ಶಿವಮೊಗ್ಗ: ನೆರೆ ಪರಿಹಾರ ಸ್ವೀಕಾರ ಕೇಂದ್ರ ಆರಂಭ, ನೀವೂ ನೆರವಾಗಬಹುದು

By Kannadaprabha NewsFirst Published Aug 13, 2019, 12:27 PM IST
Highlights

ಶಿವಮೊಗ್ಗದ ಗೋಪಾಳ ಬಡಾವಣೆಯಲ್ಲಿ ನೆರೆ ಸಂತ್ರಸ್ತರರಿಗೆ ನೆರವಾಗುವ ನಿಟ್ಟಿನಲ್ಲಿ ಪರಿಹಾರ ಸ್ವೀಕಾರ ಕೇಂದ್ರವೊಂದನ್ನು ಆರಂಭಿಸಲಾಗಿದೆ. ಆ.13ರಿಂದ ಇದು ಕಾರ್ಯನಿರ್ವಹಿಸಲಿದ್ದು, ಹೊಸ ಪಾತ್ರೆಗಳನ್ನು, ಬಳಸದೆ ಇರುವ ಬಟ್ಟೆ, ಟೂಥ್‌ ಪೇಸ್ಟ್‌, ಬ್ರಶ್‌, ಸೋಪ್‌, ಬೆಡ್‌ಶೀಟ್‌, ಟವಲ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾರ್ವಜನಿಕರು ಇಲ್ಲಿಗೆ ತಂದು ಕೊಡಬಹುದಾಗಿದೆ.

ಶಿವಮೊಗ್ಗ(ಆ.13): ನಗರದ ಗೋಪಾಳ ಬಡಾವಣೆಯ ಲಲಿತಾ ಮಹಿಳಾ ಸಂಘದಿಂದ ‘ನೆರೆ ಸಂತ್ರಸ್ತರಿಗೆ ನೆರವಾಗಿ’ ಪರಿಹಾರ ಸ್ವೀಕಾರ ಕೇಂದ್ರವೊಂದನ್ನು ತೆರೆಯಲಾಗುತ್ತಿದೆ.

ನೆರೆ ಸಂತ್ರಸ್ತರಿಗೆ ನೆರವು ನೀಡುವ ದೃಷ್ಟಿಯಿಂದ ಮಹಿಳೆಯರು ಸೇರಿಕೊಂಡು ಈ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗೋಪಾಳ ಬಡಾವಣೆಯ ಬಸ್‌ ನಿಲ್ದಾಣದ ಎಂ.ಡಿ. ಬೇಕರಿ ಪಕ್ಕದಲ್ಲಿ ಈ ಕೇಂದ್ರ ಆ. 13 ರ ಮಂಗಳವಾರದಿಂದ ಆರಂಭಗೊಳ್ಳಲಿದೆ.

ಏನೇನು ಕೊಡಬಹುದು:

ಸಾರ್ವಜನಿಕರು ತಮ್ಮ ಮನೆಯಲ್ಲಿ ಬಳಸದೆ ಇರುವ ಹೊಸ ಪಾತ್ರೆಗಳನ್ನು, ಬಳಸದೆ ಇರುವ ಬಟ್ಟೆ, ಟೂಥ್‌ ಪೇಸ್ಟ್‌, ಬ್ರಶ್‌, ಸೋಪ್‌, ಬೆಡ್‌ಶೀಟ್‌, ಟವಲ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾರ್ವಜನಿಕರು ಇಲ್ಲಿಗೆ ತಂದು ಕೊಡಬಹುದಾಗಿದೆ. ಈ ವಸ್ತುಗಳನ್ನು ಅಗತ್ಯ ಇರುವ ನೆರೆ ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಲ್ಲಿ ಯಾವುದೇ ಕಾರಣಕ್ಕೂ ಹಣ ಸ್ವೀಕರಿಸುವುದಿಲ್ಲ. ಕೇವಲ ವಸ್ತುಗಳನ್ನು ಮಾತ್ರ ಪಡೆಯಲಾಗುವುದು. ಬೆಳಗ್ಗೆ 10.30 ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಇಲ್ಲಿ ಪದಾಧಿಕಾರಿಗಳೇ ಹಾಜರಿದ್ದು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 94498 27845, 9880274505, 94810 63405, 9731315284 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ: ಸಂಸದರ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹ

click me!