ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ವಿಜಯನಗರ (ಮೇ.7) : ಅದು ಶತಕವನ್ನು ಪೂರೈಸಿದ ಐತಿಹಾಸಿಕ ನಗರಭೆ. ಇದಕ್ಕೆ ತನ್ನದೇ ಆದ ಘನತೆ ಗೌರವ ಸೇರಿದಂತೆ ರಾಜಕೀಯ ಐತಿಹ್ಯ ಇದೆ. ಆದ್ರೇ, ಈ ಬಾರಿ ಇಲ್ಲಿ ಸದಸ್ಯರಾಗಿ ಆಯ್ಕೆಯಾದವರು ಮಾತ್ರ ಮಕ್ಕಳಿಗಿಂತ ಕಡೆಯಾಗಿದ್ದಾರೆ. ಯಾಕಂದ್ರೆ ಯಾವ ಪಕ್ಷಕ್ಕೂ ಮತ್ತು ವ್ಯಕ್ತಿಗೂ ಕನಿಷ್ಟ ನಿಷ್ಠೆಯೂ ಇಲ್ಲ. ಯಾಕಂದ್ರೆ ಆಯ್ಕೆಯಾಗಿದ್ದೊಂದು ಪಕ್ಷ ಇರೋದು ಮತ್ತೊಂದು ಪಕ್ಷ. ಇದೆಲ್ಲದರ ಮಧ್ಯೆ ದಿನಕ್ಕೊಂದು ಪಕ್ಷದ ಬಾವುಟ ಹಿಡಿಯೋ ಮೂಲಕ ಜನರಗಷ್ಟೇ ಅಲ್ಲ ಜನಪ್ರತಿನಿಧಿಗಳಿಗೂ ಬೇಸರವನ್ನುಂಟು ಮಾಡಿದ್ದಾರೆ. ನೋಟಿಸ್ ಕೊಟ್ಟರೂ ಜಗ್ಗದ ಈ ಹೊಸಪೇಟೆ ನಗರಸಭೆ (Hospet city municipal council) ಸದಸ್ಯರ ಮಕ್ಕಳಾಟದ ಕಥೆ ಇದಾಗಿದೆ.
undefined
ಅಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ: ಗೆದ್ದಿರೋದು ಕಾಂಗ್ರೆಸ್‌ನಿಂದ ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆ ಕಮಲ ಪಕ್ಷಕ್ಕೆ ಸೇರ್ಪಡೆಯಾಗು ತ್ತಿರುವ ಸದಸ್ಯರು. ನಮ್ಮ ಸದಸ್ಯರು ಎಲ್ಲೂ ಹೋಗಿಲ್ಲ ನಮ್ಮ ಜತೆ ಇದ್ದಾರೆ ಅಂತ ಸಮರ್ಥನೆ ಮಾಡಿಕೊಳ್ಳುತ್ತಿರೋ ಕಾಂಗ್ರೆಸ್ ಮುಖಂಡರು. ಕಾಂಗ್ರೆಸ್ ನೀಡಿದ ಶೋಕಾಸ್ ನೋಟಿಸ್ ಗೆ ಉತ್ತರ ಬರೆದು ನೀಡುತ್ತಿರುವ ಪಕ್ಷಾಂತರ ಆರೋಪ ಹೊತ್ತಿರುವ ಸದಸ್ಯರು. ಹೌದು, ಇದೆಲ್ಲವೂ ಕಳೆದೆರಡು ಮೂರು ದಿನಗಳಿಂದ ಹೊಸಪೇಟೆ ನರಗಸಭೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಈ ಎಲ್ಲ ಬೆಳೆವಣಿಗೆಯನ್ನು ನೋಡುತ್ತಿದ್ರೆ, ಇವರು ಆಡಳಿತ ನಡೆಸುತ್ತಿದ್ದಾರೆಯೇ ಅಥವಾ ಮಕ್ಕಳಾಟವಾಡುತ್ತಿದ್ದಾರೆಯೇ ಎನ್ನುವ ಅನುಮಾನ ಕಾಡದೇ ಇರದು.
Ukraineನಿಂದ ಮರಳಿದ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕೆ ಸಿದ್ದಗಂಗಾ ಮಠ
ಒಟ್ಟು 35 ಸದಸ್ಯರ ಬಲದ ಹೊಸಪೇಟೆ ನಗರಸಭೆಯಲ್ಲಿ ಡಿಸೆಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ 10 ಬಿಜೆಪಿ, 12 ಕಾಂಗ್ರೆಸ್, 12 ಪಕ್ಷೇತರ, ಮತ್ತು ಒಂದು ವಾರ್ಡ್ಇನಲ್ಲಿ ಆಮ್ ಆದ್ಮಿ ಗೆದ್ದಿತ್ತು. ಇದಾದ ನಂತರ ನಡೆದ ಬೆಳವಣಿಗೆಯಲ್ಲಿ 9 ಪಕ್ಷೇತರ ಸದಸ್ಯರು ಮತ್ತು ಓರ್ವ ಆಮ್ ಆದ್ಮಿ ಪಕ್ಷದ ಸದಸ್ಯರನ್ನು ಆಪರೇಷನ್ ಕಮಲ ಮಾಡೋ ಮೂಲಕ 20 ಸದ್ಯರನ್ನು ಸೇರಿಸಿಕೊಂಡು ಸಚಿವ ಆನಂದ ಸಿಂಗ್ ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ ಹೊಸಪೇಟೆ ನಗರಸಭೆ ಯಲ್ಲಿ ಕಮಲವನ್ನು ಅರಳಿಸಿದ್ರು. ಇಷ್ಟಕ್ಕೆ ಸುಮ್ಮನಾಗದೆ ಮೊನ್ನೆ ಹೊಸಪೇಟೆಗೆ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ ಕಟೀಲ್ ಬಂದಾಗ ಐವರು ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿಸೋ ಮೂಲಕ ಮತ್ತೊಮ್ಮೆ ಅಪರೇಷನ್ ಕಮಲ ಮಾಡಿದ್ರು. ಇದೆಲ್ಲವೂ ಅಭಿವೃದ್ಧಿಗಾಗಿ ಅನ್ನೊದು ಸಚಿವ ಆನಂದ ಸಿಂಗ್ ಹೇಳಿಕೆ..
