ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಹಿರಿಯ ಮುಖಂಡರು ಅವರನ್ನು ಬರಮಾಡಿಕೊಂಡರು
ಶಿಡ್ಲಘಟ್ಟ (ನ.30): ತತ್ವ ಸಿದ್ದಾಂತಗಳ ಮೇಲೆ ನಂಬಿಕೆ ಇಟ್ಟು ಪಕ್ಷಕ್ಕೆ ಬರುವ ಎಲ್ಲರಿಗೂ ಸ್ವಾಗತ ಎಂದು ಜೆಡಿಎಸ್ ಪಕ್ಷದ ಮುಖಂಡ ಮೇಲೂರು ರವಿಕುಮಾರ್ ತಿಳಿಸಿದರು.
ತಾಲೂಕಿನ ತಿಮ್ಮನಾಯಕನ ಹಳ್ಳಿ ಪಂಚಾಯತಿಯ ಯರ್ರಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್‌ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಿಮ್ಮನಾಯಕಹಳ್ಳಿ ಪಂಚಾಯತಿಗೆ ಸೇರಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಮುಂದಿನ ತಿಂಗಳಿನಿಂದ ತಾಲೂಕಿನ ಎಲ್ಲಾ ಕಡೆ ಪ್ರವಾಸ ಕೈಗೊಂಡು ಪಕ್ಷದ ಕಾರ್ಯಕರ್ತರ ಸಂಘಟನೆ ಮಾಡುವುದಾಗಿ ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ: ಇಬ್ಬರು ಶಾಸಕರುಗಳಿಗೆ ನೋಟಿಸ್..! .
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿದರು, ಟಿಪಿಸ್‌ಅಧ್ಯಕ್ಷ ರಾಜ್ ಗೋಪಾಲ್, ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ರೆಡ್ಡಿ, ವಿಜಯ್ ಭಾವರೆಡ್ಡಿ,ಗೋಪಾಲ್ ,ತಿಮ್ಮನಾಯಕನ ಹಳ್ಳಿ ಮಂಜುನಾಥ್, ರಘುನಾಥ್ ರೆಡ್ಡಿ, ಮತ್ತು ನರಸಿಂಹಮೂರ್ತಿ, ಮುಂತಾದವರು ಕಾರ್ಯ ಕ್ರಮದಲ್ಲಿ ಹಾಜರಿದ್ದರು.