ಬೆತ್ತಲೆ ಫೋಟೊ ಬೇಕೆಂದು ಶೇರ್ ಮಾಡ್ಕೊಂಡ್ರು : ವೈರಲ್ ಮಾಡ್ತೀನಿ ಅಂತ ಬೆದರಿಕೆ

By Kannadaprabha NewsFirst Published Nov 26, 2020, 4:26 PM IST
Highlights

ಬೆತ್ತಲೆ ಫೋಟೊ ಬೇಕೆಂದು ತರಿಸ್ಕೊಂಡು ನಂತರ ಬ್ಲಾಕ್ ಮೇಲ್ ಮಾಡಿ ಹೆಸರಿಸಲಾಯಿತು. ಇದರಿಂದ ಬೇಸತ್ತು ಆತ ಪೊಲೀಸರ ಮೊರೆ ಹೋದ

ಮಂಗಳೂರು (ನ.26): ಅಶ್ಲೀಲ ಫೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ  ಬೆದರಿಕೆ ಹಾಕಿ ಹಿರಿಯ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ  ಮಾತನಾಡಿ ಹಣದ ಬೇಡಿಕೆ ಇಟ್ಟ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು ನಿವಾಸಿಗಳಾದ ಗೋಕುಲ್  ರಾಜು  ಹಾಗೂ ಪವನ್ ಎಲ್ ಬಂಧಿತ ಆರೋಪಿಗಳು. 

ಸಾಕ್ಷಿರಾಕ್ ಎನ್ನುವ ಮಹಿಳೆಯ ಹೆಸರಿನಲ್ಲಿ  ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಕೆಪಿಟಿ ನಿವಾಸಿ ರಾಜೇಶ್ ಎಂಬುವರಿಗೆ ಸಾಮಾಜಿಕ ಜಾಲತಾಣದ್ಲ ಮಹಿಳೆಯ ಹೆಸರಿನಲ್ಲಿ ಕರೆ ಮಾಡಿ ಅಶ್ಲೀಲ  ಚಿತ್ರಗಳನ್ನು ಮೊದಲು ಕಳಿಸಿದ್ದರು. ರಾಜೇಶ್ ಅವರಿಂದಲೂ ಬೆತ್ತಲೆ ಚಿತ್ರಗಳನ್ನು ಕೇಳಿ ಪಡೆದರು.  ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ 

ಬಿಜೆಪಿ ಮುಖಂಡನ ಖಾಸಗಿ ವಿಡಿಯೋ ಲೀಕ್ : ಮೆಮೊರಿ ಕಾರ್ಡ್ ಇಟ್ಕೊಂಡು 1 ಕೋಟಿಗೆ ಡಿಮ್ಯಾಂಡ್ ...

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿ  ಹಣ ಪಡೆದಿದ್ದರು. ಒಂದಷ್ಟು ಹಣ ನೀಡಿದ ಬಳಿಕವೂ ಹೆಚ್ಚಿನ ಹಣಕ್ಕಾಗಿ ಬೇಡುಜೆ ಇಟ್ಟು ಹಣ ನೀಡದಿದ್ದಾಗ ಹಿರಿಯ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ  ಕರೆ ಮಾಡಿ ವಂಚನೆ ಮಾಡಿದ್ದಾರೆ. ಅವರ ಕಿರುಕುಳ ತಾಳಲಾರದೆ ರಾಜೇಶ್  ಪೊಲೀಸರಿಗೆ ದೂರು ನೀಡಿದ್ದಾರೆ. 

ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿ ವಿನಯ ಗಾಂವ್ಕರ್ ಅವರ ನಿರ್ದೇಶನದಂತೆ ಆರೋಪಿಗಳ ಪತ್ತೆಗೆ ತಮಡ ರಚಿಸಲಾಗಿತ್ತು. 

ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

click me!