ಕೆಟ್ಟ ಕೆಲಸ ಮಾಡಿ ಧಾರ್ಮಿಕ ಕ್ಷೇತ್ರ ಅಪವಿತ್ರ : ಮಂಗಳೂರು ಪೊಲೀಸ್ ಕಮಿಷನರ್ ಚಾರ್ಜ್

Suvarna News   | Asianet News
Published : Jan 31, 2021, 04:18 PM ISTUpdated : Jan 31, 2021, 04:20 PM IST
ಕೆಟ್ಟ ಕೆಲಸ ಮಾಡಿ ಧಾರ್ಮಿಕ ಕ್ಷೇತ್ರ ಅಪವಿತ್ರ : ಮಂಗಳೂರು ಪೊಲೀಸ್ ಕಮಿಷನರ್ ಚಾರ್ಜ್

ಸಾರಾಂಶ

ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ 130 ಜನ ರೌಡಿಗಳಿಗೆ  ಪೊಲೀಸ್ ಕಮಿಷನರ್ ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಂಗಳೂರು (ಜ.31): ಸುರತ್ಕಲ್ ನಲ್ಲಿ ಪೊಲೀಸ್ ಕಮಿಷನರ್  ರೌಡಿಪರೇಡ್ ಪರೇಡ್ ನಡೆಸಿದ್ದಾರೆ.

ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ 130 ಜನ ರೌಡಿಗಳಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಟಿಂಗ್, ಶೇವಿಂಗ್ ಮಾಡಿಕೊಂಡು ನೀಟಾಗಿ ಹಾಜರಾಗಲು ವಾರ್ನಿಂಗ್ ಕೊಟ್ಟಿದ್ದು,  ಜ.27 ರಂದು ಯುವಕರು ಪರಸ್ಪರ ಅಟ್ಯಾಕ್ ಮಾಡಿಕೊಂಡಿದ್ದ ಹಿನ್ನಲೆ ಪರೇಡ್ ನಡೆಸಲಾಗಿದೆ.

ಡ್ಯೂಟಿ ವೇಳೆ ಮಂಗಳೂರು ಪೊಲೀಸರ ಎಣ್ಣೆ ಪಾರ್ಟಿ! .

ಒಬ್ಬೊರನ್ನಾಗಿ ವಿಚಾರಣೆ ನಡೆಸಿದ ಪೊಲೀಸ್ ಕಮಿಷನರ್ ಯಾವ್ ಕೇಸ್ ಅಂತಾ ರೌಡಿಗಳ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.  ನಮ್ಮದು ಗ್ಯಾಂಗ್ ವಾರ್ ಅಂತಾ ಹೇಳಿದ ಒಬ್ಬ ರೌಡಿಶೀಟರ್ ಏನ್ ದೊಡ್ಡ ಗ್ಯಾಂಗಾ ನಿಂದು. ಎಲ್ಲಾ ಗ್ಯಾಂಗ್ ನ್ನು ಇಲ್ಲದಂಗೆ ಮಾಡ್ತಿನಿ ಇರು ಅಂತಾ ಕಮಿಷನರ್ ವಾರ್ನಿಂಗ್ ಕೊಟ್ಟರು.

ಇನ್ನೋರ್ವ ದೇವರಿಗೆ ಕೂದಲು ಬಿಟ್ಟಿದ್ದೀನಿ ಅಂತಾ ಹೇಳಿದ್ದು ಮತ್ತೊಬ್ಬ ರೌಡಿಶೀಟರ್‌ಗೆ  ಕೆಟ್ಟ ಕೆಲಸ ಮಾಡಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಮಾಡ್ತೀರಾ ಅಂತಾ ಚಾರ್ಜ್ ಮಾಡಿದ್ದಾರೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು