ದಕ್ಷಿಣ ಕ್ಷೇತ್ರದ ಮತದಾರರ ನೋಂದಣಿಯಲ್ಲಿ ಹಲವು ನ್ಯೂನತೆ : ಆಕಾಂಕ್ಷಿಯಿಂದ ಅಸಮಾಧಾನ

By Kannadaprabha News  |  First Published Nov 3, 2023, 9:08 AM IST

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹೆಸರು ನೋಂದಣಿಗೆ ಹಲವು ನ್ಯೂನತೆ ಎದುರಾಗಿದೆ ಎಂದು ಜಾನಪದ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಕೆ. ವಸಂತಕುಮಾರ್ತಿಳಿಸಿದ್ದಾರೆ.


 ಮೈಸೂರು :  ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹೆಸರು ನೋಂದಣಿಗೆ ಹಲವು ನ್ಯೂನತೆ ಎದುರಾಗಿದೆ ಎಂದು ಜಾನಪದ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಕೆ. ವಸಂತಕುಮಾರ್ತಿಳಿಸಿದ್ದಾರೆ.

ಮುಖ್ಯ ಚುನಾವಣಾಧಿಕಾರಿಗೆ ಈ ಸಂಬಂಧ ಪತ್ರ ಬರೆದಿರುವ ಅವರು, ಈ ಕ್ಷೇತ್ರದ ಮತದಾರರಾದ ಶಿಕ್ಷಕರಿಗೆ ಅದರಲ್ಲೂ ಹೊಸ ಶಿಕ್ಷಕರಿಗೆ ಮಾಹಿತಿಯ ಕೊರತೆ ಇದೆ. ಪ್ರತಿ 6 ವರ್ಷಕ್ಕೊಮ್ಮೆ ಚುನಾವಣೆ ಬರುವುದರಿಂದ ಈ ಅವಧಿಯೊಳಗೆ ಶಿಕ್ಷಕರು ವರ್ಗಾವಣೆ ಆಗಿರುತ್ತದೆ. 2023ರ ನ. 1ಕ್ಕಿಂತ ಹಿಂದಿನ 6 ವರ್ಷಗಳ ಅವಧಿಯಲ್ಲಿ ನಿರಂತರವಾಗಿ 3 ವರ್ಷ ಸೇವೆ ಸಲ್ಲಿಸಿ ನಿವೃತ್ತಾರದವರ ಮಾಹಿತಿಯನ್ನು ಸಂಸ್ಥೆಯವರನ್ನು ಹೊರತುಪಡಿಸಿ ಬೇರೆಯಾರಿಗೂ ಲಭ್ಯವಿರುವುದಿಲ್ಲ. ನೋಂದಣಿ ವೇಳೆ ಶಿಕ್ಷಕರು ಆಮಿಷಕ್ಕೆ ಒಳಗಾಗುತ್ತಿರುವುದು ಮತ್ತು ಆಮಿಷ ಒಡ್ಡುತ್ತಿರುವುದು ಚುನಾವಣಾ ನೀತಿಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

Latest Videos

undefined

ಟಿಕೆಟ್ ಆಕಾಂಕ್ಷಿ

2024ರ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದು ಈಗಾಗಲೇ ಜಿಲ್ಲೆಯ ಹಾಗೂ ರಾಜ್ಯದ ನಾಯಕರುಗಳ ಜೊತೆ ಮಾತುಕತೆ ನಡೆಸಿದ್ದೇನೆ. ಪಕ್ಷದ ವಿವಿಧ ಹಂತದಲ್ಲಿ ಕೆಲಸ ನಿರ್ವಹಿಸಿರುವುದಾಗಿ ವಸಂತಕುಮಾರ್ತಿಳಿಸಿದ್ದಾರೆ.

ಎಟಿಎಂ ಮಾಡಿಕೊಳ್ಳಲು

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಬದಲು ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಾಸೆಯಾಗಿ ನಿಲ್ಲುವುದು ಕರ್ನಾಟಕದ 6 ಕೋಟಿ ಜನರ ಹಿತ ಕಾಯುವುದಕ್ಕಲ್ಲ, ಬದಲಿಗೆ ತನ್ನ ಇನ್ನಿಲ್ಲದ ಯಾವ ರಾಜ್ಯಗಳಲ್ಲಿಯೂ ಲಭಿಸದ ಹಣದ ದಾಹವನ್ನು ತೀರಿಸಿಕೊಳ್ಳುವ ಸಲುವಾಗಿ ಅರ್ಥಾತ್ ಎಟಿಎಂ ಮಾಡಿಕೊಳ್ಳಲು ಎಂದು ವಸಂತಕುಮಾರ್ ಟೀಕಿಸಿದ್ದಾರೆ.

