
ಮಂಗಳೂರು (ಆ.20): ಮಾಧ್ಯಮಗಳಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆಯುತ್ತಿರುವ ಸುದ್ದಿ ತಿಳಿದು ಪತಿ ಜೊತೆಗೆ ಲಿಡ್ವಿನ್ ಮೊಂತೇರೋ ನಿತ್ಯ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದೆ ಎಂದು ಅಫ್ಘಾನಿಸ್ತಾನದಿಂದ ಪಾರಾಗಿ ಬಂದ ಮೆಲ್ವಿನ್ ಅವರ ಪತ್ನಿ ಹೇಳಿದ್ದಾರೆ.
ಆದರೆ ಆ.13ರ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡು ಕಂಪನಿಗೆ ಕರೆ ಮಾಡಿದ್ದೆ. ಈ ವೇಳೆ ತಾಲಿಬಾನಿಗರು ಆಕ್ರಮಣ ನಡೆಸಿರುವುದರಿಂದ ದೂರವಾಣಿ ಮುಖೇನ ಮಾತನಾಡಲು ಅಸಾಧ್ಯ. ಕೇವಲ ಮೆಸೇಜ್ ಮೂಲಕವಷ್ಟೇ ಸಂಪರ್ಕಿಸಲು ಸಾಧ್ಯ ಎಂದು ಅಲ್ಲಿಂದ ಮಾಹಿತಿ ಸಿಕ್ಕಿತು.
ಭಾರತಕ್ಕೆ ಮರಳಿ ಅಫ್ಘಾನ್ ದಿನಗಳನ್ನು ನೆನಪಿಸಿಕೊಂಡ ಜನ
ಅದರಂತೆ ಲಿಡ್ವಿನ್ ಮೆಸೇಜ್ ಮೂಲಕ ಪತಿಯೊಂದಿಗೆ ಸಂಪರ್ಕದಲ್ಲಿದ್ದರು. ಬೆಳಗ್ಗಿನ ಅವಧಿಯಲ್ಲಿ ಕಾಬುಲ್ ವಿಮಾನ ನಿಲ್ದಾಣದಲ್ಲಿ ಜನ ಜಮಾಯಿಸುವುದರಿಂದ ಏರ್‌ಲಿಫ್ಟ್ ಅಸಾಧ್ಯವೆಂದು ತಡರಾತ್ರಿ ವೇಳೆ ಏರ್‌ಲಿಫ್ಟ್ ಸಂದೇಶ ಮೆಲ್ವಿನ್ ಅವರಿದ್ದ ಕಂಪನಿಗೆ ದೊರೆತಿತ್ತು.
"
ಅದರಂತೆ ಮೆಲ್ವಿನ್‌ರನ್ನು ಎರಡು ದಿನಗಳ ಕಾಲ ಮಲಗದಂತೆ ಸಂದೇಶ ಕಳುಹಿಸುತ್ತಲೇ ಎಚ್ಚರಿಕೆಯಿಂದ ಇರುವಂತೆ ನೋಡಿಕೊಂಡಿದ್ದರು ಲಿಡ್ವಿನ್. ತನ್ನ ಮನೆಯಲ್ಲೂ ಅಡುಗೆಯನ್ನೂ ಮಾಡದೆ 2 ದಿನ ಪತಿಗಾಗಿ ಕಾದು ಕುಳಿತಿದ್ದರು. ಆ.14ರ ರಾತ್ರಿ 3ರ ವೇಳೆಗೆ ಪತಿ ಮೊಬೈಲ್ ದಿಢೀರ್ ಆಫ್‌ಲೈನ್ ಆಗಿತ್ತು. ಬಳಿಕ ಮರುದಿನ ಬೆಳಗ್ಗೆ 10ರ ವೇಳೆಗೆ ಗುಜರಾತ್ ತಲುಪಿದ್ದಾಗಿ ಮೆಲ್ವಿನ್ ಅವರು ಪತ್ನಿಗೆ ತಿಳಿಸಿದ್ದಾರೆ.