Mandya: ಲಂಚಕ್ಕೆ ಬೇಡಿಕೆ ಇಟ್ಟ ಮಂಡ್ಯ ತಹಶೀಲ್ದಾರ್ ಸಸ್ಪೆಂಡ್‌

Published : Mar 26, 2022, 09:32 AM IST
Mandya: ಲಂಚಕ್ಕೆ ಬೇಡಿಕೆ ಇಟ್ಟ ಮಂಡ್ಯ ತಹಶೀಲ್ದಾರ್ ಸಸ್ಪೆಂಡ್‌

ಸಾರಾಂಶ

*   ಕಂದಾಯ‌ ಇಲಾಖೆ ಅಧೀನ‌ ಕಾರ್ಯದರ್ಶಿ ರಶ್ಮಿ ಆದೇಶ *   ಕರ್ತವ್ಯ ಲೋಪ ಸೇರಿ 13 ಕಾರಣಗಳನ್ನ ನೀಡಿ ತಹಶೀಲ್ದಾರ್ ಅಮಾನತು *   ಸರ್ಕಾರಿ ಮನೆಯ ವಿದ್ಯುತ್ ಬಿಲ್ ಪಾವತಿಸದೆ ಸುಳ್ಳು ಮಾಹಿತಿ ನೀಡಿದ್ದ ಅಧಿಕಾರಿ 

ಮಂಡ್ಯ(ಮಾ.26):  ಕರ್ತವ್ಯ ಲೋಪ ಹಾಗೂ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನಲೆಯಲ್ಲಿ ಮಂಡ್ಯ ತಹಶೀಲ್ದಾರ್ ಶಂಭಣ್ಣ ಗಾಳಿ ಅವರನ್ನ ಅಮಾನತುಗೊಳಿಸಿ ಕಂದಾಯ‌ ಇಲಾಖೆ ಅಧೀನ‌ ಕಾರ್ಯದರ್ಶಿ ರಶ್ಮಿ ಅವರು ಆದೇಶಿಸಿದ್ದಾರೆ. ಕರ್ತವ್ಯ ಲೋಪ ಸೇರಿ 13 ಕಾರಣಗಳನ್ನ ನೀಡಿ ತಹಶೀಲ್ದಾರ್ ಶಂಭಣ್ಣ ಗಾಳಿ ಅವರನ್ನ ಅಮಾನತುಗೊಳಿಸಲಾಗಿದೆ ಅಂತ ತಿಳಿದು ಬಂದಿದೆ. ಕೋವಿಡ್ ಸಂದರ್ಭದಲ್ಲಿ ನೂರಾರು ಜನರನ್ನ ಸೇರಿಸಿ ಪುತ್ರನ ಹುಟ್ಟುಹಬ್ಬ ಆಚರಣೆ ಮಾಡಿದ್ದರು. 144 ಸೆಕ್ಷನ್ ಜಾರಿ ಇದ್ರು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು ಅಂತ ಆರೋಪಿಸಲಾಗಿತ್ತು. 

ನಿವೇಶನ ಹಂಚಿಕೆಗೆ ಲಂಚಕ್ಕೆ ಬೇಡಿಕೆ, ಸೀಜ್ ಆಗಿದ್ದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ದೂರು ಕೊಡಲು ತಕ್ಷಣ ಕ್ರಮವಹಿಸದೆ ಇರುವುದು. ಅಲ್ಲದೇ ಅಕ್ಕಿ ನಾಪತ್ತೆಯಾಗಲು ತಹಶೀಲ್ದಾರ್ ಕೂಡ ಪರೋಕ್ಷ‌ ಕಾರಣರಾಗಿದ್ದರು. ಸರ್ಕಾರಿ ಮನೆಯ ವಿದ್ಯುತ್ ಬಿಲ್ ಪಾವತಿಸದೆ ಸುಳ್ಳು ಮಾಹಿತಿ ನೀಡಿದ್ದು, ಚೆಸ್ಕಾಂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ಧಗಳಿಂದ ಚೆಸ್ಕಾಂ ಅಧಿಕಾರಿ, ಸಿಬ್ಬಂದಿಗಳಿಗೆ ನಿಂದನೆ‌, ಕಚೇರಿ‌ ನಿರ್ವಹಣೆಯಲ್ಲಿ ಕೆಲವು ಲೋಪ ಸೇರಿದಂತೆ 13 ಕಾರಣಗಳನ್ನ ನೀಡಿ ತಹಶೀಲ್ದಾರ್ ಶಂಭಣ್ಣ ಗಾಳಿ ಅವರನ್ನ ಸಸ್ಪೆಂಡ್ ಮಾಡಲಾಗಿದೆ.  

