ತತ್ವ ಸಿದ್ಧಾಂತ ಮೆಚ್ಚಿದ ಯುವಜನತೆ ಬಿಜೆಪಿಗೆ ಸೇರ್ಪಡೆ

Kannadaprabha News   | Asianet News
Published : Nov 26, 2020, 03:31 PM IST
ತತ್ವ ಸಿದ್ಧಾಂತ ಮೆಚ್ಚಿದ ಯುವಜನತೆ ಬಿಜೆಪಿಗೆ ಸೇರ್ಪಡೆ

ಸಾರಾಂಶ

ಶಾಸಕ ಶಾಸಕ ಕಳಕಪ್ಪ ಬಂಡಿ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ| ಪಕ್ಷಕ್ಕೆ ಸೇರ್ಪಡೆಯಾಗಿರುವ ಯುವಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವ ಜತೆಗೆ ಪಕ್ಷ ಸಂಘಟನೆಗೆ ಮುಂದಾಗಬೇಕು: ಅಶೋಕ ವನ್ನಾಲ| 

ಗಜೇಂದ್ರಗಡ(ನ.26):  ಪಟ್ಟಣದ ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ ನೇತೃತ್ವದಲ್ಲಿ 23ನೇ ವಾರ್ಡ್‌ನ ಉಣಚಗೇರಿ ಗ್ರಾಮದ 15ಕ್ಕೂ ಅಧಿಕ ಯುವಕರು ಶಾಸಕ ಕಳಕಪ್ಪ ಬಂಡಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಈ ವೇಳೆ ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ ಮಾತನಾಡಿ, ಪಕ್ಷದ ತತ್ವ-ಸಿದ್ಧಾಂತ ಹಾಗೂ ಅಭಿವೃದ್ಧಿ ಹಾಗೂ ಜನಪರ ಆಡಳಿತ ಮೆಚ್ಚಿಕೊಂಡು ಗ್ರಾಮದ ಯುವಕರು ಕೆಲ ದಿನಗಳಿಂದ ಬಿಜೆಪಿ ಸೇರಲು ಉತ್ಸುಕರಾಗಿದ್ದರು. ಹೀಗಾಗಿ ಶಾಸಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎದುರಾಗಿರುವ ಸಮಸ್ಯೆಗಳು ಪರಿಹಾರವಾದರೆ ಶಾಸಕರ ಸಹಕಾರ ಹಾಗೂ ಮಾರ್ಗದರ್ಶದಲ್ಲಿ ಗಜೇಂದ್ರಗಡ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ನಿರ್ಮಿಸಲು ಶ್ರಮಿಸುತ್ತೇನೆ ಎಂದರು.

ಕೊರೋನಾ ಎಫೆಕ್ಟ್‌: 'ಅತಿಥಿ ಉಪನ್ಯಾಸಕರಿಗೆ ವೇತನ ನೀಡಿ'

ಬಿಜೆಪಿ ನಗರ ಘಟಕದ ಅಧ್ಯಕ್ಷ ಅಶೋಕ ವನ್ನಾಲ ಮಾತನಾಡಿ, ಪಕ್ಷಕ್ಕೆ ಸೇರ್ಪಡೆಯಾಗಿರುವ ಯುವಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವ ಜತೆಗೆ ಪಕ್ಷ ಸಂಘಟನೆಗೆ ಮುಂದಾಗಬೇಕು. ದೇಶ ಹಾಗೂ ವಿವಿಧ ರಾಜ್ಯಗಳಲ್ಲಿ ಇಂದು ಅಸಂಖ್ಯಾತ ಕಾರ್ಯಕರ್ತರ ಅವಿರತ ಹಾಗೂ ಪ್ರಾಮಾಣಿಕ ಸಂಘಟನಾ ಶೈಲಿಯಿಂದ ಬಿಜೆಪಿ ಅಧಿಕಾರದಲ್ಲಿದೆ ಎಂದ ಅವರು, ತಾಲೂಕಿನಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪಕ್ಷಕ್ಕೆ ಸೇರ್ಪಡೆಯಾಗಿರುವ ಯುವಕರು ಕೆಲಸ ನಿರ್ವಹಿಸಿ. ಪಕ್ಷವು ಪ್ರತಿ ಕಾರ್ಯಕರ್ತನನ್ನು ಸಹ ನಾಯಕನನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.

ಉಣಚಗೇರಿಯ ರಾಘು ಪಾಟೀಲ, ಹುಸೇನ ನಧಾಪ್‌, ಮುತ್ತು ಸಂಗನಾಳ, ಕಳಕೇಶ ಚಿಟಗಿ, ಸಿದ್ದು ಪಾಟೀಲ, ಮುತ್ತು ಹುಡೇದ, ಗುರು ಉಪ್ಪಾರ, ಮಂಜು ಕಲಾಲಬಂಡಿ, ಕೃಷ್ಣಪ್ಪ ತಳವಾರ, ಹೊನ್ನಪ್ಪ ಕರಕುಂಟಿ, ಆನಂದ ಗಾಯಕವಾಡ ಸೇರಿದಂತೆ ಇತರರನ್ನು ರಾಜ್ಯ ಸಣ್ಣ ಕೈಗಾರಿಗಳ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಪಕ್ಷಕ್ಕೆ ಬರಮಾಡಿಕೊಂಡರು.
 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