ಬೇಲಿಯೇ ಎದ್ದು ಹೊಲ ಮೇಯ್ದ ಕತೆ, ಇಬ್ಬರು ಪೊಲೀಸ್ ಸಿಬ್ಬಂದಿಯನ್ನ ಒದ್ದು ಒಳಗೆ ಹಾಕಿದ‌ ಮಂಗಳೂರು ಕಮಿಷನರ್

Published : Nov 07, 2026, 10:40 AM IST
Mangalore Police Commissioner Sudheer Kumar Reddy

ಸಾರಾಂಶ

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಹೊಯ್ಸಳ ವಾಹನದಲ್ಲಿ ಲೂಟಿಗಿಳಿದಿದ್ದ ಇಬ್ಬರು ಪೊಲೀಸರು ಅರೆಸ್ಟ್‌ ಮಾಡಲಾಗಿದೆ. ಮಂಗಳೂರಿನ ದಕ್ಷಿಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನ ಸ್ವತಃ ಪೊಲೀಸ್‌ ಕಮಿಷನರ್‌ ಅವರೇ ಬಂಧಿಸಿದ್ದಾರೆ. ಶಿವರಾಜ್, ಹಿರಣ್ಣ ಬೆನ್ನಿ ಬಂಧನಕ್ಕೆ ಒಳಗಾದ ಅಧಿಕಾರಿಗಳು. ಆಗಿದ್ದೇನು? ಸ್ಟೋರಿ ಓದಿ.

ಮಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಹೊಯ್ಸಳ ವಾಹನದಲ್ಲಿ ಲೂಟಿಗಿಳಿದಿದ್ದ ಇಬ್ಬರು ಪೊಲೀಸರು ಅರೆಸ್ಟ್‌ ಮಾಡಲಾಗಿದೆ. ಮಂಗಳೂರಿನ ದಕ್ಷಿಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನ ಸ್ವತಃ ಪೊಲೀಸ್‌ ಕಮಿಷನರ್‌ ಅವರೇ ಬಂಧಿಸಿದ್ದಾರೆ. ಶಿವರಾಜ್, ಹಿರಣ್ಣ ಬೆನ್ನಿ ಬಂಧನಕ್ಕೆ ಒಳಗಾದ ಅಧಿಕಾರಿಗಳು.

ಏನಿದು ಪ್ರಕರಣ?

ವಿಟ್ಲ ನಿವಾಸಿ ರವಿರಾಜ್‌ ಅನ್ನೋರು ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದಾರೆ. ಶಿವರಾಜ್, ಹಿರಣ್ಣ ಬೆನ್ನಿ ಅವರು ಹೊಯ್ಸಳ ವಾಹನದಲ್ಲಿ ಓಡಾಡುತ್ತ ವಸೂಲಿ ಮಾಡುತ್ತಿರುವ ಬಗ್ಗೆ ರವಿರಾಜ್‌ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿ ಅರೆಸ್ಟ್‌ ಮಾಡಲಾಗಿದೆ. ಒಂದು ದಿನ ರವಿರಾಜ್ ನೆಹರು ಮೈದಾನಲ್ಲಿ ವಾಕಿಂಗ್ ಮುಗಿಸಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಆಗ ಹೊಯ್ಸಳ ವಾಹನದಲ್ಲಿ ಬಂದ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ತಡೆದಿದ್ದಾರೆ. ನಂತರ ಮನಸೋ ಇಚ್ಛೆ ಹಲ್ಲೆ ನಡೆಸಿ ರವಿರಾಜ್ ಕಿಸೆಯಿಂದ ಮೊಬೈಲ್‌ನ್ನು ತೆಗೆದು, ಮೊಬೈಲ್ ಕವರ್‌ನಲ್ಲಿಇದ್ದ 300 ರೂಪಾಯಿ ಹಣ ಲೂಟಿ ಮಾಡಿದ್ದರು.

