ಮಾಜಿ ಸಚಿವ ವೆಂಕಟರಮಣಪ್ಪನವರ ಸಮ್ಮುಖದಲ್ಲಿ ಬುಧವಾರ ಪಟ್ಟಣದ ಪ್ರಭಾವಿ ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ಲತೀಫ್‌ಸಾಬ್ ಹಾಗೂ ಸೊಸೈಟಿಯ ನಂಜುಂಡಸ್ವಾಮಿ ಮತ್ತು ಅಪಾರ ಸಂಖ್ಯೆಯ ಬೆಂಬಲಿಗರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಪಾವಗಡ : ಮಾಜಿ ಸಚಿವ ವೆಂಕಟರಮಣಪ್ಪನವರ ಸಮ್ಮುಖದಲ್ಲಿ ಬುಧವಾರ ಪಟ್ಟಣದ ಪ್ರಭಾವಿ ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ಲತೀಫ್‌ಸಾಬ್ ಹಾಗೂ ಸೊಸೈಟಿಯ ನಂಜುಂಡಸ್ವಾಮಿ ಮತ್ತು ಅಪಾರ ಸಂಖ್ಯೆಯ ಬೆಂಬಲಿಗರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖಂಡ ನಂಜುಂಡಸ್ವಾಮಿ ನಲ್ಲಿ ತಟಸ್ಥರಾಗಿದ್ದು, ಜೆಡಿಎಸ್ ಪಕ್ಷಕ್ಕೆ ಸೇರಿದ್ದ ಮುಸ್ಲಿಂ ಮುಖಂಡ ಹಾಗೂ ಜಾಮಿಯಾ ಮಸೀದಿ ಮುತುವಲ್ಲಿ ಲತೀಫ್ ಸಾಬ್ ಮತ್ತು ಅವರ ಪುತ್ರ ಸಿಕಂದರ್,ನಿಜಮ್ ಅಲಿ,ಸಾದಿಕ್ , ಫ್ರೂಟ್ ಸಾದಿಕ್, ಶುಕೂರ್ ಸೇರಿ ಅಪಾರ ಸಂಖ್ಯೆಯ ಬೆಂಬಲಿಗರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಯುವ ಮುಖಂಡ, ಸಮಾಜ ಸೇವಕ ಎಲ್.ಸಿಕಂದರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳು ಹಾಗೂ ಶಾಸಕ ಎಚ್.ವಿ.ವೆಂಕಟೇಶ್ ಅವರ ಜನಪರ ಆಡಳಿತದ ಹಿನ್ನೆಲೆಯಲ್ಲಿ ತಾವು ಹಾಗೂ ತಮ್ಮ ತಂದೆ ಲತೀಫ್ ಸಾಬ್, ಬೆಂಬಲಿಗರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ. ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಹಿರಿಯ ಮುಖಂಡ ನಂಜುಂಡಸ್ವಾಮಿ ಮಾತನಾಡಿ, ನಾನು ಕಾಂಗ್ರೆಸ್ ನ ಸಕ್ರಿಯ ಮುಖಂಡನಾಗಿದ್ದು, ಕಾರಣಾಂತರಗಳಿಂದ ಪಕ್ಷದಿಂದ ದೂರ ಸರಿದಿದ್ದೆ. ಇನ್ನೂ ಮುಂದೆ ಮಾಜಿ ಸಚಿವ ವೆಂಕಟರಮಣಪ್ಪನವರ ನಾಯಕತ್ವದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ಹೇಳಿದರು.
ತಾಲೂಕು ಅಲ್ಪ ಸಂಖ್ಯಾತ ಸಮಾಜದ ಮುಖಂಡ ಅನ್ವರ್‌ಸಾಬ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್‌ಬಾಬು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶೇಷಗಿರಿಯಪ್ಪ, ಪುರಸಭಾ ಸದಸ್ಯ ಪಿ.ಎಚ್.ರಾಜೇಶ್, ತೆಂಗಿನಕಾಯಿ ರವಿ, ಬಾಲಸುಬ್ರಮಣ್ಯಂ, ಮಹಮ್ಮದ್ ಇಮ್ರಾನ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಆರ್.ಕೆ.ನಿಸಾರ್ ಆಹಮ್ಮದ್, ಮಹಮ್ಮದ್ ಅಲಿ, ಆರ್.ಎ.ಹನುಮಂತರಾಯಪ್ಪ, ಶಂಷುದ್ದೀನ್, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಬಾಬು, ನಗರ ಘಟಕದ ರಿಜ್ವಾನ್ ಉಲ್ಲಾ, ಎಂಎಜಿ ಫಯಾಜ್, ರೋಹಿಣಿ ಜ್ಯೂವೆಲರ್ ರೋಹಿತ್, ತಲೇಶ್, ಸ್ಟುಡಿಯೋ ಅಮರ್, ಟಿಪ್ಪು, ಪಾಪಣ್ಣ, ಹನುಮೇಶ್ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.