ಬೆಂಗಳೂರು ಏರ್ಪೋರ್ಟಿಗೆ ಬೆದರಿಕೆ ಹಾಕಿದ್ದವಗೆ ಮಂಗಳೂರು ನಂಟು ?

Kannadaprabha News   | Asianet News
Published : Jan 22, 2020, 08:50 AM ISTUpdated : Jan 22, 2020, 11:33 AM IST
ಬೆಂಗಳೂರು ಏರ್ಪೋರ್ಟಿಗೆ ಬೆದರಿಕೆ ಹಾಕಿದ್ದವಗೆ ಮಂಗಳೂರು ನಂಟು ?

ಸಾರಾಂಶ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಗೂ ಮಂಗಳೂರು ಬಾಂಬ್ ಪತ್ತೆ ಪ್ರಕರಣಕ್ಕೂ ನಂಟಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು [ಜ.22]:  ಎರಡು ವರ್ಷಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಕರೆ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ ಆರೋಪಿಗೆ ಈಗ ಮಂಗಳೂರಿನಲ್ಲಿ ಬಾಂಬ್‌ ಪತ್ತೆಯಾದ ಪ್ರಕರಣದ ಜೊತೆ ನಂಟಿದೆ ಎಂಬ ಅನುಮಾನ ವ್ಯಕ್ತವಾಗಿದೆ.

"

ಉಡುಪಿ ಹತ್ತಿರದ ಮಣಿಪಾಲ್‌ನ ಕೆಎಚ್‌ಬಿ ಕಾಲೋನಿ ನಿವಾಸಿ ಆದಿತ್ಯ ರಾವ್‌ ಎಂಬಾತನೇ ಶಂಕಿತನಾಗಿದ್ದು, 2018ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಕರೆ ಮಾಡಿದ ಪ್ರಕರಣದಲ್ಲಿ ಒಂಭತ್ತು ತಿಂಗಳು ಆತ ಜೈಲು ಶಿಕ್ಷೆಗೆ ಗುರಿಯಾಗಿದ್ದ. ನಂತರ 2019ರ ಅಕ್ಟೋಬರ್‌ನಲ್ಲಿ ಆದಿತ್ಯ ಬಂಧಮುಕ್ತನಾಗಿದ್ದ. ಪರಪ್ಪನ ಅಗ್ರಹಾರ ಕಾರಾಗೃಹದಿಂದ ಹೊರಬಂದ ಬಳಿಕ ಆತ ಮತ್ತೆ ಮಂಗಳೂರಿನ ವಿಮಾನ ನಿಲ್ದಾಣ ಸ್ಫೋಟಕ್ಕೆ ಯತ್ನಿಸಿರಬಹುದು ಎಂಬ ಅನುಮಾನಗಳಿವೆ.

ಬಾಂಬ್ ಇಟ್ಟುಹೋದವನ ಪಿನ್ ಟು ಪಿನ್ ಡಿಟೇಲ್ಸ್ ಲಭ್ಯ, ಸಿಸಿಟಿವಿ ಸಾಕ್ಷ್ಯ

ಈ ಅನುಮಾನಕ್ಕೆ ಕಾರಣ ಮಂಗಳೂರಿನ ಬಾಂಬ್‌ ಪ್ರಕರಣದ ಶಂಕಿತ ಹಾಗೂ ಆದಿತ್ಯ ರಾವ್‌ನ ಚಹರೆಯಲ್ಲಿ ಹೋಲಿಕೆ ಕಂಡುಬಂದಿರುವುದು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮಂಗಳೂರು ಪೊಲೀಸರು, ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾದ ಶಂಕಿತನ ಭಾವಚಿತ್ರವನ್ನು ಬೆಂಗಳೂರು ಪೊಲೀಸರಿಗೆ ಕಳುಹಿಸಿದ್ದರು. ಆ ಭಾವಚಿತ್ರ ನೋಡಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು, ಮಂಗಳೂರಿನ ಬಾಂಬ್‌ ಪತ್ತೆ ಪ್ರಕರಣದ ಆರೋಪಿಗೂ ಆದಿತ್ಯನ ಮುಖಚಹರೆಗೂ ಹೋಲಿಕೆ ಕಂಡುಬಂದಿದೆ ಎಂದಿದ್ದಾರೆ. ಈ ಸುಳಿವು ತಿಳಿದ ಕೂಡಲೇ ಮಂಗಳೂರು ಪೊಲೀಸರು ಆದಿತ್ಯನ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ಮೇಲೆ ಅನುಮಾನ: HDKಯನ್ನು ಭೇಟಿಯಾದ ಮಂಗಳೂರು ಕಮಿಷನರ್...

ಎಂಬಿಎ ಪದವೀಧರನಾದ ಆದಿತ್ಯ, ಓದು ಮುಗಿಸಿದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಎಲ್ಲೆಯೂ ಸಹ ಕಾಯಂ ಆಗಿ ನೆಲೆ ನಿಲ್ಲದೆ ಕೆಲವೇ ದಿನಗಳಲ್ಲಿ ಉದ್ಯೋಗ ತೊರೆಯುತ್ತಿದ್ದ. 2018ರ ಆಗಸ್ಟ್‌ನಲ್ಲಿ ಕೆಐಎ ಭದ್ರತಾ ಅಧಿಕಾರಿ ಹುದ್ದೆಗೆ ಆತ ಅರ್ಜಿ ಸಲ್ಲಿಸಿದ್ದ. ಆ ವೇಳೆ ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ಆರೋಪಿಗೆ ಉದ್ಯೋಗ ನೀಡಲು ಕೆಐಎ ಆಡಳಿತ ಮಂಡಳಿ ನಿರಾಕರಿಸಿತು. ಇದರಿಂದ ಕೆರಳಿದ ಆತ, ಅದೇ ವರ್ಷದ ಆಗಸ್ಟ್‌ 30 ರಂದು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಟ್ಟಿರುವುದಾಗಿ ಕರೆ ಮಾಡಿದ್ದ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿಗೆ 9 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಪರಪ್ಪನ ಅಗ್ರಹಾರದಿಂದ ಕಾರಾಗೃಹ ಶಿಕ್ಷೆ ಮುಗಿಸಿ 2019ರ ಅಕ್ಟೋಬರ್‌ನಲ್ಲಿ ಆದಿತ್ಯ ಬಿಡುಗಡೆಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದರಾಎ.

PREV
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