ಮಂಗಳೂರಿನ ಫ್ಲೈಓವರ್ ನೋಡಿದರೆ ಸಂಸದ ನಳಿನ್ ಕುಮಾರ್ ಅವರ ಕೆಲಸ ಏನೆಂಬುದು ಗುತ್ತಾಗುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವ್ಯಂಗ್ಯ ಮಾಡಿದ್ದಾರೆ. ಹಾಗೆಯೇ ನಳಿನ್ ಕುಮಾರ್ ಆಧಾರವಿಲ್ಲದೆ ಲಘುವಾಗಿ ಮಾತನಾಡಿದ್ದಾರೆ. ಹೀಗೆ ಘನತೆ ಬಿಟ್ಟು ಮಾತನಾಡಿದರೆ ಸುಮ್ಮನಿರಲಾಗದು ಎಂದು ಎಚ್ಚರಿಸಿದ್ದಾರೆ.
ಮಂಗಳೂರು(ಸೆ.10): ನಳಿನ್ ಕುಮಾರ್ ಎಂಪಿಯಾಗಿ ಹೇಗೆ ಕೆಲಸ ಮಾಡಿದ್ದಾರೆ ಎನ್ನುವುದನ್ನು ಮಂಗಳೂರಿನ ಫ್ಲೈಓವರ್ ನೋಡಿದರೆ ಗೊತ್ತಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಮೇಲೆ ಐಡಿ ಕೇಸ್ ದಾಖಲಿಸಲು ಸಿದ್ದರಾಮಯ್ಯ ಕಾರಣ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಧಾರವಿಲ್ಲದೆ ಲಘುವಾಗಿ ಮಾತನಾಡಿದ್ದಾರೆ. ಹೀಗೆ ಘನತೆ ಬಿಟ್ಟು ಮಾತನಾಡಿದರೆ ಸುಮ್ಮನಿರಲಾಗದು ಎಂದು ಎಚ್ಚರಿಕೆ ನೀಡಿದ್ದಾರೆ.
undefined
ಮಂಗಳೂರು: ಸೆಂಥಿಲ್ ವಿರುದ್ಧ ದೇಶದ್ರೋಹಿ ತನಿಖೆ..?
ರಾಜ್ಯಾಧ್ಯಕ್ಷರಾಗಿ ಘನತೆಯಿಂದ ಮಾತನಾಡುವುದನ್ನು ಕಲಿಯಲಿ. ಇಡಿ, ಐಟಿ, ಸಿಬಿಐ ಯಾರ ಅಧೀನದಲ್ಲಿದೆ ಎನ್ನುವುದು ನಳಿನ್ ಕುಮಾರ್‌ಗೆ ಗೊತ್ತಿಲ್ಲವೇ? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. ಇಡಿ, ಐಟಿ, ಸಿಬಿಐ ಸಿದ್ದರಾಮಯ್ಯ ಅಧೀನಕ್ಕೆ ಬರುವುದಿಲ್ಲ ಎನ್ನುವ ಕನಿಷ್ಠ ಜ್ಞಾನ ಕೂಡ ನಳಿನ್‌ಗೆ ಇಲ್ಲ ಎಂದು ಐವನ್ ಲೇವಡಿ ಮಾಡಿದರು.
ವಾಹನ ದಂಡ ತಡೆಹಿಡಿಯಲಿ:
ಮೋಟಾರು ವಾಹನ ಕಾಯ್ದೆ ತಿದ್ದುಪಡಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸದೆ ಏಕಾಏಕಿ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಸರಿಯಲ್ಲ. 10-20 ಪಟ್ಟು ದಂಡ ವಿಧಿಸಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ.
ಮಂಗಳೂರಿನ ಡಿಸಿ ಬಂಗಲೆ ತೊರೆದ ಸೆಂಥಿಲ್..!
ಕೇಂದ್ರ ತಿದ್ದುಪಡಿ ತಂದ ಕೂಡಲೆ ಅದನ್ನು ಏಕಾಏಕಿ ಜಾರಿಗೊಳಿಸುವ ತುರ್ತು ರಾಜ್ಯಕ್ಕಿರಲಿಲ್ಲ. ಈ ಕುರಿತು ಅಧಿವೇಶನ ಕರೆದು ಚರ್ಚೆ ನಡೆಸಬೇಕಿತ್ತು. ಅಕ್ಟೋಬರ್‌ನಲ್ಲಿ ಅಧಿವೇಶನ ನಡೆಯುವವರೆಗೆ ಹೊಸ ದಂಡ ವಿಧಿಸುವುದನ್ನು ನಿಲ್ಲಿಸಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದರು.