ಉದ್ಧವ್ ಉದ್ಧಟತನಕ್ಕೆ ಮರಾಠಿಗರಿಂದಲೇ ವಿರೋಧ: ಮೊದ್ಲು ಮಹಾರಾಷ್ಟ್ರದ ಸಮಸ್ಯೆ ಪರಿಹರಿಸಿ ಎಂದ ಜನ

By Suvarna News  |  First Published Jan 30, 2021, 11:45 AM IST

ಗಡಿಭಾಗದ ಮರಾಠಿಗರು ಕರ್ನಾಟಕದಲ್ಲಿ ಇದ್ದಿದ್ದು ದೇವರ ಆಶೀರ್ವಾದ| ಗಡಿ ಸಮಸ್ಯೆಗಿಂತ ಜ್ವಲಂತ ಸಮಸ್ಯೆಗಳು ಮಹಾರಾಷ್ಟ್ರದಲ್ಲಿವೆ| ನಿರುದ್ಯೋಗ ಸಮಸ್ಯೆ ಬಗೆಹರಿಸಿ ಮೂಲಸೌಕರ್ಯ ಕಲ್ಪಿಸಿ ಎಂದು ತಿವಿದ ಪ್ರಜ್ಞಾವಂತ ಮರಾಠಿಗರು| 


ಬೆಳಗಾವಿ(ಜ.30): ಪದೇ ಪದೆ ಗಡಿ ವಿವಾದ ಕೆಣಕುತ್ತಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಮರಾಠಿಗರೇ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಹೌದು, ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪ್ರಜ್ಞಾವಂತ ಮರಾಠಿಗರು ಉದ್ಧವ್ ಠಾಕ್ರೆ ವಿರುದ್ಧ ಹರಿಹಾಯ್ದಿದ್ದಾರೆ. 

ಗಡಿಭಾಗದ ಮರಾಠಿಗರು ಕರ್ನಾಟಕದಲ್ಲಿ ಇದ್ದಿದ್ದು ದೇವರ ಆಶೀರ್ವಾದವಾಗಿದೆ. ಮೊದಲು ಮಹಾರಾಷ್ಟ್ರದ ಮೂಲಸೌಕರ್ಯ ಸಮಸ್ಯೆಗಳನ್ನ ಬಗೆಹರಿಸಿ. ಗಡಿ ಸಮಸ್ಯೆಗಿಂತ ಜ್ವಲಂತ ಸಮಸ್ಯೆಗಳು ಮಹಾರಾಷ್ಟ್ರದಲ್ಲಿವೆ. ನಿರುದ್ಯೋಗ ಸಮಸ್ಯೆಯನ್ನ ಬಗೆಹರಿಸಿ ಮೂಲಸೌಕರ್ಯ ಕಲ್ಪಿಸಿ ಎಂದು ತಿವಿದಿದ್ದಾರೆ. 

Latest Videos

undefined

ಮತ್ತೆ ಠಾಕ್ರೆ ಉದ್ಧಟತನ;  'ಯಾರೇ ಬಂದರೂ ದೌರ್ಜನ್ಯ ಮಾಡ್ತಾರಂತೆ!

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದು ಸಿಎಂ ಉದ್ಧವ್ ಠಾಕ್ರೆ ಮಾಡಿದ ಟ್ವೀಟ್‌ಗೆ ಪ್ರಜ್ಞಾವಂತ ಮರಾಠಿಗರು ತೂಕ್ಷ್ಣವಾಗಿಯೇ ರಿಪ್ಲೈ ಮಾಡಿದ್ದಾರೆ. ಉದ್ಧವ್ ಠಾಕ್ರೆ ಮಾಡಿದ ಟ್ವೀಟ್‌ಗೆ ಮರಾಠಿಗರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಮೂಲಕ ಮರಾಠಿಗರಿಂದಲೇ ಠಾಕ್ರೆಗೆ ಮುಖಕ್ಕೆ ಮಸಿ ಬಳಿದಂತಾಗಿದೆ. 
 

click me!