ಕೋಟಿ ಮೌಲ್ಯದ ಚುನಾವಣಾ ಬಾಂಡ್ ಮಾರಾಟ

ನವದೆಹಲಿ (ನ.2): ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ ನಲ್ಲಿ 1,148.38 ಕೋಟಿ ರೂ. ಮೊತ್ತದ  ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಅತೀಹೆಚ್ಚು ಪ್ರಮಾಣದ ಅಂದರೆ ಶೇ.33ರಷ್ಟು ಬಾಂಡ್ ಗಳನ್ನು ಹೈದರಾಬಾದ್ ಶಾಖೆಯಲ್ಲಿ ಮಾರಾಟ ಮಾಡಲಾಗಿದೆ. 2018ನೇ ಸಾಲಿನಲ್ಲಿ  ಚುನಾವಣಾ  ಬಾಂಡ್ ಗಳನ್ನು ಬಿಡುಗಡೆ ಮಾಡಿದ ಬಳಿಕ 28 ಹಂತಗಳಲ್ಲಿ ಮಾರಾಟ ಮಾಡಲಾಗಿದ್ದು, ಒಟ್ಟು 14,940.27 ಕೋಟಿ ರೂ. ಮೊತ್ತ ಸಂಗ್ರಹಿಸಲಾಗಿದೆ. ಉಳಿದ ನಗದೀಕರಣಗೊಳ್ಳದ ಬಾಂಡ್ ಗಳ ಅಂದಾಜು  23.88 ಕೋಟಿ ರೂ.  ಮೊತ್ತವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಜುಲೈನಲ್ಲಿ ನಡೆದ  ಚುನಾವಣಾ ಬಾಂಡ್ ಗಳ ಮಾರಾಟದಲ್ಲಿ 812.80 ಕೋಟಿ ರೂ. ಮೌಲ್ಯದ ಬಾಂಡ್ ಗಳನ್ನು ಮಾರಾಟ ಮಾಡಲಾಗಿದೆ. ಈ ವರ್ಷದ ಏಪ್ರಿಲ್ ನಲ್ಲಿ  970.50 ಕೋಟಿ ರೂ. ಮೊತ್ತದ ಬಾಂಡ್ ಗಳನ್ನು ಮಾರಾಟ ಮಾಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಇ) ಮೂಲಕ ಸಾಮಾಜಿಕ ಹೋರಾಟಗಾರ ಕಮಾಂಡ್ ಲೋಕೇಶ್ ಭಾತ್ರ ಅವರು ಪಡೆದ ಮಾಹಿತಿ ಅನ್ವಯ ಇತ್ತೀಚಿಗೆ ಎಸ್ ಬಿಐ 2,012 ಬಾಂಡ್ ಗಳನ್ನು ಮಾರಾಟ ಮಾಡಿದೆ. ಇದರಲ್ಲಿ 1,095 ಬಾಂಡ್ ಗಳು 1 ಕೋಟಿ ರೂ. ಮುಖಬೆಲೆಯದ್ದಾಗಿವೆ.

ಇನ್ನು ತಲಾ ಒಂದು ಲಕ್ಷ ರೂ. ಮುಖಬೆಲೆಯ 302 ಬಾಂಡ್ ಗಳು, ತಲಾ 10ಲಕ್ಷ ರೂ. ಮುಖಬೆಲೆಯ 503 ಬಾಂಡ್ ಗಳು, ತಲಾ 10,000ರೂ. ಮುಖಬೆಲೆಯ 55 ಬಾಂಡ್ ಗಳು ಹಾಗೂ ತಲಾ  1,000 ಮುಖಬೆಲೆಯ 57 ಬಾಂಡ್ ಗಳು ಮಾರಾಟವಾಗಿವೆ.  5,000 ರೂ. ಮುಖಬೆಲೆಯ ಬಾಂಡ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲ ಬಾಂಡ್ ಗಳನ್ನು ಪಕ್ಷಗಳು ನಗದೀಕರಿಸಿವೆ. ಇನ್ನು ಜುಲೈನಲ್ಲಿ ಹೈದರಾಬಾದ್ ಶಾಖೆ ಅತೀಹೆಚ್ಚು ಮೊತ್ತದ ಅಂದರೆ 377.63 ಕೋಟಿ ರೂ. ಮೌಲ್ಯದ ಬಾಂಡ್ ಗಳನ್ನು ಮಾರಾಟ ಮಾಡಿದೆ. ಇನ್ನು ಬಾಂಡ್ ಗಳ ನಗದೀಕರಣದಲ್ಲಿ ದೆಹಲಿ ಬ್ರ್ಯಾಂಚ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ಇದರ ನಂತರದ ಸ್ಥಾನದಲ್ಲಿ ಕೋಲ್ಕತ್ತ ಶಾಖೆಯಿದ್ದು, 171.28 ರೂ. ಮೌಲ್ಯದ ಬಾಂಡ್ ಗಳನ್ನು ನಗದೀಕರಿಸಿದೆ. 25 ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಗಳನ್ನು ನಗದೀಕರಿಸಲು ಬಾಕಿಯಿದೆ ಎಂದು ಎಸ್ ಬಿಐ ಆರ್ ಟಿಐ ಅಡಿಯಲ್ಲಿ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.

ಜೀವನ ಪ್ರಮಾಣ ಪತ್ರ ಸಲ್ಲಿಕೆ ಸೇರಿದಂತೆ ಈ 4 ಹಣಕಾಸು ಕೆಲಸಗಳಿಗೆ ನವೆಂಬರ್ ತಿಂಗಳಲ್ಲಿ ಅಂತಿಮ ಗಡುವು

ಏನಿದು ಚುನಾವಣಾ ಬಾಂಡ್?
ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ನೀಡುವುದಕ್ಕೆ ಪರ್ಯಾಯವಾಗಿ ಚುನಾವಣಾ ಬಾಂಡ್ ಗಳನ್ನು ಬಳಸಲಾಗುತ್ತಿದೆ. ರಾಜಕೀಯ ದೇಣಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್ ಗಳನ್ನು ಪರಿಚಯಿಸಲಾಗಿದೆ. ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯ ಶುದ್ಧೀಕರಣಕ್ಕೆ 2017ರಲ್ಲಿ ಬಾಂಡ್ ಗಳನ್ನು ಪರಿಚಯಿಸಲಾಗಿತ್ತು. 

click me!