‘ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ ದೊಡ್ಡವರು’

Published : Aug 22, 2019, 02:35 PM ISTUpdated : Aug 22, 2019, 03:40 PM IST
‘ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ ದೊಡ್ಡವರು’

ಸಾರಾಂಶ

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇದರ ನಡುವೆ ಬಿಜೆಪಿಗರು ಪಕ್ಷ ಬಿಡಲು ಸಿದ್ಧವಾಗಿದ್ದಾರೆ ಎನ್ನುತ್ತಾರೆ. ಆದರೆ ಬೇರೆ ಪಕ್ಷಗಳ ದೊಡ್ಡ ದೊಡ್ಡ ನಾಯಕರೇ ನಮ್ಮ ಬಾಗಿಲು ಬಡಿಯುತ್ತಿದ್ದಾರೆ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ. 

"

ಹಾಸನ [ಆ.22]: ರಾಜ್ಯದಲ್ಲಿ ಮತ್ತೊಂದು ದೊಡ್ಡ ರಾಜಕೀಯ ದೃವೀಕರಣ ಆಗಲಿದೆ ಎಂದು ನೂತನ ಸಚಿವ ಸಿ.ಟಿ.ರವಿ ಹೇಳಿದ್ದಾರೆ. 

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಾತನಾಡಿದ ಸಿ.ಟಿ.ರವಿ,  ಬೇರೆ ಬೇರೆ ನಾಯಕರೇ ನಮ್ಮ ಪಕ್ಷದ ಬಾಗಿಲು ಬಡಿಯುತ್ತಿದ್ದಾರೆ ಎಂದು ಹೇಳಿದರು. 

ಇನ್ನು ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಒಂದು ತಿಂಗಳ ಬಳಿಕ ಸಂಪುಟ ವಿಸ್ತರಣೆಯಾಗಿದ್ದು, ಈ ಬಗ್ಗೆ ಅಸಮಾಧಾನ ಸ್ಫೋಟವಾಗಿದೆ ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ ಯೋಗ್ಯತೆ ಇದ್ದವರಿಗೆ ಸ್ಥಾನ ನೀಡಲಾಗಿದೆ ಎಂದರು. 

ಪಕ್ಷ ಎಲ್ಲವನ್ನೂ ನಿಭಾಯಿಸೋ ಶಕ್ತಿ ಹೊಂದಿದೆ . ರಾಜ್ಯದಲ್ಲಿ‌ ದೊಡ್ಡ ರಾಜಕೀಯ ದೃಢೀಕರಣ ಆಗಲಿದೆ.  ದೊಡ್ಟ ದೊಡ್ಡ ನಾಯಕರೇ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ. ಆದರೆ ನಮ್ಮ ಪಕ್ಷದಿಂದ ಯಾರೂ ಎಲ್ಲಿಗೆ ಹೋಗಲು ಸಿದ್ಧವಾಗಿಲ್ಲ. ಬಿಜೆಪಿ ಶಾಸಕರ್ಯಾರು ಪಕ್ಷ ತೊರೆಯುವುದಿಲ್ಲ. ಪಕ್ಷದಲ್ಲಿದ್ದರೆ ಅವರಿಗೆ ಒಳ್ಳೆ ಭವಿಷ್ಯವಿದೆ ಎಂದು ಎಚ್ಚರಿಕೆ ನೀಡಿದರು. 

ಯಡಿಯೂರಪ್ಪ ಸರ್ಕಾರದಿಂದ ಭರ್ಜರಿ ಬಂಪರ್

ಇನ್ನು ಇದೇ ವೇಳೆ ಚಿದಂಬರಂ ಬಂಧನದ ಬಗ್ಗೆಯೂ ಮಾತನಾಡಿದ ಸಿ.ಟಿ ರವಿ ಕಾಂಗ್ರೆಸ್ ಭ್ರಷ್ಟತೆಯನ್ನು ಬೆಂಬಲಿಸುವ ಪಕ್ಷ. ಈಗಲೂ ಅದನ್ನು ಮುಂದುವರಿಸಿಕೊಂಡು ಬಂದಿದೆ. ಕಾಂಗ್ರೆಸ್ ಗೂ ಭ್ರಷ್ಟಾಚಾರಕ್ಕೂ ಅವಿನಾಭಾವ ಸಂಬಂಧವಿದೆ ಎಂದರು. 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು