ಸುಮಲತಾ ಅಂಬರೀಶ್ ವಿರುದ್ಧ ತೀವ್ರ ಆಕ್ರೋಶ : ಅಂತರ ಕಾಯ್ದುಕೊಂಡ ಸಂಸದೆ

Kannadaprabha News   | Asianet News
Published : Jun 30, 2021, 11:27 AM ISTUpdated : Jun 30, 2021, 11:48 AM IST
ಸುಮಲತಾ ಅಂಬರೀಶ್ ವಿರುದ್ಧ ತೀವ್ರ ಆಕ್ರೋಶ : ಅಂತರ ಕಾಯ್ದುಕೊಂಡ ಸಂಸದೆ

ಸಾರಾಂಶ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ತೀವ್ರ ಅಸಮಾಧಾನ ಮಂಡ್ಯದಿಂದ ಅಂತರ ಕಾಯ್ದುಕೊಂಡಿರುವ ಸುಮಲತಾ  ಜನರ ಕಷ್ಟ ಕೇಳದೆ ಕ್ಷೇತ್ರದಿಂದ ದೂರ ಉಳಿದಿದ್ದಾರೆ ಎನ್ನುವ ಆರೋಪ

ಮಂಡ್ಯ (ಜೂ.30): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಮ್ಮ ಸ್ವ ಕ್ಷೇತ್ರವನ್ನೇ ಮರೆತಿದ್ದಾರೆ.  ಮಂಡ್ಯದಿಂದ ಅಂತರ ಕಾಯ್ದುಕೊಂಡಿರುವ ಸುಮಲತಾ ಸಂಕಷ್ಟದಲ್ಲಿ ಜನರ ಕಷ್ಟ ಕೇಳದೆ ಕ್ಷೇತ್ರದಿಂದ ದೂರ ಉಳಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. 

ಸಮಸ್ಯೆ ಹೇಳಿಕೊಳ್ಳಲು ಸಾಮಾನ್ಯ ಜನರ ಕೈಗೆ ಸಿಗುತ್ತಿಲ್ಲ.  ಚುನಾವಣೆ ಸಮಯದಲ್ಲಿ ನಿಮ್ಮೊಂದಿಗಿರುತ್ತೇನೆಂದು ಕೊಟ್ಟ ಮಾತು ಮರೆತ ಸುಮಲತಾ ಅಂಬರೀಶ್ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ. 

ಕೆಆರ್‌ಎಸ್‌ ಬಿರುಕು ಬಿಟ್ಟಿರುವ ವಿಷಯ ಸತ್ಯ : ಸುಮಲತಾ

3 ತಿಂಗಳಲ್ಲಿ ಕೇವಲ 2 ಬಾರಿ ಮಾತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದು,  ಮೇ 7, 29ರಂದು ಮಂಡ್ಯಕ್ಕೆ ಬಂದು ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಲಿಗೆ ಅಪರೂಪದ ಅತಿಥಿಯಂತೆ ವರ್ತನೆ ತೋರುತ್ತಿದ್ದಾರೆ. 

ರಾಜಕೀಯಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪ : ಸುಮಲತಾ ಅಂಬರೀಶ್

ಮೇ.29ರಂದು ಮಂಡ್ಯಕ್ಕೆ ಬಂದಿದ್ದು ಈ ವೇಳೆ  KRS ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿದ್ದರು. ಜನಪ್ರತಿನಿಧಿಗಳು, ರೈತರು ವಾಗ್ದಾಳಿ ನಡೆಸಿದರೂ ಈವರೆಗೆ ಸ್ಪಷ್ಟನೆ ನೀಡದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. 

ಮನ್‌ಮುಲ್‌ನಲ್ಲಿ ದೊಡ್ಡ ಹಗರಣವೇ ನಡೆದಿದ್ದರೂ ಮಾತನಾಡದೆ ಮೌನವಹಿಸಿದ್ದಾರೆ. ಈ ನಿಟ್ಟಿನಲ್ಲಿ ಸುಮಲತಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.  

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