ಚಿಕ್ಕಲ್ಲೂರು ಜಾತ್ರೆಯಲ್ಲಿ ಮಾರಾಟ ಮಾಡಲು ಬೆಳೆದಿದ್ದ 101 ಕೆಜಿ ಗಾಂಜಾ ವಶಪಡಿಸಿದ ಬೆನ್ನಲ್ಲೇ ಚಾಮರಾಜನಗರದಲ್ಲಿ ಈಗ ಮತ್ತೊಮ್ಮೆ ಗಾಂಜಾ ಬೆಳೆದಿರುವುದು ಬೆಳಕಿಗೆ ಬಂದಿದೆ. ಕಲ್ಪವೃಕ್ಷದ ಕೆಳಗೇ ಗಾಂಜಾ ಗಿಡಗಳನ್ನು ಬೆಳೆದಿದ್ದ ರೈತನನ್ನು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ(ಜ.12): ಚಿಕ್ಕಲ್ಲೂರು ಜಾತ್ರೆಯಲ್ಲಿ ಮಾರಾಟ ಮಾಡಲು ಬೆಳೆದಿದ್ದ 101 ಕೆಜಿ ಗಾಂಜಾ ವಶಪಡಿಸಿದ ಬೆನ್ನಲ್ಲೇ ಚಾಮರಾಜನಗರದಲ್ಲಿ ಈಗ ಮತ್ತೊಮ್ಮೆ ಗಾಂಜಾ ಬೆಳೆದಿರುವುದು ಬೆಳಕಿಗೆ ಬಂದಿದೆ. ಕಲ್ಪವೃಕ್ಷದ ಕೆಳಗೇ ಗಾಂಜಾ ಗಿಡಗಳನ್ನು ಬೆಳೆದಿದ್ದ ರೈತನನ್ನು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ: ಭಂಗಿ ಸೇವೆಗೆ ಬೆಳೆದಿದ್ದ 101 ಕೆಜಿ ಗಾಂಜಾ ವಶ..!
ಗಾಂಜಾ ಬೆಳೆದಿದ್ದ ರೈತನನ್ನು ಬಂಧಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಅರಳಿಕಟ್ಟೆಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಲ್ಲಪ್ಪ ಬಂಧಿತ ಆರೋಪಿ. ತೋಟದಲ್ಲಿ ತೆಂಗಿನ ಮರದ ಕೆಳಗೆ ಅಕ್ರಮವಾಗಿ 3 ಗಾಂಜಾ ಗಿಡ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ 2.50 ಕೆ.ಜಿ. 50 ಸಾವಿರ ಮೌಲ್ಯದ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಡಿವೈಎಸ್ಪಿ ಮೋಹನ್ ಮಾರ್ಗದರ್ಶನದಲ್ಲಿ ಚಾಮರಾಜನಗರ ಗ್ರಾಮಾಂತರ ಠಾಣೆ ಪಿಎಸ್‌ಐ ಲೋಹಿತ್ ಕುಮಾರ್ ಸಿಬ್ಬಂದಿ ದೊಡ್ಡವೀರಶೆಟ್ಟಿ, ಗಿರೀಶ್, ಪ್ರದೀಪ್, ಮಹಾದೇವಸ್ವಾಮಿ, ಗಿರೀಶ್, ಸುನೀಲ್, ಚಾಲಕ ನಂಜಪ್ಪ ಅವರು ದಾಳಿಯಲ್ಲಿ ಭಾಗವಹಿಸಿದ್ದರು. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.