ಕಂಬಳವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ದಾಖಲೆ..ಜಗವೇ ಕೊಂಡಾಡಲಿ

By Suvarna News  |  First Published Feb 16, 2020, 10:36 PM IST

ಉಸೇನ್ ಬೋಲ್ಟ್  ವೇಗಕ್ಕೆ ಏರಿದ್ದ ಗೌಡರಿಂದ ಮತ್ತೊಂದು ದಾಖಲೆ/ ಮೂರು ಚಿನ್ನದ ಪದಕ ಕೊರಳಿಗೆ/ ಭಾನುವಾರ ಮಿಂಚು ಹರಿಸಿದ ಶ್ರೀನಿವಾಸ ಗೌಡ


ಮಂಗಳೂರು(ಫೆ. 16) ದೇಶದೆಲ್ಲೆಡೆ ಹೆಸರು ಮಾಡಿರುವ ಕರಾವಳಿ ಕುವರ ಶ್ರೀನಿವಾಸ ಗೌಡ ಇಂದು ಸಹ ಮಿಂಚಿನ ಓಟ ಹರಿಸಿದ್ದಾರೆ.  ಕರಾವಳಿ ಕಂಬಳದ ಉಸೇನ್ ಬೋಲ್ಟ್ ಮತ್ತೆ ಮೂರು ಚಿನ್ನದ ಪದಕ ತಮ್ಮದಾಗಿರಿಸಿಕೊಂಡಿದ್ದಾರೆ.

ಇಂದು ನಡೆದ ಕಂಬಳದಲ್ಲಿ 3 ಚಿನ್ನದ ಪದಕ ತನ್ನದಾಗಿರಿಸಿಕೊಂಡಿದ್ದಾರೆ. ವೇಣೂರಿನ ಪೆರ್ಮುಡದಲ್ಲಿ ನಡೆಯುತ್ತಿರುವ ಸೂರ್ಯ ಚಂದ್ರ ಕಂಬಳದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.

Tap to resize

Latest Videos

ಉಸೇನ್ ಬೋಲ್ಟ್ ವೇಗ ಮೀರಿಸಿದ ದಕ್ಷಿಣ ಕನ್ನಡದ ವೇಗಿ

ಶ್ರೀನಿವಾಸ್ ಗೌಡ ಅವರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದದ್ದರು. ಶ್ರೀನಿವಾಸ್ ಜೊತೆ ಸೆಲ್ಫಿ ತೆಗೆದುಕೊಂಡು ಸಂತಸ‌ ವ್ಯಕ್ತಪಡಿಸಿದರು.

ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದಲ್ಲಿ ಚಿನ್ನವನ್ನು ಗೌಡರು ಮುಡಿಗೆ ಏರಿಸಿಕೊಂಡಿದ್ದು ಇನ್ನು ಕೆಲ ವಿಭಾಗದಲ್ಲಿ ಚಿನ್ನ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

 

click me!