ಮತ್ತೊಬ್ಬ ಸಿಬ್ಬಂದಿ ವಿರುದ್ಧವೂ ದೂರು

ಅಷ್ಟೇ ಅಲ್ಲದೇ ಬಳಿಕ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದರಂತೆ. ಅಲ್ಲಿಗೂ ನಿಲ್ಲಿಸದ ಇವರ ದೌರ್ಜನ್ಯ ಮಾರನೇಯ ದಿನವೂ ಮುಂದುವರಿದಿತ್ತು. ಮತ್ತೆ ಹೊಯ್ಸಳ ವಾಹನದಲ್ಲಿ ಬಂದು ಗಲಾಟೆ ಮಾಡಿದ್ದರಂತೆ. ಮೊಬೈಲ್ ಕವರ್‌ನಲ್ಲಿದ್ದ ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್‌ನ 2 ಎ.ಟಿ.ಎಮ್ ಕಾರ್ಡ್ ಹಾಗೂ 1000 ನಗದು ಮತ್ತು ಮೋಟಾರು ಸೈಕಲ್‌ನ ಕೀ ತೆಗೆದುಕೊಂಡು ಹೋಗಿದ್ದರಂತೆ. ಅದಾದ ಬಳಿಕ ಮೊಬೈಲ್‌ನ ಪಾಸ್‌ವರ್ಡ್ ಪಡೆದು ಮೊಬೈಲ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್‌ ಚೆಕ್ ಮಾಡಿ ಲೂಟಿ ಮಾಡಿದ್ದಾರೆ. ಈ ಕೂಡಲೇ 2000 ಹಣ ನೀಡು. ಇಲ್ಲದಿದ್ದರೆ ಕೇಸ್ ಮಾಡಿ ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು. ಹಾಗೆಯೇ ರವಿರಾಜ್‌ ಅನ್ನೋರು ಮತ್ತೊಬ್ಬ ಪೊಲೀಸ್‌ ಸಿಬ್ಬಂದಿ ಉಮಾನಾಥ್‌ ಅನ್ನೋರು ಅವರ ಬೈಕ್‌ ಅಡ್ಡಗಟ್ಟಿ ಸೀಜ್‌ ಮಾಡಿದ್ದಾರೆ. ಈ ವೇಳೆ ಬೈಕ್‌ ಕೀ ಕಸಿದುಕೊಂಡು ಹೋಗಿದ್ದು ಹಣ ಕೊಟ್ಟರೆ ಮಾತ್ರ ನೀಡೋದಾಗಿ ಬೆದರಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ರವಿರಾಜ್‌ ದೂರು ನೀಡಿದ್ದರು. ದೂರಿನ ಅನ್ವಯ ಎಫ್ಐಆರ್ ದಾಖಲಾಗಿತ್ತು. ಕಮಿಷನರ್ ಸುಧೀರ್ ರೆಡ್ಡಿ ಸೂಚನೆ ಬೆನ್ನಲ್ಲೇ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನ ಬಂಧಿಸಲಾಗಿದೆ. ಬಂಧಿಸಿದ ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದರು. ಕೋರ್ಟ್‌ ಇಬ್ಬರು ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಉಮಾನಾಥ್ ವಿರುದ್ದ ತನಿಖೆ ಮುಂದುವರಿದೆ ಎಂದು ತಿಳಿದು ಬಂದಿದೆ.

PREV
Read more Articles on
click me!

Recommended Stories

2 ಹೆಕ್ಟೇರ್‌ನಲ್ಲಿ ನಿಂಬೆ ತೋಟ ನಿರ್ಮಿಸಿದ ರೈತ ರಾಮನಗೌಡ; ಕಡಿಮೆ ಖರ್ಚು, ಉತ್ತಮ ಆದಾಯ
ಕರ್ನಾಟಕದಲ್ಲಿ ಮುಂದಿನ ಎರಡು ದಿನ ಮಳೆ ಪಕ್ಕಾ! ಬೆಂಗಳೂರು, ಕರಾವಳಿ ಸೇರಿ ಹಲವು ಜಿಲ್ಲೆಗಳ ಮಳೆ ಮುನ್ಸೂಚನೆ ಹೀಗಿದೆ