ಮಳೆಗಾಗಿ ಹಾಡು ಹಾಡಿ ಪ್ರಾರ್ಥಿಸಿದ ಮಂಡ್ಯ ಶಾಸಕ

By Web DeskFirst Published Aug 13, 2019, 1:27 PM IST
Highlights

ಇತ್ತ 17 ಜಿಲ್ಲೆಗಳು ಪ್ರವಾಹದಿಂದ ತತ್ತರಿಸುತ್ತಿದ್ದರೆ ಅತ್ತ ಕೆಲ ಜಿಲ್ಲೆಗಳು ಮಳೆ ಇಲ್ಲದೇ ಬರದಿಂದ ತಲುಗುತ್ತಿವೆ. ಮಂಡ್ಯದ ಶಾಸಕರೋರ್ವರು ಮಳೆಗಾಗಿ ಹಾಡಿನ ಮೂಲಕ ಪ್ರಾರ್ಥಿಸಿದ್ದಾರೆ. 

ಮಂಡ್ಯ(ಆ.13):  ಕರ್ನಾಟಕದ 17 ಜಿಲ್ಲೆಗಳೂ ಭಾರೀ ಮಳೆಯಿಂದ ತತ್ತರಿಸುತ್ತಿದ್ದರೆ ಇತ್ತ ಮಳೆಯಿಲ್ಲದೇ ಕೆಲವು ಜಿಲ್ಲೆಗಳ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. 

ಭಾರೀ ಪ್ರವಾಹದಿಂದ  ನಲುಗಿದ್ದರೆ, ಬರದಿಂದಲೂ ರೈತರು ನೀರಿಲ್ಲದೇ ತತ್ತರಿಸುತ್ತಿದ್ದಾರೆ. ಆದರೆ ಮಂಡ್ಯ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇನ್ನೂ ಕೂಡ ಸುರಿಯಬೇಕಾದ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದರಿಂದ ಇಲ್ಲಿನ ಜನರು ಮಳೆಗಾಗಿ ಮೊರೆ ಇಡುವುದು ತಪ್ಪಿಲ್ಲ.

 ಮಂಡ್ಯ ಜಿಲ್ಲೆ ಮಳವಳ್ಳಿಯ ಜೆಡಿಎಸ್ ಶಾಸಕ ಡಾ.ಕೆ ಅನ್ನದಾನಿ ಜಾನಪದ ಹಾಡು ಹಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. 

ಮಳವಳ್ಳಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಯಾತಕ್ಕೆ ಮಳೆ‌ಹೋದವೋ ಶಿವ ಶಿವ ಲೋಕ ತಲ್ಲಣಿಸುತ್ತಾವೋ ಎಂಬ ಜಾನಪದ ಹಾಡು ಹಾಡಿ ಮಳೆಗಾಗಿ ಪ್ರಾರ್ಥಿಸಿದರು.  ಈ ವೇಳೆ ಮಾತನಾಡಿದ ಅವರು ಉತ್ತರ ಕರ್ನಾಟಕ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿದ್ರೆ ನಮ್ಮ ಕ್ಷೇತ್ರದಲ್ಲಿ ಮಳೆಯ ಕೊರತೆಯಿಂದ ಬರದ ಸ್ಥಿತಿ ಎದುರಾಗಿದೆ ಎಂದರು. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಂಸದೆ ಸುಮಲತಾ ಅಂಬರೀಶ್, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ,ಎಂಎಲ್‌ಸಿ ಮರಿತಿಬ್ಬೇಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

click me!