ಕೊರೋನಾ ನಿಗ್ರ​ಹಕ್ಕೆ ಭೂ ತಾಯಿಗೆ ಮೊರೆ..!

By Kannadaprabha NewsFirst Published Aug 31, 2020, 9:50 AM IST
Highlights

ಕೊರೋನಾ ಮಹಾಮಾರಿ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಜನ ಜೀವನ ತತ್ತರಿಸಿದೆ. ಲಕ್ಷಾಂತರ ಜನರಿಗೆ ಕೊರೋನಾ ಮಹಾಮಾರಿ ಎದುರಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಮಂಡ್ಯ (ಆ.31):  ದೇಶ​ದಲ್ಲಿ ತೀವ್ರ​ಗ​ತಿ​ಯಲ್ಲಿ ವ್ಯಾಪಿ​ಸು​ತ್ತಿ​ರುವ ಕೊರೋನಾ ನಿಗ್ರ​ಹ​ಪ​ಡಿ​ಸಲು ತಾಲೂ​ಕಿನ ಮೊತ್ತ​ಹಳ್ಳಿಯ ಯುವ​ಕರು ಭೂ ತಾಯಿಯ ಮೊರೆ ಹೋಗಿ​ ಭತ್ತದ ಪೈರಿನ ಮೂಲಕ ಕೊರೋನಾ ಜಾಗೃತಿ ಮೂಡಿ​ಸಿ​ದ್ದಾ​ರೆ. 

ಕೊರೋನಾ ಭಾರತ ಬಿಟ್ಟು ತೊಲಗು, ಮಾಸ್ಕ್‌ ಧರಿಸಿ, ಸಾಮಾ​ಜಿಕ ಅಂತ​ರ​ವಿ​ರಲಿ ಎಂಬ ಜಾಗೃತಿ ಸಂದೇ​ಶ​ಗ​ಳನ್ನು ಭತ್ತದ ಪೈರಿನ ಮೂಲ​ಕವೇ ಸೃಷ್ಟಿಸಿ ಎಲ್ಲರ ಗಮ​ನ​ಸೆ​ಳೆ​ದಿ​ದ್ದಾರೆ. ಮೊತ್ತ​ಹ​ಳ್ಳಿಯ ರಾಜು ಕಾಳಪ್ಪ ಅವರ ಜಮೀ​ನಿ​ನಲ್ಲಿ ಕೊರೋನಾ ಜಾಗೃತಿ ಪೈರು ರಚಿಸಿದ್ದಾರೆ.

ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೋನಾ ಅಬ್ಬರ ಹೇಗಿದೆ?...

ಹರ್ಷಿತ್‌ ಮುಡೆ, ದಿಲೀಪ್‌, ಮಹ​ಮ್ಮದ್‌ ಎಂಬು​ವರು ವಿನೂ​ತನ ಪ್ರಯ​ತ್ನ​ದೊಂದಿಗೆ ಸೋಂಕಿನ ಬಗ್ಗೆ ಜನ​ರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆ​ಸಿದ್ದಾ​ರೆ.

ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ಇಟಲಿ, ಬ್ರಿಟನ್‌, ಅಮೆರಿಕ, ಬ್ರೆಜಿಲ್‌ನಲ್ಲಿ ಹೇಗಿದೆ?.

ದೇಶದಲ್ಲಿ ಈಗಾಗಲೇ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿದ್ದು, ಸಾವಿರಾರು ಜನರು ಬಲಿಯಾಗಿದ್ದಾರೆ. ದಿನದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

ಮಂಡ್ಯ ಜಿಲ್ಲೆಯೂ ಕೂಡ ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ ನಲುಗಿದೆ. ಸಾವಿರಾರು ಜನರು ಕೊರೋನಾದಿಂದ ಬಳಲಿದ್ದಾರೆ.

click me!