
ಮಂಡ್ಯ (ಜ.27): ಜಿಲ್ಲೆಯಲ್ಲಿ ಆಲೆಮನೆಗಳನ್ನು ಪುನಶ್ಚೇತನಗೊಳಿಸುವುದರೊಂದಿಗೆ ಮಂಡ್ಯ ಬೆಲ್ಲಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಮಂಡ್ಯ ಜಿಲ್ಲೆಯ ಆಲೆಮನೆಗಳ ಪುನಶ್ಚೇತನ ಕೈಗೊಳ್ಳುವ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿ, ಸಣ್ಣ ಲಾಭಗಳ ಬಗ್ಗೆ ಯೋಚಿಸುವುದರಿಂದ ಪ್ರಯೋಜನವಿಲ್ಲ.
ಪಡಿತರ ವ್ಯವಸ್ಥೆಯಲ್ಲಿ ಸಕ್ಕರೆ ಬದಲು ಬೆಲ್ಲ..? ...
ಬ್ರಾಂಡಿಂಗ್, ಪ್ರಮೋಟಿಂಗ್, ಮಾರ್ಕೆಟಿಂಗ್‌ನೊಂದಿಗೆ ರೈತರಿಗೆ ದೊಡ್ಡಮಟ್ಟದ ಲಾಭ ದೊರಕುವಂತೆ ಮಾಡಬೇಕು.
ಯೂರೋಪ್‌ನಲ್ಲಿ 1ಕೆಜಿ ಬೆಲ್ಲಕ್ಕೆ 1 ಸಾವಿರ ಇದೆ. ಅದಕ್ಕಾಗಿ ಬೆಲ್ಲಕ್ಕೆ ಗುಣಮಟ್ಟಕಾಪಾಡಿಕೊಂಡು ರಫ್ತಿಗೆ ಉತ್ತೇಜನ ನೀಡುವಂತೆ ಮಾಡಬೇಕಿದೆ ಎಂದು ಹೇಳಿದರು.