ಧಾರವಾಡದಲ್ಲಿ ಅ. 7 ರಿಂದ ಅದ್ಧೂರಿ ಮಾರಿಕಾಂಬಾ ದೇವಿ ಜಾತ್ರೋತ್ಸವ

By Web DeskFirst Published Oct 5, 2019, 7:25 AM IST
Highlights

ನಗರದ ಲಕ್ಷ್ಮಿಸಿಂಗನಕೇರಿಯಲ್ಲಿ ಅ.7ರಂದು ಶ್ರೀಮಾರಿಕಾಂಬಾದೇವಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಯುವ ಅಭಿವೃದ್ಧಿ ಸಂಸ್ಥೆಯಿಂದ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ ಜರುಗಲಿದೆ| ಜಾತ್ರಾ ಮಹೋತ್ಸವಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಚಾಲನೆ ನೀಡಲಿದ್ದಾರೆ| ಜಾತ್ರೆಯ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ದೇವಿ ಮೂರ್ತಿ ಮೆರವಣಿಗೆ ನಡೆಯಲಿದೆ| ಯುವಕರ ಜಗ್ಗಲಗಿ, ಝಾಂಜ್‌, ಕರಡಿ ಮಜಲು, ಡೊಳ್ಳು ಕುಣಿತ, ಕೋಲಾಟ ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸಲಿವೆ| 

ಧಾರವಾಡ(ಅ.5): ನಗರದ ಲಕ್ಷ್ಮಿಸಿಂಗನಕೇರಿಯಲ್ಲಿ ಅ.7ರಂದು ಶ್ರೀಮಾರಿಕಾಂಬಾದೇವಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಯುವ ಅಭಿವೃದ್ಧಿ ಸಂಸ್ಥೆಯಿಂದ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಾರುತಿ ಮಾಕಡವಾಲೆ ಹೇಳಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಚಾಲನೆ ನೀಡಲಿದ್ದಾರೆ. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಶಾಸಕ ಅರವಿಂದ ಬೆಲ್ಲದ, ಇಸ್ಮಾಯಿಲ್‌ ತಮಟಗಾರ, ಅಲ್ತಾಫ್‌ ಹಳ್ಳೂರ, ಅನಿಲಕುಮಾರ್‌ ಪಾಟೀಲ್‌ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಾತ್ರೆಯ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ದೇವಿ ಮೂರ್ತಿ ಮೆರವಣಿಗೆ ನಡೆಯಲಿದ್ದು, ಯುವಕರ ಜಗ್ಗಲಗಿ, ಝಾಂಜ್‌, ಕರಡಿ ಮಜಲು, ಡೊಳ್ಳು ಕುಣಿತ, ಕೋಲಾಟ ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಮಾಕಡವಾಲೆ, ರಾಘವೇಂದ್ರ ಮಾಕಡವಾಲೆ, ಗೋವಿಂದರಾಜ ಮಾಕಡವಾಲೆ, ಶಿವರಾಜ ಮಾಕಡವಾಲೆ, ಹನುಮಂತರಾಜ ಮಾಕಡವಾಲೆ ಸೇರಿದಂತೆ ಅನೇಕರು ಇದ್ದರು.
 

click me!