ಮಳೆ ನಡುವೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಮಧ್ಯರಾತ್ರಿಯಿಂದಲೇ ಹರಿದು ಬಂದ ಜನಸಾಗರ

Published : Jul 20, 2026, 05:51 AM IST
Chennamma Final Darshan

ಸಾರಾಂಶ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನದಿಂದ ಇಡೀ ಕರ್ನಾಟಕ ಹಾಗೂ ಪ್ರಮುಖವಾಗಿ ಹಾಸನ ಜಿಲ್ಲೆ ಜನರು ತೀವ್ರ ದುಃಖತಪ್ತರಾಗಿದ್ದಾರೆ. ಮಳೆಯ ನಡುವೆಯೂ ಮಧ್ಯರಾತ್ರಿಯಿಂದಲೇ ಅಂತಿಮ ದರ್ಶನಕ್ಕಾಗಿ ಜನಸಾಗರವೇ ಹರಿದು ಬಂದಿದೆ. ಇದೇ ವೇಳೆ ಪೊಲೀಸರ ಜೊತೆ ವಾಗ್ವಾದವೂ ನಡೆದಿದೆ.

ಹಾಸನ (ಜು.20) ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ ವಾರ್ತೆ ಕರ್ನಾಟಕದಲ್ಲಿ ಪ್ರಮುಖವಾಗಿ ಹಾಸನ ಜಿಲ್ಲೆ ಜನರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇಂದು ಮಧ್ಯರಾತ್ರಿ ಚೆನ್ನೆಮ್ಮ ಪಾರ್ಥೀವ ಶರೀರ ಹಾಸನ ಜಿಲ್ಲೆಗೆ ತಲುಪಿದೆ. ಮಧ್ಯರಾತ್ರಿಯಿಂದಲೇ ಹಾಸನ ಜನರು ಚೆನ್ನಮ್ಮ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕಾದು ನಿಂತಿದ್ದರು. ಹೊಳೆನರಸೀಪುರದ ಮನೆಯತ್ತ ಪಾರ್ಥೀವ ಶರೀರ ಆಗಮಿಸುತ್ತಿದ್ದಂತ ಮಳೆ ಶುರುವಾಗಿದೆ. ಮಳೆಯನ್ನು ಲೆಕ್ಕಿಸಿದ ಜನರು ಅಂತಿಮ ದರ್ಶನಕ್ಕಾಕಿ ನಿಂತಿದ್ದರು. ಇದೇ ವೇಳೆ ಮಳೆ ಕಾರಣದಿಂದ ಎಕ್ಸಿಟ್ ಗೇಟ್ ಮೂಲಕ ಅಂತಿಮ ದರ್ಶನ ಪಡೆಯಲು ಹಲವರು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡದೆ, ಪ್ರವೇಶ ಗೇಟ್ ಮೂಲಕ ಅಂತಿಮ ದರ್ಶನ ಪಡೆಯುವಂತೆ ಮನವಿ ಮಾಡಿದ್ದಾರೆ.

