ತುರ್ವಿಹಾಳ್‌ನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರತಾಪಗೌಡ| ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ಬಿಜೆಪಿ ಅರುಣ ಸಿಂಗ್, ಹಲವು ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗಿ| ಪ್ರತಾಪಗೌಡರ ಸಂಪರ್ಕಕ್ಕೆ ಬಂದವರಲ್ಲಿ ಹೆಚ್ಚಿದ ಆತಂಕ|
ರಾಯಚೂರು(ಏ.12): ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಖುದ್ದು ಪ್ರತಾಪಗೌಡರೇ ಖಚಿತಪಡಿಸಿದ್ದು, ಸದ್ಯ ತಾವು ಹೋಂ ಕ್ವಾರಂಟೈನ್‌ಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.
ಮತದಾನಕ್ಕೆ ಇನ್ನು ಐದು ದಿನವಷ್ಟೇ ಬಾಕಿ ಇದೆ ಎನ್ನುವಾಗ ಅಭ್ಯರ್ಥಿಗೆ ಸೋಂಕು ತಗುಲಿರುವುದು ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಮಸ್ಕಿ ಕ್ಷೇತ್ರದಾದ್ಯಂತ ಬಿಜೆಪಿ ಅಬ್ಬರ ಪ್ರಚಾರ ನಡೆಸುತ್ತಿದೆ. ಕ್ಷೇತ್ರದ ತುರ್ವಿಹಾಳ್‌ನಲ್ಲಿ ಶನಿವಾರವಷ್ಟೇ ಬಹಿರಂಗ ಸಮಾವೇಶದಲ್ಲಿ ಪ್ರತಾಪಗೌಡರು ಪಾಲ್ಗೊಂಡಿದ್ದರು.
undefined
ಶಾಕಿಂಗ್: ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್, ಹಲವು ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಅನೇಕರಿಗೆ ಹಸ್ತಲಾಘವ ಮಾಡಿದ್ದರೆ, ಕೆಲವರನ್ನು ಆಲಿಂಗಿಸಿದ್ದಾರೆ. ಹೀಗಾಗಿ ಇವರ ಸಂಪರ್ಕಕ್ಕೆ ಬಂದವರು ಆತಂಕದಲ್ಲಿದ್ದಾರೆ.