ಗಂಗಾವತಿ: ಜೈ ಶ್ರೀರಾಮ್ ಎಂದಿದ್ದಕ್ಕೆ ಮುಸ್ಲಿಂ ಗೆಳಯನಿಂದ ಹಲ್ಲೆ..!

By Kannadaprabha News  |  First Published Apr 25, 2024, 12:19 PM IST

ಫಿರೋಜ್‌ಖಾನ್ ಮತ್ತು ಇತರ 25 ಜನ ಸೇರಿ ನನ್ನ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆಂದು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ ಕುಮಾರ ರಾಠೋಡ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಗಂಗಾವತಿ(ಏ.25): ಬಾರ್‌ನಲ್ಲಿ ಸಾರಾಯಿ ಗ್ಲಾಸಿಗೆ ನೀರು ಹಾಕುವ ವೇಳೆ ಜೈ ಶ್ರೀರಾಮ್ ಅಂತ ಹೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆದ ಘಟನೆ ತಾಲೂಕಿನ ಶ್ರೀರಾಮನಗರದಲ್ಲಿ ಮಂಗಳ ವಾರ ರಾತ್ರಿ ನಡೆದಿದೆ.

ಇಲ್ಲಿಯ ಸನ್‌ಶೈನ್ ಬಾರ್ ನಲ್ಲಿ ಕುಮಾರ ರಾಠೋಡ ಎಂಬಾತ ಮದ್ಯಪಾನ ಮಾಡುತ್ತಿದ್ದ. ಅದೇ ಸಂದರ್ಭದಲ್ಲಿ ಆತನಿದ್ದ ಟೇಬಲ್‌ಗೆ ಪರಿಚಯಸ್ಥ ಫಿರೋಜ್‌ಖಾನ್ ಬಂದ. ಇಬ್ಬರೂ ಮದ್ಯಪಾನ ಮಾಡಲು ಆರಂಭಿಸಿದರು. ಸಾರಾಯಿ ಗ್ಲಾಸ್‌ಗೆ ನೀರು ಹಾಕು ಎಂದು ಫಿರೋಜ್ ಖಾನ್ ಹೇಳಿದಾಗ ಕುಮಾರ ರಾಠೋಡ್ ಜೈ ಶ್ರೀರಾಮ ಎಂದು ಹೇಳಿ ಗ್ಲಾಸ್‌ಗೆ ನೀರು ಹಾಕಿದ್ದಾನೆ.

Tap to resize

Latest Videos

undefined

ಕೈ ಎತ್ತಿ ಜೈ ಶ್ರೀರಾಮ್ ಘೋಷಣೆ ಕೂಗಿದ ಉದ್ಯಮಿ, ಕಿಸೆಯಲ್ಲಿದ್ದ 36,000 ರೂ ಮಾಯ!

ಆಗ ಫಿರೋಜ್‌ಖಾನ್ ಜೈ ಶ್ರೀರಾಮ್ ಘೋಷಣೆ ಏಕೆ ಕೂಗಿದೆ ಎಂದು ಆಕ್ಷೇಪಿಸಿದಾಗ ಇಂದು ಹನುಮ ಜಯಂತಿ ಇರುವುದರಿಂದಶ್ರೀರಾಮನನ್ನು ಸ್ಮರಿಸಿ ನೀರು ಹಾಕಿದ್ದೇನೆ ಎಂದು ಕುಮಾರ ಹೇಳಿದ್ದಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಹೊಡೆದಾ ಡಿಕೊಂಡಿದ್ದಾರೆ.

ಫಿರೋಜ್‌ಖಾನ್ ಮತ್ತು ಇತರ 25 ಜನ ಸೇರಿ ನನ್ನ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆಂದು ಗ್ರಾಮೀಣ ಪೊಲೀಸ್ ಠಾಣೆಗೆ ಕುಮಾರ ರಾಠೋಡ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

click me!