ವಿಧಾನಸಭೆ ಪ್ರಥಮ ಪ್ರವೇಶಕ್ಕೆ ಹಲವಾರು ಮಂದಿಯ ಯತ್ನ

By Kannadaprabha News  |  First Published Apr 25, 2023, 12:02 PM IST

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ 15 ಕ್ಷೇತ್ರಗಳಿಂದ ಹಲವಾರು ಮಂದಿ ವಿಧಾನಸಭೆಯ ಪ್ರಥಮ ಪ್ರವೇಶಕ್ಕೆ ಯತ್ನಿಸುತ್ತಿದ್ದಾರೆ.


 ಅಂಶಿ ಪ್ರಸನ್ನಕುಮಾರ್‌

 ಮೈಸೂರು : ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ 15 ಕ್ಷೇತ್ರಗಳಿಂದ ಹಲವಾರು ಮಂದಿ ವಿಧಾನಸಭೆಯ ಪ್ರಥಮ ಪ್ರವೇಶಕ್ಕೆ ಯತ್ನಿಸುತ್ತಿದ್ದಾರೆ.

Latest Videos

undefined

ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಯ ಟಿ.ಎಸ್‌. ಶ್ರೀವತ್ಸ ಮೊದಲ ಪ್ರಯತ್ನ. ಜೆಡಿಎಸ್‌ನ ಕೆ.ವಿ. ಮಲ್ಲೇಶ್‌ ಎರಡನೇ ಪ್ರಯತ್ನ

ಚಾಮರಾಜದಲ್ಲಿ ಕಾಂಗ್ರೆಸ್‌ನ ಕೆ. ಹರೀಶ್‌ಗೌಡರ ಎರಡನೇ ಪ್ರಯತ್ನ. ಅವರು ಕಳೆದ ಬಾರಿ ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿದ್ದರು. ಜೆಡಿಎಸ್‌ನ ಎಚ್‌.ಕೆ. ರಮೇಶ್‌ ಇದು ಮೊದಲ ಪ್ರಯತ್ನ.

ನರಸಿಂಹರಾಜದಲ್ಲಿ ಎಸ್‌ಡಿಪಿಐನ ಅಬ್ದುಲ್‌ ಮಜೀದ್‌ ಹಾಗೂ ಬಿಜೆಪಿಯ ಸಂದೇಶ್‌ ಸ್ವಾಮಿ ಮೂರನೇ ಪ್ರಯತ್ನ (ಮೊದಲ ಬಾರಿ ಜೆಡಿಎಸ್‌) ಅಭ್ಯರ್ಥಿಯಾಗಿದ್ದರು. ಜೆಡಿಎಸ್‌ನ ಅಬ್ದುಲ್‌ ಖಾದರ್‌ ಅವರದು ಮೊದಲ ಯತ್ನ.

ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌ನ ಎಸ್‌. ಸಿದ್ದೇಗೌಡ, ಬಿಜೆಪಿಯ ವಿ. ಕವೀಶ್‌ಗೌಡ, ಟಿ. ನರಸೀಪುರದಲ್ಲಿ ಬಿಜೆಪಿಯ ಡಾ.ರೇವಣ್ಣ, ನಂಜನಗೂಡಿನಲ್ಲಿ ಕಾಂಗ್ರೆಸ್‌ನ ದರ್ಶನ್‌, ಎಚ್‌.ಡಿ. ಕೋಟೆಯಲ್ಲಿ ಜೆಡಿಎಸ್‌ನ ಸಿ. ಜಯಪ್ರಕಾಶ, ಬಿಜೆಪಿಯ ಕೆ.ಎಂ. ಕೃಷ್ಣನಾಯಕ, ಹುಣಸೂರಿನಲ್ಲಿ ಜೆಡಿಎಸ್‌ನ ಜಿ.ಡಿ. ಹರೀಶ್‌ಗೌಡರದ್ದು ಮೊದಲ ಪ್ರಯತ್ನ. ಬಿಜೆಪಿಯ ದೇವರಹಳ್ಳಿ ಸೋಮಶೇಖರ್‌ ಎರಡನೇ ಪ್ರಯತ್ನ. ಸೋಮಶೇಖರ್‌ 2019ರ ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು.

ಕೆ.ಆರ್‌. ನಗರದಲ್ಲಿ ಕಾಂಗ್ರೆಸ್‌ನ ಡಿ. ರವಿಶಂಕರ್‌, ಬಿಜೆಪಿಯ ಹೊಸಹಳ್ಳಿ ವೆಂಕಟೇಶ್‌ ಅವರದ್ದು ಎರಡನೇ ಪ್ರಯತ್ನ. ವೆಂಕಟೇಶ್‌ ಕಳೆದ ಬಾರಿ ಪಕ್ಷೇತರರಾಗಿದ್ದರು.

ಚಾಮರಾಜನಗರದಲ್ಲಿ ಬಿಎಸ್ಪಿಯ ಹ.ರಾ. ಮಹೇಶ್‌, ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ನ ಎಚ್‌.ಎಂ. ಗಣೇಶಪ್ರಸಾದ್‌, ಜೆಡಿಎಸ್‌ನ ಕಡಬೂರು ಮಂಜುನಾಥ್‌, ಕೊಳ್ಳೇಗಾಲದಲ್ಲಿ ಜೆಡಿಎಸ್‌ನ ಪುಟ್ಟಸ್ವಾಮಿ ಅವರದು ಪ್ರಥಮ ಪ್ರಯತ್ನ. ಹನೂರಿನಲ್ಲಿ ಬಿಜೆಪಿಯ ಡಾ. ಪ್ರೀತನ್‌ ನಾಗಪ್ಪ ಹಾಗೂ ಜೆಡಿಎಸ್‌ನ ಎಂ.ಆರ್‌. ಮಂಜುನಾಥ್‌ ಅವರದ್ದು ಎರಡನೇ ಪ್ರಯತ್ನ.

ಇದಲ್ಲದೇ ಬಿಎಸ್ಪಿ, ಆಮ್‌ ಆದ್ಮಿಪಾರ್ಟಿ, ಎಸ್‌ಯುಸಿಐ, ಉತ್ತಮ ಪ್ರಜಾಕೀಯ, ಕೆಆರ್‌ಎಸ್‌ ಪಾರ್ಟಿಯಿಂದಲೂ ಎಲ್ಲೆಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

JDSನಿಂದ ಕಾಂಗ್ರೆಸ್‌ಗೆ ಬೆಂಬಲ

 ನಂಜನಗೂಡು :  ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ ಪರ ಬೆಂಬಲ ಘೋಷಿಸಿದರು.

 ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿ,  ಅವರು ಸಜ್ಜನ ರಾಜಕಾರಣಿ, ಅವರು ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲರೊಡನೆ ಒಡನಾಟ ಹೊಂದಿದ್ದರು. ಸದಾಕಾಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ಹಠಾತ್‌ ನಿಧನ ಮತ್ತು ಅವರ ಪತ್ನಿ ವೀಣಾ ಅವರ ನಿಧನದಿಂದ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಅಭ್ಯರ್ಥಿ ಹಾಕದೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ದರ್ಶನ್‌ ಧ್ರುವನಾರಾಯಣ ಗೆಲುವಿಗೆ ಶ್ರಮಿಸಬೇಕು ಎಂದರು.

ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌ ಮಾತನಾಡಿ, 2019ರ ಲೋಕಸಭೆ ಚುನಾವಣೆಯ ವೇಳೆಯೂ ಜೆಡಿಎಸ್‌ ಪಕ್ಷ ನನ್ನ ತಂದೆಗೆ ಸಹಕಾರ ನೀಡಿತ್ತು. ಕ್ಷೇತ್ರದಲ್ಲಿ 2018ರ ಉಪ ಚುನಾವಣೆಯಲ್ಲಿಯೂ ಅಭ್ಯರ್ಥಿ ನಿಯೋಜಿಸದೆ ಸಹಕಾರ ನೀಡಿತ್ತು. ಈ ಬಾರಿ ನನ್ನ ತಂದೆ ತಾಯಿಯನ್ನು ಕಳೆದುಕೊಂಡಿರುವ ನನಗೆ ಸಾಂತ್ವನ ಹೇಳಲು ಅಭ್ಯರ್ಥಿ ಹಾಕದೆ ಬೆಂಬಲ ನೀಡಿರುವುದಕ್ಕೆ ಮೊದಲು ಜೆಡಿಎಸ್‌ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀವೆಲ್ಲರೂ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಮರೆದು ಒಟ್ಟಾಗಿ ದುಡಿದು ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಸಹಕರಿಸಿ ನಾನು ಚುನಾವಣೆಯಲ್ಲಿ ಆರಿಸಿ ಬಂದಲ್ಲಿ ಜೆಡಿಎಸ್‌ ಕಾರ್ಯಕರ್ತರನ್ನೂ ಸಹ ಗೌರವಯುತವಾಗಿ ನಡೆಸಿಕೊಳ್ಳುತ್ತೇನೆ ಎಂದರು.

click me!