Suspend MLA: ಶಾಸಕರನ್ನು ದೀರ್ಘಕಾಲ ಸಸ್ಪೆಂಡ್‌ ಮಾಡುವಂತಿಲ್ಲ: ಸುಪ್ರೀಂಕೋರ್ಟ್‌

ನರಗುಂದ ಗಲಾಟೆ ಪ್ರಕರಣ‌: ಸಿಪಿಐ ನಂದೇಶ್ವರ ಕುಂಬಾರ ಅಮಾನತು

ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದ್ದ ಗಲಾಟೆ ಹಾಗೂ ಚಾಕು ಇರಿತ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಸಿಪಿಐ ನಂದೇಶ್ವರ ಕುಂಬಾರ್ (CPI Nandeshwara Kumbara) ಅವರನ್ನು ಅಮಾನತು (Suspend) ಮಾಡಲಾಗಿದೆ. ಬೆಳಗಾವಿಯ ಉತ್ತರ ವಲಯ ಐಜಿಪಿ ಎನ್ ಸತೀಶ್ ಕುಮಾರ್ (N Satish Kumar) ಅಮಾನತು ಆದೇಶವನ್ನು ಹೊರಡಿಸಿದ್ದರು.

ಜನವರಿ 17 ರಂದು ನರಗುಂದ ಪಟ್ಟಣದಲ್ಲಿ ನಡೆದಿದ್ದ ಗಲಾಟೆ ಹಾಗೂ ಚಾಕು ಇರಿತದಲ್ಲಿ ಶಮೀರ್ ಶಹಪುರ ಎಂಬಾತನ ಹತ್ಯೆಯಾಗಿತ್ತು. ಮಾತ್ರವಲ್ಲದೇ ಶಮ್ ಶೇರ್ ಖಾನ್ ಎಂಬಾತನಿಗೆ ಗಂಭೀರ ಗಾಯವಾಗಿತ್ತು. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಬಂಧನವಾದರೂ ಪೊಲೀಸ್ ವೈಫಲ್ಯದ ಹಿನ್ನೆಲೆಯಲ್ಲಿ ಗಲಾಟೆ ನಡೆದ ಬಗ್ಗೆ ಆರೋಪವಿತ್ತು. ಹಾಗಾಗಿ ಸಿಪಿಐ ನಂದೇಶ್ವರ ಕುಂಬಾರ್ ಅವರನ್ನು ಅಮಾನತು ಮಾಡಲಾಗಿತ್ತು. 

ಪೊಲೀಸರ ವೈಫಲ್ಯವೇ ಕಾರಣ:

ಪೊಲೀಸರ ವೈಫಲ್ಯದಿಂದ ಮುಸ್ಲಿಂ ಯುವಕನ ಕೊಲೆ ನಡೆದಿದೆ. ಇದನ್ನು ವಿಧಾನಸಭೆ ಅಧಿವೇಶನದಲ್ಲಿ ಸಮಗ್ರ ಚರ್ಚೆಗೆ ಒತ್ತಾಯಿಸುವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ಇತ್ತೀಚೆಗೆ ಕೊಲೆಯಾದ ಮುಸ್ಲಿಂ ಯುವಕ ಸಮೀರ ಶಹಪೂರನ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರನ್ನು ಸಂತೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಯುವಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಲು ಅಧಿವೇಶನದಲ್ಲಿ ಆಗ್ರಹಿಸಲಾಗುವುದು ಅಂತ ಹೇಳಿದ್ದರು. 

ತರಗತಿಯಲ್ಲಿ ವಿವಾದ ಸೃಷ್ಟಿಸಿದ ಶಿಕ್ಷಕಿಯನ್ನು ಅಮಾನತು ಮಾಡಿದ ಶಾಲಾ ಮಂಡಳಿ

ಪ್ರಕರಣದ ಕುರಿತು ಗದಗ ಎಸ್ಪಿಯೊಂದಿಗೆ ಮಾತನಾಡಿದ್ದೇನೆ. ಇದಕ್ಕೆ ಪೊಲೀಸರ ವೈಫಲ್ಯವೇ ಆಗಿದೆ ಎಂದು ತಿಳಿಸಿದ್ದೇನೆ. ಇದರಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಸರ್ಕಾರಕ್ಕೆ ಒತ್ತಾಯಿಸುವೆ. ಜತೆಗೆ ಯಾವುದಾದರೂ ತನಿಖಾ ಸಂಸ್ಥೆಯಿಂದ ಅಥವಾ ಸಿಬಿಐಗೆ ವಹಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆಡಳಿತ ಪಕ್ಷ ಬಿಜೆಪಿ ಬಜರಂಗದಳ, ಸಂಘ ಪರಿವಾರವನ್ನು ಪ್ರೋತ್ಸಾಹಿಸುತ್ತಿರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಘಟನೆ ನಡೆಯಲು ಪ್ರಚೋದನೆ ನೀಡಿದವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. 

ಈ ರೀತಿ ಘಟನೆಗಳು ಮರುಕಳಿಸದಂತೆ ಪೊಲೀಸ್‌ ಇಲಾಖೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. ಈ ಯುವಕನ ಮನೆಗೆ ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಾದ ಸಿ.ಸಿ. ಪಾಟೀಲ ಭೇಟಿ ನೀಡಬೇಕಿತ್ತು. ಭೇಟಿ ನೀಡದೇ ಇರುವುದು ರಾಜ್ಯ ಸರ್ಕಾರದ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಆರೋಪಿಸಿದ್ದರು. 
 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