗ್ರ ಹೊತ್ತಿಗೆಯನ್ನು ರಚಿಸಿದ್ದಾರೆ. ಈ ಪುಸ್ತಕ ತಾಮ್ರ ಹಾಗೂ ತಾಳೆಗರಿಯಲ್ಲಿದ್ದು, ಅದನ್ನೇ ನೋಡಿ 1983ರಿಂದಲೇ ಈ ಕುಟುಂಬ ಪಕ್ಕಾ ರಾಜಕೀಯ ಭವಿಷ್ಯ ಹೇಳುತ್ತಾ ಬಂದಿದೆ.

"

ಉಪಚುನಾವಣೆಯಲ್ಲಿ 15 ಅನರ್ಹರನ್ನೂ ಗೆಲ್ಲಿಸಿಯೇ ಸಿದ್ದ ಎಂದು ಯಡಿಯೂರಪ್ಪ ಪಣ ತೊಟ್ಟು ಕ್ಷೇತ್ರ ಸಂಚಾರದಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಪಾಲ್​ ಉಪಾಧ್ಯ ಅವರ ರಾಜಕೀಯ ಭವಿಷ್ಯದ ಪ್ರಕಾರ ಯಡಿಯೂರಪ್ಪ ಅವರ ಸರ್ಕಾರಕ್ಕೆ ಯಾವುದೇ ಕಂಟಕ ಇಲ್ಲ ಎಂದು ಸ್ಪಷ್ಟವಾಗಿದೆ. 

ಈ ಬಗ್ಗೆ ಮಾತನಾಡಿದ ಪಂಡಿತ ಶ್ರೀಪಾಲ್​ ಉಪಾಧ್ಯ ಅವರು, ಉಪಾಧ್ಯ ಕುಟುಂಬ ಮೂರು ತಿಂಗಳ ಮುಂಚೆಯೇ ಪ್ರಕಟಣೆ ಹೊರಡಿಸುತ್ತೆ. ರಾಮಕೃಷ್ಣ ಹೆಗಡೆ ಸಿಎಂ ಆಗ್ತಾರೆ ಎಂದು ಈ ಹಿಂದೆ ಪ್ರಕಟಣೆ ಹೊರಡಿಸಿದ್ದು ಸುಳ್ಳಾಗಲಿಲ್ಲ 2ನೇ ಬಾರಿಗೆ ಮೋದಿಯೇ ಪ್ರಧಾನಿ ಆಗ್ತಾರೆ ಅನ್ನೋ ಪ್ರಕಟಣೆಯೂ ಹುಸಿಯಾಗಲಿಲ್ಲ.ಇನ್ನೂ 2018 ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿಯೇ ಸಿಎಂ ಆಗ್ತಾರೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ ಅದು ಕೂಡ ಸುಳ್ಳಾಗಿಲ್ಲ ಎಂದು ಹೇಳಿದ್ದಾರೆ. ಈ ಪುಸ್ತಕಕ್ಕೆ ನೀಲಿ ಪುಸ್ತಕ ಎಂದು ಕರೆಯಲಾಗುತ್ತದೆ. 

"

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಹೈವೋಲ್ಟೇಜ್ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್​ ಗೆಲುವು ಖಚಿತ ಎಂದು ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ಹೇಳಿದ್ದರು. ಅದೇ ರೀತಿ ಸುಮಲತಾ ಅವರು ಗೆಲುವು ಸಾಧಿಸಿದ್ದರು ಎಂದು ಶ್ರೀಪಾಲ್​ ಉಪಾಧ್ಯ ಅವರ ಪುತ್ರ  ಉದಯ್ ಉಪಾಧ್ಯ ಅವರು ಹೇಳಿದ್ದಾರೆ. 

ಇದೀಗ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆಯಂತೆ. ಮೂರು ಕ್ಷೇತ್ರಗಳ ಮಾತ್ರ ಸಸ್ಪೆನ್ಸ್​ ಅಂತಿದೆ ಉಪಾಧ್ಯ ಕುಟುಂಬದ ಭವಿಷ್ಯ ಹೇಳಿದೆ. ಇದಕ್ಕೆಲ್ಲ ಉತ್ತರ ಡಿ. 9 ರಂದು ಸಿಗಲಿದೆ. 
 

click me!