ಪಕ್ಷಾಂತರಿಗಳಿಗೆ ನೋಟಿಸ್ ನೀಡಿದ ಕಾಂಗ್ರೆಸ್: ಇನ್ನೂ ಕಾಂಗ್ರೆಸ್ ಪಕ್ಷದ ಐದು ಸದಸ್ಯರನ್ನು ಕಳೆದುಕೊಂಡು ಕಂಗೆಟ್ಟಿದ್ದ ಕಾಂಗ್ರೆಸ್, ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದೇ ಮತ್ತೊಂದು ಪಕ್ಷ ಸೇರ್ಪಡೆಯಾಗಿದ್ದನ್ನು ಮನಗಂಡು ಪಕ್ಷಾಂತರ ಮಾಡಿದ ಆರೋಪದಡಿ ಸದಸ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಸದಸ್ಯತ್ವ ರದ್ದಾಗುವ ಭೀತಿಯಲ್ಲಿದ್ದ ಪಕ್ಷಾಂತರ ಮಾಡಿದ ಸದಸ್ಯರಾದ ವಿ.ಹುಲಗಪ್ಪ, ರೋಹಿಣಿ ವೆಂಕಟೇಶ, ಎಚ್.ಕೆ.ಮಂಜುನಾಥ, ಲಕ್ಷ್ಮಿಚಂದ್ರಶೇಖರ್ ಪರಗಂಟಿ, ರಾಧಾ ಗುಡುಗಂಟಿ ನೋಟಿಸ್‍ಗೆ ಉತ್ತರ ನೀಡಿ, ಮತ್ತೆ ಕೈ ತೆಕ್ಕೆಗೆ ಮರಳಿ ಬಂದಿದ್ದಾರೆ.. ಇದು ಮೊದಲೇನಲ್ಲ ನಗರಸಭೆ ಅಧ್ಯಕ್ಷ ಚುನಾವಣೆಯ ವೇಳೆಯೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ವಿ.ಕನಕಮ್ಮ ವಿಪ್ ಉಲ್ಲಂಘಿಸಿ ಗೈರಾಗಿದ್ದರು. ಬಿಜೆಪಿಯೊಂದಿಗ ಒಳ ಒಪ್ಪಂದ ಮಾಡಿಕೊಂಡಿದ್ದರಿಂದ ಗೈರಾಗಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿರಲಿಲ್ಲ. ಇನ್ನೂ ಬಿಜೆಪಿಗೆ ತೆರಳಿದ ಸದಸ್ಯರನ್ನು ವಾಪಾಸ್ ಕರೆದುಕೊಂಡು ಬರುವಲ್ಲಿ ಸದ್ಯ ಯಶಸ್ವಿಯಾಗಿರೋ ಕಾಂಗ್ರೆಸ್ ನಾಯಕರು ನಮ್ಮವರು ಎಲ್ಲಿಯೂ ಹೋಗಿಲ್ಲಾ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ ಕಾಂಗ್ರೆಸ್ ಮುಖಂಡರು.
ಮರ್ಯಾದೆಯಿಂದ ವಾಪಸ್ ಹೋಗಲೇ....PSIಗೆ ಮೂಡಿಗೆರೆ ಶಾಸಕನ ಅವಾಜ್!
ಹೀಗಾದ್ರೆ ಹೇಗೆ ?: ಯಾರಿಗೂ ಹೆದರಿ ಪಕ್ಷದ ನಿಯಮಗಳಿಗೆ ಬೆದರಿ ಇರೋರು ಎಷ್ಟು ದಿನ ಇರುತ್ತಾರೆ. ಇವರು ಗೆದ್ದಿರೋದು ಜನರ ಉದ್ದಾರಕ್ಕೋ ಅಥವಾ ಪಕ್ಷಾಂತರ ಮಾಡೋದಕ್ಕಾ ಅನ್ನೋದೇ ಜನರ ಪ್ರಶ್ನೆಯಾಗಿದೆ. ಅದೇನೆ ಇರಲಿ ಜನಸೇವೆ ಮಾಡಲೇಂದು ಗೆದ್ದವರು ಇದೀಗ ಸೇವೆ ಮಾಡದೇ ಪಕ್ಷಾಂತರ ಹೆಸರಲ್ಲಿ ಮಕ್ಕಳಾಟ ಮಾಡ್ತಿರೋದು ನಾಚಿಕೆಗೇಡಿನ ಸಂಗತಿಯಾಗಿದೆ.