ಮದುವೆ ನೆನಪಿಗಾಗಿ ಗಿಡ ನೆಟ್ಟ ನವದಂಪತಿ

Published : Sep 06, 2019, 08:05 AM IST
ಮದುವೆ ನೆನಪಿಗಾಗಿ ಗಿಡ ನೆಟ್ಟ ನವದಂಪತಿ

ಸಾರಾಂಶ

ಮದುವೆ ಸೇರಿದಂತೆ ಇತರ ಸಮಾರಂಭಗಳಲ್ಲಿ ಗಿಡಗಳನ್ನು ಹಂಚುವುದು, ಗಿಡಗಳನ್ನು ಗಿಫ್ಟ್ ಮಾಡುವುದು ಈಗ ಟ್ರೆಂಡ್‌ ಆಗಿದೆ. ಸಮಾರಂಭಗಳಲ್ಲಿ ಜನ ಪರಿಸರ ಕಾಳಜಿ ಮೆರೆಯೋದನ್ನು ಕಾಣಬಹುದು. ಇದೀಗ ಮಂಡ್ಯದಲ್ಲಿ ನೂತನ ದಂಪತಿ ತಮ್ಮ ವಿವಾಹದ ನೆನಪಿಗಾಗಿ ಗಿಡ ನೆಟ್ಟು ಮಾದರಿಯಾಗಿದ್ದಾರೆ.

ಮಂಡ್ಯ(ಸೆ.06): ಮದುವೆ ಸೇರಿದಂತೆ ಇತರ ಸಮಾರಂಭಗಳಲ್ಲಿ ಗಿಡಗಳನ್ನು ಹಂಚುವುದು, ಗಿಡಗಳನ್ನು ಗಿಫ್ಟ್ ಮಾಡುವುದು ಈಗ ಟ್ರೆಂಡ್‌ ಆಗಿದೆ. ಸಮಾರಂಭಗಳಲ್ಲಿ ಜನ ಪರಿಸರ ಕಾಳಜಿ ಮೆರೆಯೋದನ್ನು ಕಾಣಬಹುದು. ಇದೀಗ ಮಂಡ್ಯದ ಹಲಗೂರಿನಲ್ಲಿ ನೂತನ ದಂಪತಿ ತಮ್ಮ ವಿವಾಹದ ನೆನಪಿಗಾಗಿ ಗಿಡ ನೆಟ್ಟು ಮಾದರಿಯಾಗಿದ್ದಾರೆ.

ಎಸ್‌.ಹೊನ್ನಲಗೆರೆ ಗ್ರಾಮದ ಮಹಾ ಕಟ್ಟೆವೀರಭದ್ರ ದೇವಸ್ಥಾನ ಆವರಣದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಗುರುವಾರ ಮದುವೆಯಾದ ನವ ದಂಪತಿ ವಿವಾಹದ ಸವಿ ನೆನಪಿಗಾಗಿ ಐದು ಗಿಡಗಳನ್ನು ನೆಟ್ಟರು.

ಮಂಡ್ಯ: ಮೋದಿ, ಶಾ ವಿರುದ್ಧ ಹೆಚ್ಚಿದ ಕಿಚ್ಚು; ಭಾವಚಿತ್ರ ಸುಟ್ಟು ಆಕ್ರೋಶ

ಬೆಳಕವಾಡಿ ಗ್ರಾಮದಲ್ಲಿ ಪರಿಸರ ಪ್ರೇಮಿಗಳು ‘ಗಿಡ ನೆಡು ಮರ ಮಾಡು’ ಎಂಬ ಚಾಲೆಂಜ್ಗೆ ಚಾಲನೆ ನೀಡಿದ್ದರು. ಸವಾಲನ್ನು ಸ್ವೀಕರಿಸಿದ ನವದಂಪತಿ ಡಿ.ಮನು ಮತ್ತು ನಂದಿನಿ ಗಿಡ ನೆಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಪರಿಸರ ಪ್ರೇಮಿಗಳಾದ ಜಯಣ್ಣ , ಶಿವಪ್ರಸಾದ್‌, ಪ್ರಭುಸ್ವಾಮಿ, ಮಳವಳ್ಳಿ ಅವಿನಾಶ್‌, ಅಮೃತಹಳ್ಳಿ ರವಿ ಉಪಸ್ಥಿತರಿದ್ದರು.

ಇಡಿ ಬಿಜೆಪಿ ಕೈಗೊಂಬೆ; ಕೇಂದ್ರದಿಂದ ದ್ವೇಷದ ರಾಜಕಾರಣ

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!