ರಾಜೀನಾಮೆ ನೀಡಿದ್ದು ಸೆಂಥಿಲ್ ಹೇಡಿತನ: ಬಿಜೆಪಿ ವ್ಯಂಗ್ಯ

By Kannadaprabha NewsFirst Published Sep 10, 2019, 8:15 AM IST
Highlights

ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದು ಅವರ ಹೇಡಿತನ ಎಂದು ಜಿಲ್ಲಾ ಬಿಜೆಪಿ  ವ್ಯಂಗ್ಯ ಮಾಡಿದೆ. ದೇಶದಲ್ಲಿ ಮೋದಿ ಆಡಳಿತದಲ್ಲಿಯೇ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಿ ಆಡಳಿತಾತ್ಮಕ ವಿಚಾರ ತಿಳಿದವರು ಏಕಾಏಕಿ ದೇಶದ್ರೋಹಿ ಹೇಳಿಕೆ ನೀಡಿದ್ದೇಕೆ ಎಂದು ಜಿಲ್ಲಾ ಬಿಜೆಪಿ ಪ್ರಶ್ನಿಸಿದೆ.

ಮಂಗಳೂರು(ಸೆ.10): ಮೋದಿ ಆಡಳಿತ ಸಂದರ್ಬದಲ್ಲಿಯೇ ದಕ್ಷಿಣ ಕನ್ನಡದಲ್ಲಿ ಡಿಸಿಯಾಗಿ ಕಾರ್ಯ ನಿರ್ವಹಿಸಿದ ಸಸಿಕಾಂತ್ ಸೆಂಥಿಲ್ ಈಗ ದೇಶದ್ರೋಹಿ ಹೇಳಿಕೆ ನೀಡುತ್ತಿರುವುದ್ಯಾಕ ಎಂದು ಜಿಲ್ಲಾ ಬಿಜೆಪಿ ಪ್ರಶ್ನಿಸಿದೆ.

ಸೋಮವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಕಳೆದ ಐದು ವರ್ಷಗಳಿಂದ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ಇಲ್ಲಿ ಜಿಲ್ಲಾಧಿಕಾರಿಯಾಗಿದ್ದವರು ಕೂಡ ಆಡಳಿತಾತ್ಮಕ ಎಲ್ಲ ವಿಚಾರಗಳನ್ನು ತಿಳಿದುಕೊಂಡವರು. ಹಾಗಿರುವಾಗ ಏಕಾಏಕಿ ದೇಶವಿರೋಧಿ ನಿರ್ಧಾರ ಯಾಕಾಗಿ ಬಂತು? ಎಂದು ಕೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೆಂಥಿಲ್ ನಿರ್ಧಾರದ ಹಿಂದೆ ಎಂಡಪಂಥೀಯ ಚಿಂತನೆ ಇರಬಹುದು ಎನಿಸುತ್ತಿದೆ. ದೇಶದ ವಿಚಾರಗಳು ಜನತೆಯ ಭಾವನೆಗೆ ಸಂಬಂಧಿಸಿದ್ದು, ಅದು ಕೇಂದ್ರದ ತೀರ್ಮಾನ. ಜಿಲ್ಲಾಧಿಕಾರಿ ಈ ರೀತಿ ರಾಜಿನಾಮೆ ನೀಡಿರುವುದು ಅವರ ಹೇಡಿತನ ಎಂದು ಅವರು ಹೇಳಿದ್ದಾರೆ.

11ರಿಂದ ಪದಾಧಿಕಾರಿ ಆಯ್ಕೆ ಪ್ರಕ್ರಿಯೆ ಆರಂಭ

ಬಿಜೆಪಿಯಲ್ಲಿ ಪದಾಧಿಕಾರಿ ಆಯ್ಕೆ ಪ್ರಕ್ರಿಯೆ ಸೆ.11ರಿಂದ 30ರ ವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಬೂತ್‌ ಮಟ್ಟದಲ್ಲಿ ಅಧ್ಯಕ್ಷ ಹಾಗೂ ಸಮಿತಿಯನ್ನು ಆರಿಸಲಾಗುವುದು. ಅಕ್ಟೋಬರ್‌ 11ರಿಂದ 31ರವರೆಗೆ ಅಸೆಂಬ್ಲಿ ಅಧ್ಯಕ್ಷರ ಆಯ್ಕೆ, ನ.11ರಿಂದ 30ರವರೆಗೆ ಜಿಲ್ಲಾ ಸಮಿತಿ ಹಾಗೂ ಅಧ್ಯಕ್ಷರ ಆಯ್ಕೆ, ಡಿ.1ರಿಂದ 15ರವರೆಗೆ ರಾಜ್ಯ ಸಮಿತಿ ಆಯ್ಕೆ ಬಳಿಕ ರಾಷ್ಟ್ರೀಯ ಸಮಿತಿಗೆ ಆಯ್ಕೆ ನಡೆಯಲಿದೆ ಎಂದು ಸಂಜೀವ ಮಠಂದೂರು ಹೇಳಿದರು.

ಮಂಗಳೂರು: ಸೆಂಥಿಲ್‌ ವಿರುದ್ಧ ದೇಶದ್ರೋಹಿ ತನಿಖೆ..?

ದ.ಕ.ಜಿಲ್ಲೆಯಲ್ಲಿ 2 ಲಕ್ಷ ಹೊಸ ಸದಸ್ಯತ್ವದ ಗುರಿ ಹೊಂದಲಾಗಿದೆ. ಈಗಾಗಲೇ 1.20 ಲಕ್ಷ ಸದಸ್ಯತ್ವ ನಡೆಸಲಾಗಿದೆ. ಪ್ರತಿ ಅಸೆಂಬ್ಲಿ ಕ್ಷೇತ್ರದಲ್ಲಿ 25 ಸಾವಿರ ಸದಸ್ಯತ್ವದ ಗುರಿ ಇರಿಸಲಾಗಿದೆ ಎಂದರು. ಶಾಸಕ ಡಾ.ಭರತ್‌ ಶೆಟ್ಟಿ, ಮುಖಂಡರಾದ ಹರಿಕೃಷ್ಣ ಬಂಟ್ವಾಳ, ರವಿಶಂಕರ್‌ ಮಿಜಾರ್‌, ಕಿಶೋರ್‌ ರೈ, ಸತೀಶ್‌ ಪ್ರಭು ಇದ್ದರು.

click me!