ಮೈಸೂರು ಜಿಲ್ಲೆಯಲ್ಲಿ - 143 ಮಂದಿ ಕಣದಲ್ಲಿ : 29 ಮಂದಿ ನಾಮಪತ್ರ ವಾಪಸ್‌

By Kannadaprabha News  |  First Published Apr 25, 2023, 11:53 AM IST

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಸೋಮವಾರ ಮೈಸೂರು ಜಿಲ್ಲೆಯಲ್ಲಿ 29 ಮಂದಿ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದರು.


  ಮೈಸೂರು :  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಸೋಮವಾರ ಮೈಸೂರು ಜಿಲ್ಲೆಯಲ್ಲಿ 29 ಮಂದಿ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದರು.

ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಏ. 20ರಂದು ಒಟ್ಟು 276 ಸಲ್ಲಿಕೆಯಾಗಿತ್ತು. ಈ ಪೈಕಿ 29 ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದು, ಪ್ರಸ್ತುತ 143 ಮಂದಿ ಕಣದಲ್ಲಿದ್ದಾರೆ. ಈ ಪೈಕಿ 131 ಮಂದಿ ಪುರುಷರು, 12 ಮಂದಿ ಮಹಿಳೆಯರು ಇದ್ದಾರೆ.

Latest Videos

undefined

ಬಿಜೆಪಿಯಿಂದ 11, ನಿಂದ 11, ಆಮ್‌ ಆದ್ಮಿಯಿಂದ 10, ಬಿಎಸ್ಪಿಯಿಂದ 10, ಜೆಡಿಎಸ್‌ನಿಂದ 10 ವಿವಿಧ ಸಂಘಟನೆ ಬೆಂಬಲಪಡೆದ 40 ಮಂದಿ ಹಾಗೂ ಪಕ್ಷೇತರರು ಸೇರಿ 143 ಮಂದಿ ಕಣದಲ್ಲಿ ಉಳಿದಿದ್ದಾರೆ.

ಕೃಷ್ಣರಾಜ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಕ್ಷ್ಮೀನಾರಾಯಣ ರಾವ್‌, ಹುಣಸೂರು ವಿಧಾನಸಭಾ ಕ್ಷೇತ್ರದ ಪಿ.ಎ. ಯಡಿಯೂರಪ್ಪ ಮತ್ತು ಬೀರೇಶ್‌, ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಕೆ.ವಿ. ರಘು, ಪರಶಿವನಾಯಕ, ಮಹದೇವ, ಎಚ್‌.ಎ. ಸುರೇಶ, ಡಿ. ರಾಮಯ್ಯ, ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಸುಹೇಲ್‌ ಬೇಗ್‌ ಮತ್ತು ಅಕಿಲ್‌ ಅಹಮ್ಮದ್‌, ವರುಣ ಕ್ಷೇತ್ರದಲ್ಲಿ ಎಲ್‌. ಕುಮಾರ್‌, ಖಲೀಲ್‌ ಉಲ್ಲಾ, ಗಿರೀಶ್‌, ಗುರುಲಿಂಗಯ್ಯ, ಕೆ.ಎಸ್‌. ಮಾದಪ್ಪ, ಬಿ. ಶಿವಣ್ಣ, ಸಿದ್ದು, ವಿ. ಸಿದ್ದರಾಜು, ಸುರೇಶ ಮತ್ತು ವಿ.ಪಿ. ಸುಶೀಲಾ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಆದರೆ ಬಿಎಸ್ಪಿ ಅಭ್ಯರ್ಥಿಯಾಗಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಅವರು ಕಣದಲ್ಲಿ ಉಳಿದಿರುವುದು ರೋಚಕ ಹೋರಾಟದ ಚಿತ್ರಣ ಮೂಡಿಸಿದೆ.

ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಪಿ.ಎಸ್‌. ಯಡೂರಪ್ಪ, ನರಸಿಂಹರಾಜ ಕ್ಷೇತ್ರದಲ್ಲಿ ಅಮ್ಜದ್‌ ಖಾನ, ಅಜೀಜ್‌ ಉಲ್ಲ ಅಜ್ಜು, ವಿ. ಗಿರಿಧರ್‌, ಅಯೂಬ್‌ಖಾನ್‌, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿ. ಪ್ರಕಾಶ ಮತ್ತು ಟಿ. ನರಸೀಪುರ ಕ್ಷೇತ್ರದಲ್ಲಿ ಮೂವರು ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದಾರೆ.

ಟಿ. ನರಸೀಪುರದಲ್ಲಿ ಎಂ. ಕುಮಾರ ಕ್ರಾಂತಿ, ಬಿ. ಮಹದೇವ, ಸಿ.ಪಿ. ಸುರೇಂದ್ರನಾಥ- ಮೂವರು ನಾಮಪತ್ರ ವಾಪಸ್‌ ಪಡೆದಿದ್ದು,. 12 ಮಂದಿ ಕಣದಲ್ಲಿದ್ದಾರೆ.

ನಂಜನಗೂಡು, ಎಚ್‌.ಡಿ. ಕೋಟೆ ಕ್ಷೇತ್ರದಲ್ಲಿ ನಾಮಪತ್ರ ಯಾರೂ ಹಿಂದಕ್ಕೆ ಪಡೆದಿಲ್ಲ.

ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ವಿವರ

ಕೃಷ್ಣರಾಜ: ಟಿ.ಎಸ್‌. ಶ್ರೀವತ್ಸ- ಬಿಜೆಪಿ, ಎಂ.ಕೆ. ಸೋಮಶೇಖರ್‌- ಕಾಂಗ್ರೆಸ್‌, ಕೆ.ವಿ. ಮಲ್ಲೇಶ್‌- ಜೆಡಿಎಸ್‌

ಚಾಮರಾಜ: ಎಲ್‌. ನಾಗೇಂದ್ರ- ಬಿಜೆಪಿ, ಕೆ. ಹರೀಶ್‌ಗೌಡ- ಕಾಂಗ್ರೆಸ್‌, ಎಚ್‌.ಕೆ. ರಮೇಶ್‌- ಜೆಡಿಎಸ್‌, ಮಾಲವಿಕ ಗುಬ್ಬಿವಾಣಿ- ಆಮ್‌ ಆದ್ಮಿ ಪಾರ್ಟಿ

ನರಸಿಂಹರಾಜ: ಸಂದೇಶ್‌ ಸ್ವಾಮಿ- ಬಿಜೆಪಿ, ತನ್ವೀರ್‌ ಸೇಠ್‌- ಕಾಂಗ್ರೆಸ್‌, ಅಬ್ದುಲ್‌ ಖಾದರ್‌- ಜೆಡಿಎಸ್‌, ಅಬ್ದುಲ್‌ ಮಜೀದ್‌- ಎಸ್‌ಡಿಪಿಐ, ಧರ್ಮಶ್ರೀ- ಆಮ್‌ ಆದ್ಮಿಪಾರ್ಟಿ

ಚಾಮುಂಡೇಶ್ವರಿ: ವಿ. ಕವೀಶ್‌ಗೌಡ- ಬಿಜೆಪಿ, ಎಸ್‌. ಸಿದ್ದೇಗೌಡ- ಕಾಂಗ್ರೆಸ್‌, ಜಿ.ಟಿ. ದೇವೇಗೌಡ- ಜೆಡಿಎಸ್‌

ವರುಣ: ವಿ. ಸೋಮಣ್ಣ- ಬಿಜೆಪಿ, ಸಿದ್ದರಾಮಯ್ಯ- ಕಾಂಗ್ರೆಸ್‌, ಡಾ.ಎನ್‌.ಎಲ್‌. ಭಾರತೀಶಂಕರ್‌- ಜೆಡಿಎಸ್‌, ಎಂ. ಕೃಷ್ಣಮೂರ್ತಿ- ಬಿಎಸ್ಪಿ

ಟಿ. ನರಸೀಪುರ: ಡಾ.ರೇವಣ್ಣ- ಬಿಜೆಪಿ, ಡಾ.ಎಚ್‌.ಸಿ. ಮಹದೇವಪ್ಪ- ಕಾಂಗ್ರೆಸ್‌, ಎಂ. ಅಶ್ವಿನ್‌ಕುಮಾರ್‌- ಜೆಡಿಎಸ್‌, ಬಿ.ಆರ್‌. ಪುಟ್ಟಸ್ವಾಮಿ- ಬಿಎಸ್ಪಿ, ಸೋಸಲೆ ಸಿದ್ದರಾಜು- ಆಮ್‌ ಆದ್ಮಿ ಪಾರ್ಟಿ

ನಂಜನಗೂಡು: ಬಿ. ಹರ್ಷವರ್ಧನ್‌- ಬಿಜೆಪಿ, ದರ್ಶನ್‌ ಧ್ರುವನಾರಾಯಣ- ಕಾಂಗ್ರೆಸ್‌, ಜೆಡಿಎಸ್‌- ಸ್ಪರ್ಧೆ ಇಲ್ಲ

ಎಚ್‌.ಡಿ. ಕೋಟೆ: ಕೆ.ಎಂ. ಕೃಷ್ಣನಾಯಕ- ಬಿಜೆಪಿ, ಅನಿಲ್‌ ಚಿಕ್ಕಮಾದು- ಕಾಂಗ್ರೆಸ್‌, ಜಯಪ್ರಕಾಶ್‌ ಚಿಕ್ಕಣ್ಣ- ಜೆಡಿಎಸ್‌

ಹುಣಸೂರು: ದೇವರಹಳ್ಳಿ ಸೋಮಶೇಖರ್‌- ಬಿಜೆಪಿ, ಎಚ್‌.ಪಿ. ಮಂಜುನಾಥ್‌- ಕಾಂಗ್ರೆಸ್‌, ಜಿ.ಡಿ. ಹರೀಶ್‌ಗೌಡ- ಜೆಡಿಎಸ್‌

ಪಿರಿಯಾಪಟ್ಟಣ: ಸಿ.ಎಚ್‌. ವಿಜಯಶಂಕರ್‌- ಬಿಜೆಪಿ, ಕೆ. ವೆಂಕಟೇಶ್‌- ಕಾಂಗ್ರೆಸ್‌, ಕೆ. ಮಹದೇವ್‌- ಜೆಡಿಎಸ್‌

ಕೆ.ಆರ್‌. ನಗರ: ಹೊಸಹಳ್ಳಿ ವೆಂಕಟೇಶ್‌- ಬಿಜೆಪಿ, ಡಿ. ರವಿಶಂಕರ್‌- ಕಾಂಗ್ರೆಸ್‌, ಸಾ.ರಾ. ಮಹೇಶ್‌- ಜೆಡಿಎಸ್‌

click me!