ಗರದಲ್ಲಿ ಕೋಟ್ಯಂತರ ರುಪಾಯಿಗಳ ವೆಚ್ಚದಲ್ಲಿ ಸುಸಜ್ಜಿತ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ರೈತರು ಹಾಗೂ ವ್ಯಾಪಾರಸ್ಥರಿಗೆಂದೇ ಎಪಿಎಂಸಿಯವರು ನಿರ್ಮಿಸಿಕೊಟ್ಟಿದ್ದರೂ, ಇಲ್ಲಿನ ಬಿ.ಎಚ್. ರಸ್ತೆ ಅಕ್ಕಪಕ್ಕ ಸೇರಿದಂತೆ ನಗರದ ಪ್ರಮುಖ ಸರ್ಕಲ್‌ಗಳ ಮೇಲೆಯೇ ಕಿತ್ತಲೆ, ಕಲ್ಲಂಗಡಿ, ತರಕಾರಿ ವ್ಯಾಪಾರಿಗಳು ಇಟ್ಟುಕೊಂಡು ಹಾಗೂ ಟೆಂಪೋ, ಟಾಟಾ ಎಸ್ ವಾಹನಗಳನ್ನು ನಿಲ್ಲಿಸಿಕೊಂಡು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುವಂತೆ ವ್ಯಾಪಾರ ಮಾಡುತ್ತಿದ್ದಾರೆ.
ತಿಪಟೂರು : ನಗರದಲ್ಲಿ ಕೋಟ್ಯಂತರ ರುಪಾಯಿಗಳ ವೆಚ್ಚದಲ್ಲಿ ಸುಸಜ್ಜಿತ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ರೈತರು ಹಾಗೂ ವ್ಯಾಪಾರಸ್ಥರಿಗೆಂದೇ ಎಪಿಎಂಸಿಯವರು ನಿರ್ಮಿಸಿಕೊಟ್ಟಿದ್ದರೂ, ಇಲ್ಲಿನ ಬಿ.ಎಚ್. ರಸ್ತೆ ಅಕ್ಕಪಕ್ಕ ಸೇರಿದಂತೆ ನಗರದ ಪ್ರಮುಖ ಸರ್ಕಲ್‌ಗಳ ಮೇಲೆಯೇ ಕಿತ್ತಲೆ, ಕಲ್ಲಂಗಡಿ, ತರಕಾರಿ ವ್ಯಾಪಾರಿಗಳು ಇಟ್ಟುಕೊಂಡು ಹಾಗೂ ಟೆಂಪೋ, ಟಾಟಾ ಎಸ್ ವಾಹನಗಳನ್ನು ನಿಲ್ಲಿಸಿಕೊಂಡು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುವಂತೆ ವ್ಯಾಪಾರ ಮಾಡುತ್ತಿದ್ದಾರೆ.
ಇದರಿಂದ ನಿತ್ಯವೂ ಅಪಘಾತಗಳು ನಡೆಯುತ್ತಿದ್ದರೂ ನಗರಸಭೆ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಪಾದಚಾರಿಗಳು, ವಾಹನ ಸವಾರರು, ಸಾರ್ವಜನಿಕರ ಪರವಾಗಿ ತಿಪಟೂರು ಹೋರಾಟ ಸಮಿತಿಯ ಕಾರ್ಯದರ್ಶಿ ರೇಣುಪಟೇಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ನಗರದಲ್ಲಿ ಹಾಯ್ದು ಹೋಗುವ ಎನ್.ಎಚ್. 206 ರಸ್ತೆಯು ತುಂಬಾ ಕಿರಿದಾಗಿದ್ದುಓಡಾಟಕ್ಕೆ ತೊಂದರೆಯಾಗಿದ್ದರೂ ಇದೇ ರಸ್ತೆಯ ಅಂಚುಗಳಲ್ಲಿ ಹಾಗೂ ಕಿರಿದಾಗಿರುವ ಇಲ್ಲಿನ ಹಾಸನ ಸರ್ಕಲ್, ಐ.ಬಿ. ಸರ್ಕಲ್, ಗುರದರ್ಶನ್ ಹೋಟೆಲ್ ಸರ್ಕಲ್, ನಗರಸಭಾ ಸರ್ಕಲ್, ಕೋಡಿ ಸರ್ಕಲ್‌ಗಳು ಸೇರಿದಂತೆ ಬಾಲಕಿಯರ ಮುಂಭಾಗ, ಎಸ್‌ಬಿಐ ಮುಂಭಾಗ, ಸಾಯಿಬಾಬ ಸರ್ಕಲ್, ಅರಳಿಕಟ್ಟೆಸರ್ಕಲ್‌ಗಳು ಸೇರಿದಂತೆ ರೈಲ್ವೆ ಸ್ಟೇಷನ್ ರಸ್ತೆಗಳು ದೊಡ್ಡಪೇಟೆ ಮುಖ್ಯ ರಸ್ತೆಗಳಲ್ಲಿ ನಿತ್ಯ ಸಾವಿರಾರು ವಾಹನಗಳು, ಜನಸಾಮಾನ್ಯರ ಓಡಾಟವಿದೆ. ಈ ಎಲ್ಲಾ ಜಾಗಗಳಲ್ಲಿ ತರಕಾರಿ, ಹಣ್ಣು, ಹೂ ಮತ್ತು ವಿವಿಧ ವಸ್ತುಗಳ ಮಾರಾಟಗಾರರು ವ್ಯಾಪಾರ ಮಾಡುತ್ತಿದ್ದು ಇದರಿಂದ ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ತೀವ್ರ ಸಂಕಷ್ಟವಾಗಿದೆ.
