ಭಾರೀ ಮಳೆ ಮುನ್ನೆಚ್ಚರಿಕೆ, ಈ ಜಿಲ್ಲೆಗಳ ಜನ ಜಾಗರೂಕರಾಗಿರಿ

By Web Desk  |  First Published Oct 4, 2019, 6:22 PM IST

ಮತ್ತೆ ಭಾರೀ ಮಳೆ ಮುನ್ನೆಚ್ಚರಿಕೆ/ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ/ ಬೆಂಗಳೂರು ಮಹಾನಗರದಲ್ಲಿಯೂ ವರುಣ ಸುಮ್ಮನಿರಲ್ಲ.


ಬೆಂಗಳೂರು[ಅ. 04]  ರಾಜ್ಯದಲ್ಲಿ ಐದು ದಿನ ಭಾರೀ ಮಳೆ ಸಾಧ್ಯತೆ ಇದೆ. ಉತ್ತರ ಕರ್ನಾಟಕ, ಕರಾವಳಿಯಲ್ಲಿ ಹೆಚ್ಚು ಮಳೆ ಆಗಲಿದೆ ಎಂಬ ಶಾಕಿಂಗ್ ವಿಚಾರವನ್ನು ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್  ತಿಳಿಸಿದ್ದಾರೆ.

ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿ, ರಾಜ್ಯಕ್ಕೆ ಮತ್ತೆ ಐದು ದಿನ ವರುಣಾಘಾತ ಕಾದಿದೆ. ದಕ್ಷಿಣ ಒಳನಾಡು ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. 8ನೇ ತಾರೀಖು ಭಾರೀ ಮಳೆ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Latest Videos

undefined

ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಮೇಲ್ಮೈ ಸುಳಿಗಾಳಿ ಇದೆ. ಕೇರಳದಿಂದ 2.9 ಕಿಮೀ ವೇಗದಲ್ಲಿ ಮೋಡಗಳ ವಲನೆಯಿದೆ. ಬಳ್ಳಾರಿ, ಬೀದರ್, ತುಮಕೂರು, ಕೋಲಾರ, ಬೆಂಗಳೂರು, ಉಡುಪಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಯೂ ಗುರುವಾರ ಮಧ್ಯರಾತ್ರಿ ಧಾರಾಕಾರ ಮಳೆಯಾಗಿತ್ತು. ಇಂದು ಸಹ ಮೋಡ ಕವಿದ ವಾತಾವರಣ ಇದ್ದು  ಮೆಜಸ್ಟಿಕ್, ಕೆಆರ್ ಸರ್ಕಲ್, ಕೆಆರ್ ಮಾರುಕಟ್ಟೆ, ಆರ್ ಆರ್ ನಗರ, ಶಿವಾಜಿನಗರ, ವಿಲ್ಸನ್ ಗಾರ್ಡನ್, ವಸಂತನಗರ ಸೇರಿ ಹಲವು ಕಡೆ  ಮಳೆಯಾಗುತ್ತಲೇ ಇದೆ.

click me!