ವೈರಸ್‌ ರಣಕೇಕೆ: ಮದುವೆಗೆ ಕೊಟ್ಟ ಪರವಾನಗಿ ರದ್ದು

By Kannadaprabha NewsFirst Published May 12, 2021, 1:48 PM IST
Highlights

* ಮೇ. 24ರಂದು ಮದುವೆಗೆ ಪರವಾನಗಿ ಪಡೆದಿದ್ದ 300ಕ್ಕೂ ಅಧಿಕ ಕುಟುಂಬಗಳು
* ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಮದುವೆ ರದ್ದು
* ಆಯಾ ತಾಲೂಕಾಡಳಿತಕ್ಕೆ ಪರವಾನಗಿ ವಾಪಾಸ್‌ ಸಲ್ಲಿಸಬೇಕಿರುವ ಕುಟುಂಬಗಳು

ಹೂವಿನಹಡಗಲಿ(ಮೇ.12): ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಿಗೆ ಆಯಾ ತಾಲೂಕು ಆಡಳಿತ ನೀಡಿದ್ದ ಪರವಾನಗಿ ರದ್ದು ಪಡಿಸುವ ಮೂಲಕ ಪರವಾನಗಿ ಹಿಂಪಡೆಯುತ್ತಿದ್ದಾರೆ.

ವಾರದ ಹಿಂದೆಯೇ ಮೇ. 14, ಮೇ. 24ರಂದು ಮದುವೆಗೆ 300ಕ್ಕೂ ಅಧಿಕ ಕುಟುಂಬಗಳು ಪರವಾನಗಿ ಪಡೆದಿದ್ದರು. ಈಗ ಆ ಕುಟುಂಬಗಳು ತಾಲೂಕಾಡಳಿತಕ್ಕೆ ಪರವಾನಗಿ ವಾಪಾಸ್‌ ಸಲ್ಲಿಸಬೇಕಿದೆ.

"

ಮಾನವೀಯತೆಯನ್ನೇ ಮರೆತ ಜನ: ಸೋಂಕಿತ ತಂದೆ-ತಾಯಿಯೊಂದಿಗೆ ಮಗು..!

ಜಿಲ್ಲಾಡಳಿತ ಹೊರಡಿಸಿರುವ ಆದೇಶದಂತೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮದುವೆಗೆ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಆಯಾ ತಾಲೂಕಾಡಳಿತ ನೀಡಿದ್ದ ಮದುವೆ ಪರವಾನಗಿಯನ್ನೇ ರದ್ದುಪಡಿಸಿ ಅವರಿಗೆ ನೀಡಿದ್ದ 50 ಜನರ ಪಾಸ್‌ಗಳನ್ನು ಹಿಂಪಡೆಯುತ್ತಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!