ಈ ಬಗ್ಗೆ ಅನೇಕ ಬಾರಿ ನಗರಸಭೆ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕೂಡಲೇ ಈಗಲಾದರೂ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಪಾದಚಾರಿ ರಸ್ತೆಯನ್ನು ತೆರವುಗೊಳಿಸಿ ಹಣ್ಣು, ತರಕಾರಿ ಮಾರಾಟಗಾರರನ್ನು ನಗರದ ಹೃದಯಭಾಗದಲ್ಲಿರುವ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ರಸ್ತೆ ತಡೆ ಹೋರಾಟ ನಡೆಸಬೇಕಾಗುವುದಲ್ಲದೆ ಲೋಕಾಯುಕ್ತಕ್ಕೆ ಫುಟ್‌ಪಾತ್ ವ್ಯಾಪಾರಿಗಳಿಗೆ ಶಾಮೀಲಾಗಿರುವ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ನೀಡಲಾಗುವುದು ಎಂದು ರೇಣುಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ್ - 1 :
ಇತ್ತೀಚೆಗೆ ಫುಟ್‌ಪಾತ್ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ. ಕೂಡಲೆ ಪೊಲೀಸ್ ಇಲಾಖೆಯ ಜೊತೆ ಮಾತನಾಡಿ ಹೂ, ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವಂತೆ ಕ್ರಮ ಜರುಗಿಸಲಾಗುವುದು.
ಉಮಾಕಾಂತ್, ಪೌರಾಯುಕ್ತರು, ನಗರಸಭೆ, ತಿಪಟೂರು.
ಕೋಟ್ - 2 :
ನಗರಸಭೆಯವರ ಜೊತೆ ಮಾತನಾಡಿ ಅವರ ನೆರವು ಪಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಂಡು ಹಣ್ಣ, ತರಕಾರಿ ಮಾರಾಟಗಾರರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ನೋಡಿಕೊಳ್ಳಲಾಗುವುದು.
ದ್ರಾಕ್ಷಾಯಿಣಮ್ಮ, ಎಸ್‌ಐ, ನಗರಠಾಣೆ, ತಿಪಟೂರು.
ಫೋಟೋ 5-ಟಿಪಿಟಿ1ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ :
ತಿಪಟೂರಿನ ಗುರುದರ್ಶನ್ ಹಾಗೂ ಬಾಲಕಿಯರ ಸರ್ಕಾರಿ ಕಾಲೇಜು ಮುಂಭಾಗದ ಪಾದಚಾರಿಗಳಿಗೆ ಓಡಾಡಲು ಜಾಗವಿಲ್ಲದಂತೆ ರಸ್ತೆಯಲ್ಲೇ ಕಿತ್ತಲೆ ಹಣ್ಣುಗಳನ್ನು ವಾಹನದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವುದು.