ಮಧು ಬಂಗಾರಪ್ಪರನ್ನು ಬಿಜೆಪಿಗೆ ಆಹ್ವಾನಿಸಿದ ಕುಮಾರ್ ಬಂಗಾರಪ್ಪ..!

By Kannadaprabha News  |  First Published Dec 14, 2020, 3:51 PM IST

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದೇ ಬೆನ್ನಲ್ಲೇ ಪಕ್ಷಾಂತರಗಳು ನಡೆಯುತ್ತಿದ್ದು, ವಿವಿಧ ಪಕ್ಷಗಳಲ್ಲಿ  ಗೆಲುವಿಗಾಗಿ ಕಸರತ್ತು ನಡೆಯುತ್ತಿದೆ. ಇನ್ನು ರಾಜಕೀಯದಲ್ಲಿ ಹೊಸ ಹೊಸ ತಿರುವುಗಳು ಆರಂಭವಾಗಿದೆ.


ಸೊರಬ (ಡಿ.14):  ತಾಲೂಕಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲದಂತಾಗಿದ್ದು, ಹಿಂದಿನ ಶಾಸಕರ ಅವಧಿ ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿದೆ. ಮಾಜಿ ಶಾಸಕರು ಆಗೊಮ್ಮೆ, ಈಗೊಮ್ಮೆ ತಾಲೂಕಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ಬೀಗುವುದರಲ್ಲಿ ನಿರತರಾಗಿದ್ದಾರೆ ಎಂದು ಶಾಸಕ ಕುಮಾರ ಬಂಗಾರಪ್ಪ ಲೇವಡಿ ಮಾಡಿದರು.

ಪಟ್ಟಣದ ಧೂಪದ ಮಠ ಸಭಾಂಗಣದಲ್ಲಿ ಬಿಜೆಪಿಯ ಗ್ರಾಮ ಸ್ವರಾಜ್ಯ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಕುಮಾರ್‌ ಬಂಗಾರಪ್ಪ, ಮಧುಬಂಗಾರಪ್ಪ ಒಂದಾಗಿ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಸುಳ್ಳುಸುದ್ದಿ ಹರಡಲಾಗುತ್ತಿದೆ. ಸಂಸಾರದಲ್ಲಿ ಅಣ್ಣ-ತಮ್ಮಂದಿರು ಒಂದಾಗಬೇಕೆಂಬ ಮಾತು ಸರಿಯಾದರೂ, ರಾಜಕೀಯವಾಗಿ ಸಲ್ಲದು. ತಾವು ಬಿಜೆಪಿಯ ಕಟ್ಟಾಳಾಗಿದ್ದು, ತಾವೆಂದೆಂದಿಗೂ ಬಿಜೆಪಿಯವರೇ ಆಗಿದ್ದೇವೆ. ಇನ್ನು ಅಸ್ತಿತ್ವದಲ್ಲೇ ಇಲ್ಲದ ಮಧು ಬಂಗಾರಪ್ಪ ಬಿಜೆಪಿಗೆ ಸೇರಿ ಶಕ್ತಿ ತುಂಬಿಕೊಳ್ಳುವುದಾದರೇ ತುಂಬಿಕೊಳ್ಳಲಿ ಎಂದರು.

Latest Videos

undefined

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಹತ್ವದ ಘೋಷಣೆ...! ...

ರಾಜ್ಯ ಮತ್ತು ಜಿಲ್ಲಾ ಸಮಿತಿ ತೀಮರ್ಮಾನದಂತೆ ಪ್ರತಿಯೊಬ್ಬರೂ ತಮ್ಮ ಅಸಮಾಧಾನಗಳನ್ನೆಲ್ಲ ತೊರೆದು, ಒಗ್ಗಟ್ಟಾಗಿ ಗ್ರಾಪಂ ಚುನಾವಣೆಯಲ್ಲಿ ಪಾಲ್ಗೊಂಡು ಎಲ್ಲ ಕಡೆ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆ ಆಗುವಲ್ಲಿ ಸಹಕರಿಸಬೇಕು. ಸೊರಬದಲ್ಲಿ ಹರತಾಳು ಹಾಲಪ್ಪ ಶಾಸಕರಿದ್ದಾಗಲೇ ಕಮಲ ಅರಳಿ ಭದ್ರಬುನಾದಿ ಹಾಕಿಕೊಂಡಿದೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲೆಯ ಎಲ್ಲ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ, ರುದ್ರೇಗೌಡ್ರು, ಭಾರತಿ ಶೆಟ್ಟಿಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದರ ಫಲವಾಗಿ ಸೊರಬ ಕ್ಷೇತ್ರ ಪ್ರಗತಿಯತ್ತ ಸಾಗಿದೆ ಎಂದು ಹೇಳಿದರು.

ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸೊರಬವನ್ನು ಪುರಸಭೆಯನ್ನಾಗಿ ಆನವಟ್ಟಿಯನ್ನು ಪಪಂ ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ. ರಾಷ್ಟ್ರೀಯ ಜನಗಣತಿ ಮುಕ್ತಾಯದ ನಂತರ ಪಾರ್ಲಿಮೆಂಟ್‌ ಡಿಲೇಷನ್‌ 2021-22ರಲ್ಲಿ ಆಗಲಿದೆ. ಗ್ರಾಪಂ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ಕೋವಿಡ್‌ ನಿಯಮಾವಳಿ ಪ್ರಕಾರ ಚುನಾವಣೆ ನಡೆಸಬೇಕು. ಈಗ 2ನೇ ಹಂತದಲ್ಲಿ 41 ಗ್ರಾಪಂಗಳ ಪೈಕಿ ಡಿಸೆಂಬರ್‌ 27ರಂದು 36 ಗ್ರಾಪಂಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಇನ್ನುಳಿದ ಗ್ರಾಪಂ ಹೊಸ ವಾರ್ಡ್‌ಗಳ ಸೇರ್ಪಡೆಯ ನಂತರ, ಹೊಸ ಗ್ರಾಪಂಗಳನ್ನು ಸರ್ಕಾರ ಮಾಡಿದ ನಂತರ ಸೊರಬ ಪುರಸಭೆಗೆ ಸೇರಿದ ಹೊಸ ವಾರ್ಡ್‌ಗಳಿಗೆ ಹಾಗೂ ಆನವಟ್ಟಿಪಪಂಗೆ ಚುನಾವಣೆ ನಡೆಯಲಿದೆ ಎಂದರು.

ಡಿಕೆಶಿ ಖುದ್ದು ಭೇಟಿಯಾಗಿ ಬೇಡವೆಂದ್ರೂ ದೇವೇಗೌಡ್ರ ಮನೆಗೆ ಹೋದ ಕಾಂಗ್ರೆಸ್ ಹಿರಿಯ ನಾಯಕ...

ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿಮಾತನಾಡಿ, ಅಧಿಕಾರ ವಿಕೇಂದ್ರಿಕರಣ ಚುನಾವಣೆ ಗ್ರಾಪಂ ಚುನಾವಣೆಯಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಗ್ರಾಮರಾಜ್ಯ ಸ್ವರಾಜ್ಯವಾಗಬೇಕು ಎಂದಿದ್ದಾರೆ. ಈ ನಿಟ್ಟಿನಲ್ಲಿ 552 ಗ್ರಾಪಂ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿದ ಸವಲತ್ತುಗಳು ಪ್ರತಿ ಕುಟುಂಬಕ್ಕೂ ಲಭಿಸಿವೆ. ದೇಶದ ಗಡಿ ರಕ್ಷಣೆಗೆ ಜಿಎಸ್‌ಟಿ, ರೈತರಿಗೆ ತೊಂದರೆಯಾಗದಂತಹ ಬಜೆಟ್‌ಗಳು ಅನುಮೋದನೆಗಳಿಗೆ ದೇಶ ಮುಂದಾಗಿದೆ. ರಾಜ್ಯದಲ್ಲಿ ಒಣಭೂಮಿ ಶೇ.28%ರಷ್ಟರಲ್ಲಿ ಕೈಗಾರಿಕೆಗಳು ಶೇ.1.19%ರಷ್ಟುತೆಗೆದುಕೊಂಡಿದೆ. ಆರ್ಟಿಕಲ್‌ 370 ಸೇರಿ ಹಲವು ಶಾಸನಗಳನ್ನು ಜಾರಿಗೆ ತಂದ ಮೇಲೂ ಬೇರೆ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಹಾಗೂ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳು ಬಿಜೆಪಿಗೆ ಲಭಿಸಿವೆ ಗ್ರಾಪಂಗಳಲ್ಲೂ ಕಾರ್ಯಕರ್ತರು ಬಿಜೆಪಿ ಆಡಳಿತಕ್ಕೆ ಬರುವಂತೆ ಚುನಾವಣೆ ನಡೆಸಿ ಎಂದರು.

ತಾಲೂಕು ಪ್ರಬಾರಿ ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಸತೀಶ್‌ ತತ್ತೂರು, ರಾಜಶೇಖರ ಗಾಳಿಪುರ, ಮಾಜಿ ಜಿಪಂ ಸದಸ್ಯೆ ದೇವಕಿ ಪಾಣಿರಾಜಪ್ಪ, ಲಲಿತಾ ನಾರಾಯಣ್‌, ತಾಪಂ ಸದಸ್ಯ ಪುರುಷೋತ್ತಮ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಗುರುಪ್ರಸನ್ನ ಗೌಡ ಬಾಸೂರು, ಕೊಟ್ರೇಶ್‌ ಗೌಡ ಚಿಕ್ಕಾವಲಿ, ಶಿವಕುಮಾರ್‌ ಕಡಸೂರು, ಎಂ.ಕೆ. ಯೋಗೇಶ್‌ ವಕೀಲರು, ದೇವೆಂದ್ರಪ್ಪ ಚೆನ್ನಾಪುರ, ಗಜಾನನರಾವ್‌ ಉಳವಿ, ಎ.ಎಲ್‌. ಅರವಿಂದ್‌, ಪಾಣಿರಾಜಪ್ಪ, ಈಶ್ವರ ಚೆನ್ನಪಟ್ಣ, ದಿವಾಕರಭಾವೆ, ಮಧುಕೇಶ್ವರ್‌ ಆನವಟ್ಟಿ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಜಿಲ್ಲಾ ಮುಖಂಡ ಧರ್ಮಪ್ಪ ಇತರರಿದ್ದರು.

click me!