ಬಾಗಲಕೋಟೆ: ಬಾದಾಮಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದು ನಾನು, ಸಿದ್ದುಗೆ ಟಾಂಗ್‌ ಕೊಟ್ಟ ಹೆಚ್‌ಡಿಕೆ

Suvarna News   | Asianet News
Published : Jan 31, 2021, 03:56 PM IST
ಬಾಗಲಕೋಟೆ: ಬಾದಾಮಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದು ನಾನು, ಸಿದ್ದುಗೆ ಟಾಂಗ್‌ ಕೊಟ್ಟ ಹೆಚ್‌ಡಿಕೆ

ಸಾರಾಂಶ

ನೀವು ಕಡತ ತೆಗೆದು ನೋಡಿ. ನಾನು ಸುಳ್ಳು ಹೇಳೋದಿಲ್ಲ| ಜನರ ಭಾವನೆಗಳ ಬೇಡಿಕೆಗಾಗಿ ನಾನು ಅನುದಾನ ಕೊಟ್ಟಿದ್ದೇನೆ| 

ಬಾಗಲಕೋಟೆ(ಜ.31): ಬಾದಾಮಿಯಲ್ಲಿ ಇವತ್ತು ಕೆಲಸಗಳು ಏನಾದ್ರೂ ನಡೆಯುತ್ತಿದ್ದರೆ, ಈ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಯೋಜನೆಗಳಲ್ಲ. ನಾನು 14 ತಿಂಗಳು ಕಾಲ ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಂತಹ ಯೋಜನೆಗಳಾಗಿವೆ ಎಂದು ಪರೋಕ್ಷವಾಗಿ ಬಾದಾಮಿಗೆ ಹೆಚ್ಚಿನ ಅನುದಾನ ನಾನು ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ಬಾದಾಮಿ ಕ್ಷೇತ್ರಕ್ಕೆ ಸಾವಿರ ಇನ್ನೂರು ಕೋಟಿ ಯೋಜನೆ ತಂದಿದ್ದೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಇಂದು(ಭಾನುವಾರ) ನಗರದಲ್ಲಿ ನಡೆಯುತ್ತಿರುವ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನೀವು ಕಡತ ತೆಗೆದು ನೋಡಿ. ನಾನು ಸುಳ್ಳು ಹೇಳೋದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ. 

ಎಚ್ಡಿಕೆ ಚಿತ್ತ ಉತ್ತರದತ್ತ: ಜೆಡಿಎಸ್‌ ಸಮಾವೇಶಕ್ಕೆ ಬಾಗಲಕೋಟೆ ಸಜ್ಜು

ನಾನು ನಮ್ಮ  ಪಕ್ಷದ ಬಾದಾಮಿ ಅಭ್ಯರ್ಥಿ ಹನಮಂತಪ್ಪ ಅವರ ಪರವಾಗಿ ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೆ, ಜನರ ಭಾವನೆಗಳ ಬೇಡಿಕೆಗಾಗಿ ನಾನು ಅನುದಾನ ಕೊಟ್ಟಿದ್ದೇನೆಂದು ಸಿದ್ದುಗೆ ಎಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ. 
 

PREV
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!