ಅಬ್ಬಾ..! ದೇಹಕ್ಕೆ ಚಿನ್ನದ ಲೇಪವನ್ನೇ ಮಾಡಿ ಬಂದಾತ ಅರೆಸ್ಟ್‌

Kannadaprabha News   | Asianet News
Published : Oct 29, 2020, 07:33 AM ISTUpdated : Oct 29, 2020, 07:44 AM IST
ಅಬ್ಬಾ..! ದೇಹಕ್ಕೆ ಚಿನ್ನದ ಲೇಪವನ್ನೇ ಮಾಡಿ ಬಂದಾತ ಅರೆಸ್ಟ್‌

ಸಾರಾಂಶ

ದೇಹಕ್ಕೆ ಕೆಜಿಗಟ್ಟಲೇ ಚಿನ್ನವನ್ನು ಅಂಟಿಸಿಕೊಮಡು ಬಂದಿದ್ದಾತ ಇದೀಗ ಅರೆಸ್ಟ್ ಆಗಿದ್ದಾನೆ

ಮಂಗಳೂರು (ಅ.29):  ದೇಹಕ್ಕೆ ಚಿನ್ನದ ಲೇಪ ಹಚ್ಚಿಕೊಂಡು ಅಕ್ರಮವಾಗಿ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್‌ ಅಧಿಕಾರಿಗಳು 32,96,800 ರು. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರಿನ ಅಬೂಬಕರ್‌ ಸಿದ್ದೀಕ್‌ ಬಂಧಿತ ಆರೋಪಿ. ಈತ ಸ್ಪೈಸ್ ಜೆಟ್‌ ವಿಮಾನದ ಮೂಲಕ ದುಬೈನಿಂದ ಆಗಮಿಸಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ. ಈತನ ಬಳಿ 24 ಕ್ಯಾರೆಟ್‌ನ 634 ಗ್ರಾಂ ಚಿನ್ನ ಪತ್ತೆಯಾಗಿದೆ.

ಹನಿಟ್ರ್ಯಾಪ್‌ ದಂಧೆ: ದಂಪತಿ ಸೇರಿ 7 ಮಂದಿ ಬಂಧನ ...

ಆರೋಪಿ ಸಿದ್ದೀಕ್‌ ಪೌಡರ್‌ ರೂಪದ ಚಿನ್ನವನ್ನು ದೇಹಕ್ಕೆ ಅಂಟಿಸಿಕೊಂಡು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಪ್ರಯಾಣ ಬೆಳೆಸಿದ್ದ. ಆರೋಪಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!