ಮಳೆ ಕಾರಣ ಅವಕಾಶ ನೀಡಿ

ಮಳೆ ಕಾರಣ ನೀಡಿ ಎಕ್ಸಿಟ್ ಕಡೆಯಿಂದ ಅಂತಿಮ ದರ್ಶನಕ್ಕೆ ಬರಲು ಕೆಲವರ ಯತ್ನ ನಡೆಸಿದ್ದಾರೆ. ಪೊಲೀಸರು ಅವಕಾಶ ನೀಡದ ಕಾರಣ ವಾಗ್ವಾದ ನಡೆದಿದೆ. ಮಳೆಯಲ್ಲಿ ನಿಲ್ಲಲು ಆಗುತ್ತಿಲ್ಲ, ಎಗ್ಸಿಟ್ ಗೇಟ್ ಮೂಲಕ ಅಂತಿಮ ದರ್ಶನಕ್ಕೆ ಅವಕಾಶ ನೀಡುವಂತೆ ಪೊಲೀಸರ ಕೇಳಿದ್ದಾರೆ. ಎಕ್ಸಿಟ್ ಗೇಟ್ ಮೂಲಕ ಯಾರಿಗೂ ಅವಕಾಶವಿಲ್ಲ. ಇದರಿಂದ ಎಲ್ಲರಿಗೂ ಸಮಸ್ಯೆಯಾಗಲಿದೆ. ದಯವಿಟ್ಟು ಪ್ರವೇಶ ದ್ವಾರದ ಮೂಲಕ ಅಂತಿಮ ದರ್ಶನ ಪಡೆಯುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕುಟುಂಬಸ್ಥರಿಂದ ಚೆನ್ನಮ್ಮನ ಮೃತದೇಹಕ್ಕೆ ಪೂಜೆ

ಹೊಳೆನರಸೀಪುರ ರೇವಣ್ಣನ ಮನೆಯಲ್ಲಿ ಚೆನ್ನಮ್ಮನ ಮೃತದೇಹ ಆಗಮಿಸಿದ ಬಳಿಕ ಮನೆಯೊಳಗೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಲಾಗಿದೆ. ಕುಟುಂಬಸ್ಥರ ಪೂಜೆ ಬಳಿಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ತಾಯಿ ಮೃತದೇಹದ ಜೊತೆಯೇ ಗಾಡಿಯಲ್ಲಿ ಬಂದಿದ್ದ ಪುತ್ರ ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ರೇವಣ್ಣನ ಮನೆಯಲ್ಲಿ ತಾಯಿ ಮೃತದೇಹಕ್ಕೆ ಪೂಜೆ ಸಲ್ಲಿಸಿದ್ದಾರೆ.

16 ಗಂಟೆಗಳ ಬಳಿಕ ಹೊಳೆನರಸೀಪುರ ತಲುಪಿದ ಪಾರ್ಥಿವ ಶರೀರ

ಬೆಂಗಳೂರಿನಿಂದ ಹೊಳೆನರಸಿಪುರದತ್ತ ಹೊರಟ ಚೆನ್ನಮ್ಮ ಪಾರ್ಥೀವ ಶರೀರ ವಾಹನ ರೇವಣ್ಣ ಮನೆ ತಲಪಲು ಬರೋಬ್ಬರಿ 16 ಗಂಟೆ ಕಾಲ ತೆಗೆದುಕೊಂಡಿದೆ. ಬೆಂಗಳೂರಿನಿಂದ ಹೊಳೆನರಸೀಪುರದ ರಸ್ತೆಯ ಇಕ್ಕೆಲಗಳಲ್ಲಿ ಜನರು ಅಂತಿಮ ದರ್ಶನ ಪಡೆದಿದ್ದಾರೆ. ದಾರಿಯೂದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಚನ್ನಮ್ಮ ಅಂತಿಮ ದರ್ಶನ ಪಡೆದಿದ್ದಾರೆ. ಹಲವೆಡೆ ಕೆಲಕಾಲ ವಾಹನ ನಿಲ್ಲಿಸಿ ನೆರೆದಿದ್ದ ಜನರು ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಇಂದು ಮಧ್ಯಾಹ್ನ 12 ಗಂಟೆವರೆಗೂ ರೇವಣ್ಣ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

PREV
Read more Articles on
click me!

Recommended Stories

School Holiday: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ; ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ!
ರಾಜ್ಯಕ್ಕೆ ಶೇ.60 ಮುಂಗಾರು ಕೊರತೆ, 178 ತಾಲೂಕು ಬರ ಪೀಡಿತ; ಶಾಸಕರಿಗೆ ₹1 ಕೋಟಿ ಅನುದಾನ ಕೊಟ್ಟ ಡಿ.ಕೆ. ಶಿವಕುಮಾರ್